ಮೈಸೂರು ದಸರಾ ಮಾದರಿಯಲ್ಲಿ ಹಾಸನಾಂಬ ದೇಗುಲದ ಹಬ್ಬ!

ಗುರುವಾರದಿಂದ ಹಾಸನಾಂಬ ದೇವಾಲಯ ಸಾರ್ವಜನಿಕರಿಗೆ ಮುಕ್ತವಾಗಲಿದ್ದು, ಜಿಲ್ಲಾಡಳಿತ ಸಕಲ ಸಿದ್ಧತೆಗಳೂ ನಡೆಸಿವೆ. 
ಹಾಸನಾಂಬ ದೇವಾಲಯ
ಹಾಸನಾಂಬ ದೇವಾಲಯ

ಹಾಸನ: ಗುರುವಾರದಿಂದ ಹಾಸನಾಂಬ ದೇವಾಲಯ ಸಾರ್ವಜನಿಕರಿಗೆ ಮುಕ್ತವಾಗಲಿದ್ದು, ಜಿಲ್ಲಾಡಳಿತ ಸಕಲ ಸಿದ್ಧತೆಗಳೂ ನಡೆಸಿವೆ. ಹಾಸನಾಂಬ ದೇವಾಲಯದಲ್ಲಿ ಹಬ್ಬದ ಆಚರಣೆಗಳು 13 ದಿನಗಳು ನಡೆಯಲಿದ್ದು, ಅ.26 ರಂದು ದೇವಾಲಯ ಬಂದ್ ಆಗಲಿದೆ. 

ಹಾಸನ ಸಹಾಯಕ ಆಯುಕ್ತ ಜಗದೀಶ್ ಅವರ ನೇತೃತ್ವದ ದೇವಾಲಯ ನಿರ್ವಹಣಾ ಸಮಿತಿ ದೇವಾಲಯಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಭೇಟಿ ನೀಡುವ ಭಕ್ತಾದಿಗಳಿಗೆ ಸಕಲ ರೀತಿಯ ವ್ಯವಸ್ಥೆಗಳನ್ನೂ ಮಾಡಿದೆ. ದೇವಾಲಯಕ್ಕೆ ಭೇಟಿ ನೀಡಿದ ಬಳಿಕ ಜಿಲ್ಲಾಧಿಕಾರಿ ಎಂಎಸ್ ಅರ್ಚನ ಹಿರಿಯ ಅಧಿಕಾರಿಗಳ ಸಭೆ ನಡೆಸಿದ್ದು, ಇದೇ ಮೊದಲ ಬಾರಿಗೆ ದಸರಾ ಮಾದರಿಯಲ್ಲಿ 11 ದಿನಗಳ ಕಾಲ ಹಾಸನಾಂಬ ಹಬ್ಬವನ್ನು ಆಚರಿಸಲು ಜಿಲ್ಲಾಡಳಿತ ನಿರ್ಧರಿಸಿದೆ. 

ನಗರದ ಪ್ರಮುಖ ವೃತ್ತಗಳು, ಬಡಾವಣೆಗಳಿಗೆ ದೀಪಾಲಂಕಾರ ಇರಲಿದ್ದು, ಆನೆ, ಕುದುರೆ, ಸಿಂಹಗಳ ಪ್ರತಿಕೃತಿಗಳನ್ನು ಸ್ಥಾಪಿಸಲಾಗುತ್ತದೆ. ಕಳೆದ ಎರಡು ವರ್ಷಗಳ ಕಾಲ ಜಿಲ್ಲಾಡಳಿತ ಹಾಸನಾಂಬ ಹಬ್ಬವನ್ನು ಸರಳವಾಗಿ ಆಚರಿಸಿತ್ತು. ಈ ವರ್ಷ ಹಾಸನಾಂಬ ದೇವಾಲಯಕ್ಕೆ ಬೃಹತ್ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುವ ಸಾಧ್ಯತೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com