ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣ: ಚಾರ್ಜ್​ಶೀಟ್​ನಲ್ಲಿ ಕೊಲೆಯ ಕಾರಣ ಉಲ್ಲೇಖ!

ಸರಳವಾಸ್ತು ಚಂದ್ರಶೇಖರ ಗುರೂಜಿ ಹತ್ಯೆಗೆ ಸಂಬಂಧಪಟ್ಟಂತೆ ಪೊಲೀಸ್‌ ಕಮಿಷನರೇಟ್‌ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಸಿದೆ. ಜೆಎಂಎಫ್‌ ನ್ಯಾಯಾಲಯಕ್ಕೆ ಸಲ್ಲಿಸಿರುವ ಬರೋಬ್ಬರಿ 800 ಪುಟಗಳ ಚಾಜ್‌ಶೀಟ್‌ನಲ್ಲಿ ಕೊಲೆಗೆ ಏನು ಕಾರಣ ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖವಾಗಿದೆ.
ಸರಳ ವಾಸ್ತು ಚಂದ್ರಶೇಖರ ಗುರೂಜಿ
ಸರಳ ವಾಸ್ತು ಚಂದ್ರಶೇಖರ ಗುರೂಜಿ

ಹುಬ್ಬಳ್ಳಿ: ಸರಳವಾಸ್ತು ಚಂದ್ರಶೇಖರ ಗುರೂಜಿ ಹತ್ಯೆಗೆ ಸಂಬಂಧಪಟ್ಟಂತೆ ಪೊಲೀಸ್‌ ಕಮಿಷನರೇಟ್‌ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಸಿದೆ.

ಜೆಎಂಎಫ್‌ ನ್ಯಾಯಾಲಯಕ್ಕೆ ಸಲ್ಲಿಸಿರುವ ಬರೋಬ್ಬರಿ 800 ಪುಟಗಳ ಚಾಜ್‌ಶೀಟ್‌ನಲ್ಲಿ ಕೊಲೆಗೆ ಏನು ಕಾರಣ ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖವಾಗಿದೆ.

ಜಾರ್ಜ್ ಶೀಟ್​ನಲ್ಲಿ ಪ್ರಕರಣದ ಮಹತ್ವದ ಅಂಶಗಳು ಉಲ್ಲೇಖವಾಗಿದ್ದು, ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿದ್ದ ಸರ್ವೆ ನಂಬರ್ 166/1, 5 ಎಕರೆ 11 ಗುಂಟೆ ಜಮೀನು ವಿಚಾರ ಚಂದ್ರಶೇಖರ ಗುರೂಜಿ ಕೊಲೆಗೆ ಮುಖ್ಯ ಕಾರಣ ಎಂದು ಚಾರ್ಜ್​ ಶೀಟ್​ನಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ.

ಈ ಜಮೀನು ಬಸವರೆಡ್ಡಿ ಎಂಬುವರ ಹೆಸರಿನಲ್ಲಿದ್ದು ಈತ ಸಹ ಸರಳವಾಸ್ತು ಕಂಪನಿಯ ಹಳೇ ಉದ್ಯೋಗಿಯಾಗಿದ್ದನು. ಗುರೂಜಿ ಕಂಪನಿ ಬಿಟ್ಟ ಬಳಿಕ ಮಹಾಂತೇಶ್, ಮಂಜುನಾಥ ಮತ್ತು ಬಸವರೆಡ್ಡಿ ಗುರೂಜಿ ವಿರುದ್ಧ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿದ್ದರು.

ಹೀಗಾಗಿ ಬಸವರೆಡ್ಡಿ ಹತ್ತಿರ ಇದ್ದ ಜಮೀನನ್ನು ಮಹಾಂತೇಶ್ ಹೆಸರಿಗೆ ವರ್ಗಾಯಿಸಿ ಮಾರಾಟ ಮಾಡಲು ಯೋಜನೆ ಮಾಡಿದ್ದರು ಎಂದು ಹೇಳಲಾಗಿದೆ. ಇನ್ನೂ ಈ ಕೊಲೆಯಲ್ಲಿ ಬಸವರೆಡ್ಡಿ ಪಾತ್ರವಿಲ್ಲ ಎನ್ನುವ ಅಂಶವೂ ಕೂಡ ಚಾರ್ಜ್​ ಶೀಟ್​ನಲ್ಲಿ ಪೊಲೀಸರು ಉಲ್ಲೇಖಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com