ಬೆಂಗಳೂರಿನ ಸ್ಯಾಂಕಿ ಟ್ಯಾಂಕ್ ರಸ್ತೆಯಲ್ಲಿ ಸತತ ಭೂಕುಸಿತ, ನಿವಾಸಿಗಳಲ್ಲಿ ಆತಂಕ

ನಗರದ ಪ್ರಸಿದ್ಧ ಸ್ಯಾಂಕಿ ಟ್ಯಾಂಕ್ ರಸ್ತೆಯಲ್ಲಿ ಕಳೆದ ನಾಲ್ಕು ವಾರಗಳಲ್ಲಿ ಭಾರೀ ಮಳೆಯಿಂದ  ರಸ್ತೆ ಕುಸಿದು ಗುಂಡಿ ಬಿದ್ದು  ವೈಯಾಲಿಕಾವಲ್‌ನ ಪಕ್ಕದ ತಗ್ಗು ಪ್ರದೇಶದಲ್ಲಿ ವಾಸಿಸುವ ಜನರಿಗೆ ಆತಂಕ ಶುರುವಾಗಿದೆ. 
ಸ್ಯಾಂಕಿ ಟ್ಯಾಂಕ್ ಹತ್ತಿರ ಭಾರೀ ಭೂಕುಸಿತ
ಸ್ಯಾಂಕಿ ಟ್ಯಾಂಕ್ ಹತ್ತಿರ ಭಾರೀ ಭೂಕುಸಿತ

ಬೆಂಗಳೂರು: ನಗರದ ಪ್ರಸಿದ್ಧ ಸ್ಯಾಂಕಿ ಟ್ಯಾಂಕ್ ರಸ್ತೆಯಲ್ಲಿ ಕಳೆದ ನಾಲ್ಕು ವಾರಗಳಲ್ಲಿ ಭಾರೀ ಮಳೆಯಿಂದ  ರಸ್ತೆ ಕುಸಿದು ಗುಂಡಿ ಬಿದ್ದು  ವೈಯಾಲಿಕಾವಲ್‌ನ ಪಕ್ಕದ ತಗ್ಗು ಪ್ರದೇಶದಲ್ಲಿ ವಾಸಿಸುವ ಜನರಿಗೆ ಆತಂಕ ಶುರುವಾಗಿದೆ. 

ಅದೇ ರೀತಿ ಅತಿಕ್ರಮಣಗಾರರಿಗೆ ಎಚ್ಚರಿಕೆಯ ಗಂಟೆಯನ್ನು ಬಾರಿಸಿದೆ. ಪ್ರಸಿದ್ಧ ಚೌಡಯ್ಯ ಸ್ಮಾರಕ ಭವನದ ಸುತ್ತಮುತ್ತ ವೈಯಾಲಿಕಾವಲ್‌ನಿಂದ 37 ಎಕರೆ ಪ್ರದೇಶದಲ್ಲಿ ಹರಡಿರುವ ಕೆರೆ ನೀರನ್ನು ಬೇರ್ಪಡಿಸುವ ಅಣೆಕಟ್ಟಿನ ರಚನೆಯ ಮೇಲೆ ರಸ್ತೆ ಇದೆ.

ಕಳೆದ ತಿಂಗಳು ಸ್ಯಾಂಕಿ ಟ್ಯಾಂಕ್ ರಸ್ತೆಯಲ್ಲಿ ಎರಡು ಕಡೆ ಭೂಕುಸಿತವುಂಟಾಗಿ ಯಶವಂತಪುರದ ಕಡೆಗೆ ಸಂಚಾರವನ್ನು ಮುಚ್ಚಲಾಗಿತ್ತು.  ರಸ್ತೆ ಕುಸಿದು ಗುಂಡಿ ಬಿದ್ದಿರುವ ಪರಿಣಾಮ ಈ ಭಾಗದಲ್ಲಿ ಸಂಚಾರ ಸ್ಥಗಿತಗೊಂಡಿದೆ. ಸದಾಶಿವನಗರ ಜಂಕ್ಷನ್ ನಿಂದ ಮಲ್ಲೇಶ್ವರ 18ನೇ ಕ್ರಾಸ್ ಗೆ ಸಂಪರ್ಕ ಕಲ್ಪಿಸುವ ಮಾರ್ಗ ಬಂದ್ ಮಾಡಲಾಗಿದೆ. 

