ಟೈಮ್ಸ್ ರ್ಯಾಂಕಿಂಗ್: ಭಾರತೀಯ ಸಂಸ್ಥೆಗಳಲ್ಲಿ ಐಐಎಸ್‌ಸಿಗೆ ಅಗ್ರಸ್ಥಾನ, ಐಐಟಿಗಳಿಂದ ಬಹಿಷ್ಕಾರ

ಟೈಮ್ಸ್ ಹೈಯರ್ ಎಜುಕೇಶನ್ ವರ್ಲ್ಡ್ ಯೂನಿವರ್ಸಿಟಿ ರ್ಯಾಂಕಿಂಗ್ 2023ರಲ್ಲಿ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್(ಐಐಎಸ್ ಸಿ) ಉತ್ತಮ ಸ್ಥಾನ ಪಡೆದಿದ್ದು, ಟಾಪ್ 300 ಉನ್ನತ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿನ ಸ್ಥಾನ...
ಬೆಂಗಳೂರಿನ ಐಐಎಸ್ಸಿ
ಬೆಂಗಳೂರಿನ ಐಐಎಸ್ಸಿ
Updated on

ನವದೆಹಲಿ: ಟೈಮ್ಸ್ ಹೈಯರ್ ಎಜುಕೇಶನ್ ವರ್ಲ್ಡ್ ಯೂನಿವರ್ಸಿಟಿ ರ್ಯಾಂಕಿಂಗ್ 2023ರಲ್ಲಿ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್(ಐಐಎಸ್ ಸಿ) ಉತ್ತಮ ಸ್ಥಾನ ಪಡೆದಿದ್ದು, ಟಾಪ್ 300 ಉನ್ನತ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿನ ಸ್ಥಾನ ಪಡೆದ ಭಾರತದ ಏಕೈಕ ವಿಶ್ವವಿದ್ಯಾಲಯವಾಗಿದೆ.

ದೆಹಲಿ, ಬಾಂಬೆ, ಕಾನ್ಪುರ್, ಮದ್ರಾಸ್, ಖರಗ್‌ಪುರ ಮತ್ತು ರೂರ್ಕಿ ಸೇರಿದಂತೆ ಹಲವಾರು ಐಐಟಿಗಳು ಶ್ರೇಯಾಂಕದ ನಿಯತಾಂಕಗಳಲ್ಲಿನ 'ಪಾರದರ್ಶಕತೆ' ಕೊರತೆ ಉಲ್ಲೇಖಿಸಿ ಸತತ ಮೂರನೇ ವರ್ಷವೂ ಟೈಮ್ಸ್ ರ್ಯಾಂಕಿಂಗ್ ಅನ್ನು ಬಹಿಷ್ಕರಿಸಿವೆ.

ಆದರೆ ಬಹಿಷ್ಕಾರದ ನಡುವೆಯೂ ಏಳು ಐಐಟಿಗಳು ಈ ಬಾರಿ ಉತ್ತಮ ಸಾಧನೆ ಮಾಡಿವೆ. ಅವುಗಳೆಂದರೆ ಐಐಟಿ ರೋಪರ್ 501-600), ಐಐಟಿ ಇಂದೋರ್ (601-800), ಐಐಟಿ ಗಾಂಧಿನಗರ ((801-1000), ಐಐಟಿ ಪಾಟ್ನಾ (801-1000), ಐಐಟಿ ಭುವನೇಶ್ವರ (1001-1200, ಎರಡು ವರ್ಷ ಗೈರುಹಾಜರಾದ ನಂತರ ಈ ವರ್ಷ ಮತ್ತೆ ಸೇರ್ಪಡೆಗೊಂಡ ಐಐಟಿ ಗುವಾಹಟಿ (1001-1200), ಮತ್ತು ಐಐಟಿ ಮಂಡಿ (1001-1200) ಟೈಮ್ಸ್ ರ್ಯಾಂಕಿಂಗ್ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

ಕಳೆದ ವರ್ಷ ಐಐಟಿ ರೋಪರ್(351-400) ಭಾರತದ ಉನ್ನತ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿತ್ತು ಮತ್ತು ಜಾಗತಿಕವಾಗಿ 14ನೇ ಸ್ಥಾನವನ್ನು ಪಡೆದುಕೊಂಡಿತ್ತು. ಆದರೆ ಈ ವರ್ಷ ಅಗ್ರ ಸ್ಥಾನವನ್ನು ಕಳೆದುಕೊಂಡಿದೆ.

ಟೈಮ್ಸ್ ಹೈಯರ್ ಎಜುಕೇಶನ್ ವರ್ಲ್ಡ್ ಯೂನಿವರ್ಸಿಟಿ ರ್ಯಾಂಕಿಂಗ್ ಪಟ್ಟಿಯಲ್ಲಿ ಭಾರತದ 75 ಸಂಸ್ಥೆಗಳು ಸ್ಥಾನ ಪಡೆದಿದ್ದು, ಭಾರತ ಪಟ್ಟಿಯಲ್ಲಿ 6ನೇ ಅತಿ ಹೆಚ್ಚು ಸಂಸ್ಥೆಗಳನ್ನು ಪ್ರತಿನಿಧಿಸುವ ದೇಶವಾಗಿದೆ. 2020 ರಲ್ಲಿ, 56 ವಿಶ್ವವಿದ್ಯಾಲಯಗಳು ಭಾಗವಹಿಸಿದ್ದವು ಮತ್ತು 2017 ರಲ್ಲಿ ಕೇವಲ 31 ವಿವಿಗಳು ಸ್ಥಾನ ಪಡೆದಿದ್ದವು.

ಈ ಬಾರಿ ಐಐಎಸ್ ಸಿಯನ್ನು 251-300 ಬ್ರಾಕೆಟ್‌ನಲ್ಲಿ ಇರಿಸಲಾಗಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಒಂದು ಶ್ರೇಯಾಂಕ ಬ್ಯಾಂಡ್ ಅನ್ನು ಜಿಗಿದಿದ್ದು, ಟಾಪ್ 300 ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಸಂಸ್ಥೆಯಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com