ಯುವತಿಯ ಸಾಮೂಹಿಕ ಅತ್ಯಾಚಾರ ಪ್ರಕರಣ: ರ‍್ಯಾಪಿಡೊಗೆ ಕಾನೂನು ಸಂಕಷ್ಟ?
ಎಲೆಕ್ಟ್ರಾನಿಕ್ ಸಿಟಿಯಲ್ಲಿ 22 ವರ್ಷದ ಯುವತಿಯೊಬ್ಬಳ ಮೇಲೆ ರ‍್ಯಾಪಿಡೊ ಬೈಕ್ ಸವಾರ ಮತ್ತು ಆತನ ಸ್ನೇಹಿತ ಸಾಮೂಹಿಕ ಅತ್ಯಾಚಾರವೆಸಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೈಕ್ ಟ್ಯಾಕ್ಸಿ ಅಗ್ರಿಗೇಟರ್ ರಾಪಿಡೋಗೆ ಕಾನೂನು ಸಂಕಷ್ಟ ಎದುರಾಗಲಿದೆ.
Published: 30th November 2022 08:48 AM | Last Updated: 30th November 2022 02:28 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿಯಲ್ಲಿ 22 ವರ್ಷದ ಯುವತಿಯೊಬ್ಬಳ ಮೇಲೆ ರ‍್ಯಾಪಿಡೊ ಬೈಕ್ ಸವಾರ ಮತ್ತು ಆತನ ಸ್ನೇಹಿತ ಸಾಮೂಹಿಕ ಅತ್ಯಾಚಾರವೆಸಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೈಕ್ ಟ್ಯಾಕ್ಸಿ ಅಗ್ರಿಗೇಟರ್ ರಾಪಿಡೋಗೆ ಕಾನೂನು ಸಂಕಷ್ಟ ಎದುರಾಗಲಿದೆ.
ಬೈಕ್ ಸವಾರ ಸಾಮೂಹಿಕ ಅತ್ಯಾಚಾರದ ಪ್ರಮುಖ ಆರೋಪಿಯಾಗಿದ್ದು, ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವ ಪೊಲೀಸರು ಇದೀಗ ಆತನ ಪೂರ್ವಾಪರವನ್ನು ಪರಿಶೀಲನೆ ನಡೆಸುತ್ತಿದೆ.
ಕೆಲಸಕ್ಕೆ ನೇಮಕಾತಿ ಮಾಡಿಕೊಳ್ಳುವುದಕ್ಕೂ ಮುನ್ನ ರ‍್ಯಾಪಿಡೊ ವ್ಯಕ್ತಿಯ ಪೂರ್ವಾಪರವನ್ನು ಪರಿಶೀಲನೆ ನಡೆಸದೇ ಇರುವುದು ತಿಳಿದುಬಂದಿದೆ. ಹೀಗಾಗಿ ರ‍್ಯಾಪಿಡೊ ವಿರುದ್ಧ ಕಾನೂನು ಕ್ರಮಕ್ಕೆ ಚಿಂತನೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ರ‍್ಯಾಪಿಡೊ ಡ್ರಾಪ್ ನೆಪದಲ್ಲಿ ಯುವತಿ ಮೇಲೆ ಗ್ಯಾಂಗ್ ರೇಪ್; ಎಲೆಕ್ಟ್ರಾನಿಕ್ ಸಿಟಿ ಪೊಲೀಸರಿಂದ ಇಬ್ಬರ ಬಂಧನ
ಕೇರಳ ಮೂಲದ ಯುವತಿ ಎಸ್‌ಜಿ ಪಾಳ್ಯದಲ್ಲಿರುವ ತನ್ನ ಸ್ನೇಹಿತನನ್ನು ಭೇಟಿಯಾಗಲು ನಗರಕ್ಕೆ ಬಂದಿದ್ದರು. ರಾತ್ರಿ ಊಟದ ನಂತರ, ಅವರು ಎಲೆಕ್ಟ್ರಾನಿಕ್ ಸಿಟಿಯನ್ನು ತಲುಪಲು Rapido ಬೈಕ್ ಅನ್ನು ಬುಕ್ ಮಾಡಿದ್ದಾರೆ. ಬೈಕ್ ಹತ್ತಿದ್ದ ಯುವತಿ ಬೈಕ್ ರೈಡರ್ ಶಹಾಬುದ್ದೀನ್ ಬಳಿ ಸಿಗರೇಟ್ ಕೇಳಿದ್ದಾರೆ. ಬಳಿಕ ಬೈಕ್ ನಿಲ್ಲಿಸಿದ್ದ ಶಹಾಬುದ್ದೀನ್ ತನ್ನ ಇಬ್ಬರು ಸ್ನೇಹಿತರಿಗೆ ಸಿಗರೇಟ್ ತರುವಂತೆ ತಿಳಿಸಿದ್ದಾನೆ. ಬಳಿಕ ನನ್ನ ಸ್ನೇಹಿತರು ಸಿಗರೇಟ್ ತರುತ್ತಾರೆ. ತರುವವರೆಗೂ ಕಾಯೋಣ ಎಂದು ತನ್ನ ಮನೆಗೆ ಯುವತಿಯನ್ನು ಕರೆದುಕೊಂಡು ಹೋಗಿದ್ದಾನೆ. ಬಳಿಕ ತನ್ನ ಸ್ನೇಹಿತರೊಂದಿಗೆ ಸೇರಿಕೊಂಡು ಶಹಾಬುದ್ದೀನ್ ಯುವತಿ ಮೇಲೆ ಅತ್ಯಾಚಾರವೆಸಗಿದ್ದಾನೆ.
ಪ್ರಜ್ಞೆ ಬಂದ ನಂತರ ಯುವತಿ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.