ಶಿಕ್ಷಕರ ನೇಮಕಾತಿಯಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಸರ್ಕಾರದಿಂದ ಮಹಾ ದ್ರೋಹ: ಕಾಂಗ್ರೆಸ್ ಆರೋಪ

ಶಿಕ್ಷಕರ ನೇಮಕಾತಿಯಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಸರ್ಕಾರ ಮಹಾ ದ್ರೋಹ ಎಸಗುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಶಿಕ್ಷಕರ ನೇಮಕಾತಿಯಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಸರ್ಕಾರ ಮಹಾ ದ್ರೋಹ ಎಸಗುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಈ ಸಂಬಂಧ  ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಸರಣಿ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್,  ಇರುವ ನಿಯಮ ಮೀರಿ ತಂದೆಯ ಜಾತಿಯ ಬದಲು ಪತಿಯ ಜಾತಿ ಪ್ರಮಾಣ ಪತ್ರ ಸಲ್ಲಿಸಲು ಏಕಾಏಕಿ ಹೊಸದಾಗಿ ಹೇಳುತ್ತಿದೆ. ಇದರಿಂದಾಗಿ  ಈಗಾಗಲೇ ತಂದೆಯ ಜಾತಿ ಪ್ರಮಾಣ ಪತ್ರ ಸಲ್ಲಿಸಿದವರಲ್ಲಿ ಗೊಂದಲ ಸೃಷ್ಟಿಯಾಗಿದೆ. ಶೇ.40 ಕಮೀಷನ್ ಗಾಗಿ ಈ ಗೊಂದಲ್ಲ ಸೃಷ್ಟಿಸಿದ್ದೀರಾ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರನ್ನು ಪ್ರಶ್ನಿಸಿದೆ.

ಅಭ್ಯರ್ಥಿಗಳ ಮೀಸಲಾತಿ ಹಕ್ಕುಗಳನ್ನು ಕಿತ್ತುಕೊಳ್ಳುವ ಹುನ್ನಾರದಲ್ಲಿ ಬಲವಂತವಾಗಿ ಸಾಮಾನ್ಯ ವರ್ಗದಲ್ಲಾದರೂ ಪರಿಗಣಿಸಿ ಎಂದು ಬಲವಂತವಾಗಿ ಬರೆಸಿಕೊಂಡಿದೆ. ಇದು ಮೀಸಲಾತಿ ಹಕ್ಕು ಮೊಟಕುಗೊಳಿಸಲು ಮಾಡಿದ ಷಡ್ಯಂತ್ರವೇ? ಅಥವಾ ಹುದ್ದೆ ಮಾರಾಟ ಯೋಜನೆಯ ಮುಂದುವರೆದ ಹುನ್ನಾರವೇ? ಎಂದು ಕೇಳಿದೆ. 

ಸಾಲು ಸಾಲು ನೇಮಕಾತಿ ಅಕ್ರಮ ನಡೆಸಿದ ಸರ್ಕಾರ ಶಿಕ್ಷಕರ ನೇಮಕಾತಿಯಲ್ಲೂ ಹಣ ಪೀಕಲು ಇಲ್ಲದ, ಸಲ್ಲದ ನಿಯಮ ಹೇರುತ್ತಿದೆಯೇ? ಜಾತಿ ಪ್ರಮಾಣ ಪತ್ರದಲ್ಲಿ ಸೃಷ್ಟಿಯಾದ ಗೊಂದಲ ಪ್ರಶ್ನಿಸಿದ ಅಭ್ಯರ್ಥಿಗಳೊಂದಿಗೆ ಧೂರ್ತತನದಿಂದ ವರ್ತಿಸಿದ ಸಚಿವ ಬಿ. ಸಿ. ನಾಗೇಶ್ ಅವರಿಗೆ ಕನಿಷ್ಠ ಪ್ರಜ್ಞಾವಂತಿಕೆ ಇಲ್ಲವೇ? ಅಥವಾ ಕಮಿಷನ್ ಆಸೆಗಾಗಿ ಈ ನಾಟಕವೇ? ಎಂದು ಕಾಂಗ್ರೆಸ್ ಟೀಕಾ ಪ್ರಹಾರ ನಡೆಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com