ಬಿಬಿಎಂಪಿ ಮುಖ್ಯ ಇಂಜಿನಿಯರ್ (ರಸ್ತೆ ಮತ್ತು ಮೂಲಸೌಕರ್ಯ) ಬಿ.ಎಸ್.ಪ್ರಹ್ಲಾದ್ ಮಾತನಾಡಿ, ಸ್ಯಾಂಕಿ ಟ್ಯಾಂಕ್ ರಸ್ತೆಯಲ್ಲಿ ಭೂಕುಸಿತ ಗಂಭೀರ ಸಮಸ್ಯೆಯಾಗಿದೆ. ನಾವು ಅದನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ರಸ್ತೆಯ ಕೆಳಗೆ ಕೆಲವು ಸೋರುವಿಕೆ ಸಂಭವಿಸುತ್ತಿದೆ, ಇನ್ನೂ ಸ್ಥಳವನ್ನು ಗುರುತಿಸಬೇಕಾಗಿದೆ. ಸೋರುವಿಕೆ ಎಲ್ಲಿಯಾದರೂ ಇರಬಹುದು, ಇದು ರಸ್ತೆಯ ಕೆಲವು ಭಾಗಗಳ ಮೇಲೆ ಪರಿಣಾಮ ಬೀರುತ್ತದೆ.ಇಳಿಜಾರಿನಲ್ಲಿರುವ ಮರಗಳ ಬೇರುಗಳಿಂದ ಭೂಕುಸಿತವುಂಟಾಗಿ ಸೋರಿಕೆಯಾಗುತ್ತಿದೆ ಎಂದು ಹೇಳಲಾಗುತ್ತಿದೆ ಎಂದರು.

ಸ್ಯಾಂಕಿ ಟ್ಯಾಂಕ್‌ ಪ್ರದೇಶಗಳ ಅಭಿವೃದ್ಧಿ ಅವೈಜ್ಞಾನಿಕ
ಕಳೆದ ತಿಂಗಳು ಭಾರಿ ಮಳೆಯ ಸಮಯದಲ್ಲಿ ರಸ್ತೆಯು ಮುಳುಗಡೆಗಳಿಗೆ ಸಾಕ್ಷಿಯಾಗಿತ್ತು. ಪ್ರವಾಹ ಮತ್ತು ಇತರ ಸಮಸ್ಯೆ ಒಂದೆಡೆಯಾದರೆ ಸಮೀಪದ ರಾಜಕಾಲುವೆಗೆ ಒಳಚರಂಡಿ ಸಮಸ್ಯೆ ಕೂಡ ಮತ್ತೊಂದಾಗಿತ್ತು. 

ಚೌಡಯ್ಯ ಸ್ಮಾರಕ ಭವನದ ಬಳಿ ಇರುವ ಸಿಪಿಐ, ಕರ್ನಾಟಕ ರಾಜ್ಯ ಪರಿಷತ್ತಿನ ಕಾರ್ಯಕಾರಿ ಸದಸ್ಯ ಶಿವರಾಜ್ ಆರ್ ಬಿರಾದಾರ್, ‘ಕಳೆದ ಎರಡು ವರ್ಷಗಳಿಂದ ಈ ಭಾಗದಲ್ಲಿ ಅತಿವೃಷ್ಟಿ ಮತ್ತಿತರ ಸಮಸ್ಯೆಗಳು ಉಂಟಾಗಿವೆ. ಕೆರೆಯ ಅಭಿವೃದ್ಧಿ. ಸರೋವರದ ಪರಿಧಿಯಲ್ಲಿ ಉದ್ಯಾನವನ ಮತ್ತು ವಾಕ್‌ವೇಗೆ ಹೆಚ್ಚುವರಿ ಕಾಂಕ್ರೀಟ್‌ನಿಂದ ಕೆರೆಯು ಚಿಕ್ಕದಾಗುತ್ತಿದೆ, ನೀರು ಹೋಗಲು ಕಡಿಮೆ ಸ್ಥಳವಾಗಿದೆ. ಕಟ್ಟಡಗಳು ಕೆರೆಯ ಕೆಳಭಾಗದ ಮಟ್ಟದಲ್ಲಿವೆ.

ಈ ಪ್ರದೇಶದ ಸಂಪೂರ್ಣ ಅಭಿವೃದ್ಧಿಯು ಅತ್ಯಂತ ಅವೈಜ್ಞಾನಿಕವಾಗಿದೆ. ಸಂಪೂರ್ಣ ರಸ್ತೆ ಕುಸಿದರೆ, ಅನೇಕರು ಸ್ಥಳಾಂತರಗೊಳ್ಳುವುದರೊಂದಿಗೆ ಪ್ರದೇಶವು ಜಲಾವೃತಗೊಳ್ಳುತ್ತದೆ ಎಂದು ಅವರು TNIE ಗೆ ತಿಳಿಸಿದರು. ಉದ್ಯಾನದ ಅಭಿವೃದ್ಧಿಯಿಂದ ಕೆರೆಗೆ ಹಾನಿಯಾಗಿದೆ ಎಂದು ಸಮೀಪದ ಸ್ಟೆಲ್ಲಾ ಮಾರಿಸ್ ಶಾಲೆಯ ಸಿಬ್ಬಂದಿ ಹೇಳುತ್ತಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com