ಕರ್ನಾಟಕ: ಎರಡು ಅಂತಾರಾಜ್ಯ ಜಲ ಹಂಚಿಕೆ ಸಭೆ; ಗೋದಾವರಿ-ಕಾವೇರಿ ಸಂಪರ್ಕ ಯೋಜನೆ ಜಾರಿಗೆ ಸಹಮತ

ನೀರು ಹಂಚಿಕೆ ಸಂಬಂಧ ರಾಜ್ಯ ಸರ್ಕಾರ ತನ್ನ ಪಾಲುದಾರ ಇತರ ರಾಜ್ಯಗಳ ಜೊತೆಗೆ ಎರಡು ಉನ್ನತ ಮಟ್ಟದ ಸಭೆಗಳನ್ನು ನಡೆಸಿದೆ. ನಾಲ್ಕನೇ ಸಮಾಲೋಚನಾ ಸಭೆಯಲ್ಲಿ ಗೋದಾವರಿ(ಇಂಚಂಪ್ಲಿ)-ಕಾವೇರಿ (ಬೃಹತ್ ಅಣೆಕಟ್ಟು)ಸಂಪರ್ಕ ಯೋಜನೆ ಜಾರಿಗೆ ಸಹಮತಕ್ಕೆ ಬರಲಾಯಿತು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ನೀರು ಹಂಚಿಕೆ ಸಂಬಂಧ ರಾಜ್ಯ ಸರ್ಕಾರ ತನ್ನ ಪಾಲುದಾರ ಇತರ ರಾಜ್ಯಗಳ ಜೊತೆಗೆ ಎರಡು ಉನ್ನತ ಮಟ್ಟದ ಸಭೆಗಳನ್ನು ನಡೆಸಿದೆ. ನಾಲ್ಕನೇ ಸಮಾಲೋಚನಾ ಸಭೆಯಲ್ಲಿ ಗೋದಾವರಿ(ಇಂಚಂಪ್ಲಿ)-ಕಾವೇರಿ (ಬೃಹತ್ ಅಣೆಕಟ್ಟು)ಸಂಪರ್ಕ ಯೋಜನೆ ಜಾರಿಗೆ ಸಹಮತಕ್ಕೆ ಬರಲಾಯಿತು.

ರಾಷ್ಟ್ರೀಯ ಜಲ ಅಭಿವೃದ್ಧಿ ಪ್ರಾಧಿಕಾರದ ಮಹಾ ನಿರ್ದೇಶಕ ಭೋಪಾಲ್ ಸಿಂಗ್, ಕರ್ನಾಟಕ, ತೆಲಂಗಾಣ, ಆಂಧ್ರ ಪ್ರದೇಶ, ತಮಿಳು ನಾಡು, ಮಹಾರಾಷ್ಟ್ರ, ಒಡಿಶಾ, ಚತ್ತೀಸ್ ಗಢ ಮತ್ತು ಮಧ್ಯ ಪ್ರದೇಶ ರಾಜ್ಯಗಳ ಅಧಿಕಾರಿಗಳು ಭಾಗವಹಿಸಿದ್ದರು.

141 ಟಿಎಂಸಿ ಅಡಿ ಗೋದಾವರಿ ಹೆಚ್ಚುವರಿ ನೀರನ್ನು ಕೃಷ್ಣಾ, ಕಾವೇರಿ ಮತ್ತು ಪೆನ್ನಾರ್ ಜಲಾನಯನ ಪ್ರದೇಶಗಳಿಗೆ ತಿರುಗಿಸಲು ಉದ್ದೇಶಿಸಿರುವ ಗೋದಾವರಿ-ಕಾವೇರಿ ಜೋಡಣೆ ಯೋಜನೆ ಅನುಷ್ಠಾನಕ್ಕೆ ಒಮ್ಮತಕ್ಕೆ ಬರಲು ಸಭೆ ನಡೆಸಲಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ತುಂಗಭದ್ರಾ ಅಣೆಕಟ್ಟಿನಲ್ಲಿ ಹೂಳು ತೆಗೆಯಲು ಸಮತೋಲನ ಜಲಾಶಯ ನಿರ್ಮಿಸುವ ಕುರಿತು ಎರಡನೇ ಸಭೆ ನಡೆಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com