ಇದು ಕಡ್ಡಾಯವಲ್ಲ, ಆದರೂ ನಿಮ್ಮ ಸುರಕ್ಷತೆಗಾಗಿ ಬಾಡಿಗೆಗೆ ಬರುವ ಜನರ ಹಿನ್ನೆಲೆ ತಿಳಿದುಕೊಳ್ಳಿ: ಮನೆ ಮಾಲೀಕರಿಗೆ ಪೊಲೀಸರ ಎಚ್ಚರಿಕೆ

ಕಟ್ಟಡ ಮಾಲೀಕರು ಬಾಡಿಗೆದಾರರ ಹಿನ್ನೆಲೆಯನ್ನು ಕಡ್ಡಾಯವಾಗಿ ಪರಿಶೀಲಿಸಬೇಕಿಲ್ಲದಿದ್ದರೂ, ಅವರ ಸುರಕ್ಷತೆಗಾಗಿ ಪರಿಶೀಲಿಸುವುದು ಉತ್ತಮ ಎಂದು ಪೊಲೀಸ್ ಅಧಿಕಾರಿಗಳು ಸಲಹೆ ನೀಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕಟ್ಟಡ ಮಾಲೀಕರು ಬಾಡಿಗೆದಾರರ ಹಿನ್ನೆಲೆಯನ್ನು ಕಡ್ಡಾಯವಾಗಿ ಪರಿಶೀಲಿಸಬೇಕಿಲ್ಲದಿದ್ದರೂ, ಅವರ ಸುರಕ್ಷತೆಗಾಗಿ ಪರಿಶೀಲಿಸುವುದು ಉತ್ತಮ ಎಂದು ಪೊಲೀಸ್ ಅಧಿಕಾರಿಗಳು ಸಲಹೆ ನೀಡಿದ್ದಾರೆ.

ಮಂಗಳೂರು ಸ್ಫೋಟ ಪ್ರಕರಣದ ಬಳಿಕ ಹಿರಿಯ ಪೊಲೀಸ್ ಅಧಿಕಾರಿಗಳು, ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ಬಾಡಿಗೆದಾರರ ಪೂರ್ವಾಪರಗಳನ್ನು ಪರಿಶೀಲಿಸುವಂತೆ ಮಾಲೀಕರಿಗೆ ಮನವಿ ಮಾಡಿಕೊಂಡಿದ್ದಾರೆ.

ಎಲ್ಲಿಯವರೆಗೆ ಏನೂ ಆಗುವುದಿಲ್ಲ, ಅಲ್ಲಿಯವರೆಗೆ ಮಾಲೀಕರಿಗೆ ತೊಂದರೆಯಾಗುವುದಿಲ್ಲ. ಯಾವುದೇ ಅಹಿತಕರ ಘಟನೆ ಸಂಭವಿಸಿದರೆ, ಯಾವುದೇ ಪೊಲೀಸರು ಮೊದಲು ಮಾಡುವ ಕೆಲಸವೆಂದರೆ ಶಂಕಿತರು ಉಳಿದುಕೊಂಡಿರುವ ಮನೆಯನ್ನು ಪರಿಶೀಲಿಸುವುದು ಮತ್ತು ಈ ಸಂದರ್ಭದಲ್ಲಿ ಮಾಲೀಕರ ಪಾತ್ರವು ನಿರ್ಣಾಯಕವಾಗುತ್ತದೆ. ಬಾಡಿಗೆ ಒಪ್ಪಂದವನ್ನು ಮಾಡುವಾಗ ಬಾಡಿಗೆದಾರರ ಗುರುತಿನ ಪುರಾವೆಗಳನ್ನು ಸಂಗ್ರಹಿಸಲು ಮನೆ ಮಾಲೀಕರು ಎಲ್ಲಾ ಹಕ್ಕುಗಳನ್ನು ಹೊಂದಿರುತ್ತಾರೆ. ಅದರಿಂದ ಠಾಣೆಗಳಿಗೆ ತೆರಳಿ ಮಾಲೀಕರು ಮಾಹಿತಿ ಸಂಗ್ರಹಬಹುದು. ಪೊಲೀಸರು ಮಾಲೀಕರು ನೀಡುವ ದಾಖಲೆಗಳನ್ನು ಪರಿಶೀಲಿಸಿ, ಅವರ ಅಪರಾಧ ಹಿನ್ನೆಲೆಯನ್ನು ಖಚಿತಪಡಿಸುತ್ತಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತು ಹೆಚ್ಚುವರಿ ಪೊಲೀಸ್ ಆಯುಕ್ತ, ಕಾನೂನು ಮತ್ತು ಸುವ್ಯವಸ್ಥೆ (ಪೂರ್ವ) ಡಾ. ಎ ಸುಬ್ರಹ್ಮಣ್ಯೇಶ್ವರ ರಾವ್ ಅವರು ಮಾತನಾಡಿ, ಹಿನ್ನೆಲೆ ಪರಿಶೀಲನೆಯು ಒಂದು ಆಯ್ಕೆಯಾಗಿದೆ. "ಇದು ಕಡ್ಡಾಯವಲ್ಲ. ಮುಂದಿನ ದಿನಗಳಲ್ಲಿ ಈ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ನಿರ್ಧಾರಗಳ ಕುರಿತು ಚಿಂತನೆ ನಡೆಸಲಾಗುತ್ತದೆ. ಪ್ರಸ್ತುತ ನಾವು ಮಾಲೀಕರಿಗೆ ಸಲಹೆಗಳನ್ನಷ್ಟೇ ನೀಡಿದ್ದೇವೆ. ಮಾಲೀಕರು ತಮ್ಮ ಬಾಡಿಗೆದಾರರ ಹಿನ್ನೆಲೆಯನ್ನು ಪರಿಶೀಲಿಸಿದರೆ ಸುರಕ್ಷಿತರಾಗಿರುತ್ತಾರೆಂದು ಹೇಳಿದ್ದಾರೆ.

ಕಟ್ಟಡ ಮಾಲೀಕರಿಗೆ ತಮ್ಮ ಮನೆಗಳನ್ನು ಬಾಡಿಗೆಗೆ ನೀಡುವ ಮೊದಲು ಬಾಡಿಗೆದಾರರ ಪೂರ್ವಾಪರಗಳನ್ನು ಪರಿಶೀಲಿಸಲು ನಿರಂತರವಾಗಿ ಸಲಹೆಗಳನ್ನು ನೀಡುತ್ತಿದ್ದೇವೆ. ಹೆಚ್ಚಾಗಿ ವಿದೇಶಿ ಪ್ರಜೆಗಳಾಗಿರುವ ಡ್ರಗ್ ಪೆಡ್ಲರ್‌ಗಳ ನಿವಾಸಗಳ ಮೇಲೆ ದಾಳಿ ನಡೆಸಿದಾಗ, ಬಾಡಿಗೆದಾರರ ಗುರುತಿನ ಪುರಾವೆ ಇಲ್ಲದಿದ್ದರೆ ಮಾಲೀಕರ ಮೇಲೂ ಕೂಡ ಪ್ರಕರಣ ದಾಖಲಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಇತ್ತೀಚಿನ ಮಂಗಳೂರು ಸ್ಫೋಟ ಘಟನೆ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಮನೆ ಮಾಲೀಕರು ಬಾಡಿಗೆದಾರರ ಹಿನ್ನೆಲೆಯನ್ನು ಪರಿಶೀಲಿಸಬೇಕು ಎಂದು ಕಾನೂನು ಮತ್ತು ಸುವ್ಯವಸ್ಥೆ (ಪಶ್ಚಿಮ) ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹೇಳಿದ್ದಾರೆ.

ವಿದೇಶಿ ಪ್ರಜೆಗಳಿಗೆ ಬಾಡಿಗೆ ನೀಡಬೇಕಾದರೆ, ಮನೆ ಮಾಲೀಕರು ಪಾಸ್‌ಪೋರ್ಟ್‌ನ ನಕಲನ್ನು ಹಾಗೂ ಇತರ ಪ್ರಯಾಣ ದಾಖಲೆಗಳೊಂದಿಗೆ ಸಂಗ್ರಹಿಸಬೇಕು ಮತ್ತು ಸ್ಥಳೀಯರಿಗೆ ಬಾಡಿಗೆ ನೀಡುವಾಗ ಆಧಾರ್ ಕಾರ್ಡ್ ಪಡೆದುಕೊಂಡರೆ ಸಾಕಾಗುತ್ತದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com