ಕಲಬುರಗಿಯಲ್ಲಿ ಬೆಳೆಯುವ ತೊಗರಿ ಬೇಳೆಗೆ 'ಭೀಮಾ ಪಲ್ಸಸ್‌' ಎಂದು ಬ್ರಾಂಡ್

ರೈತರಿಗೆ ಉತ್ತಮ ಬೆಲೆ ಸಿಗುವಂತೆ ಮಾಡಲು ಕಲಬುರಗಿಯಲ್ಲಿ ಬೆಳೆಯುವ ತೊಗರಿ ಬೇಳೆಯನ್ನು ‘ಭೀಮಾ ಪಲ್ಸಸ್’ (ಭೀಮಾ ದ್ವಿದಳ ಧಾನ್ಯ) ಬ್ರಾಂಡ್‌ ಅಡಿಯಲ್ಲಿ ಭೌಗೋಳಿಕ ಸೂಚ್ಯಂಕ (ಜಿಐ) ಟ್ಯಾಗ್‌ನೊಂದಿಗೆ ಸರ್ಕಾರ ಬಿಡುಗಡೆ ಮಾಡಲಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಬುಧವಾರ ಹೇಳಿದ್ದಾರೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಬೆಂಗಳೂರು: ರೈತರಿಗೆ ಉತ್ತಮ ಬೆಲೆ ಸಿಗುವಂತೆ ಮಾಡಲು ಕಲಬುರಗಿಯಲ್ಲಿ ಬೆಳೆಯುವ ತೊಗರಿ ಬೇಳೆಯನ್ನು ‘ಭೀಮಾ ಪಲ್ಸಸ್’ (ಭೀಮಾ ದ್ವಿದಳ ಧಾನ್ಯ) ಬ್ರಾಂಡ್‌ ಅಡಿಯಲ್ಲಿ ಭೌಗೋಳಿಕ ಸೂಚ್ಯಂಕ (ಜಿಐ) ಟ್ಯಾಗ್‌ನೊಂದಿಗೆ ಸರ್ಕಾರ ಬಿಡುಗಡೆ ಮಾಡಲಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಬುಧವಾರ ಹೇಳಿದ್ದಾರೆ.

ಈ ಭಾಗದ ರೈತರನ್ನು ಕೃಷಿ ಉತ್ಪನ್ನ ಕಂಪನಿಗಳ ಮೂಲಕ ನೋಂದಾಯಿಸಿ, ಅವರಿಂದಲೇ ನೇರವಾಗಿ ತೊಗರಿಯನ್ನು ಖರೀದಿಸಲಾಗುತ್ತದೆ. ಮೊತ್ತವನ್ನು ಅವರ ಖಾತೆಗೆ ಜಮಾ ಮಾಡಲಾಗುವುದು ಎಂದು ಸುದ್ದಿಗಾರರಿಗೆ ತಿಳಿಸಿದರು.

ಕಲಬುರಗಿಯ ಕರ್ನಾಟಕ ದ್ವಿದಳ ಧಾನ್ಯಗಳ ಅಭಿವೃದ್ಧಿ ಮಂಡಳಿಗೆ ‘ಭೀಮಾ ಪಲ್ಸಸ್‌’ ಬ್ರಾಂಡ್ ಅಭಿವೃದ್ಧಿಪಡಿಸಲು ಸರ್ಕಾರ 200 ಕೋಟಿ ರೂ. ಮೀಸಲಿಟ್ಟಿದೆ.

'ಪ್ರತಿ 100 ಗ್ರಾಂ ಬೇಳೆಗೆ 21 ಗ್ರಾಂ ಪ್ರೋಟೀನ್, 170 ಮಿಗ್ರಾಂ ಕೊಬ್ಬು, 130 ಮಿಗ್ರಾಂ ಕ್ಯಾಲ್ಸಿಯಂ ಅನ್ನು ಒಳಗೊಂಡಿರುವ ತೊಗರಿ ಬೇಳೆಯನ್ನು ಮೂರು ವಿಧಗಳಲ್ಲಿ ಗ್ರಾಹಕರಿಗೆ ಸಮಂಜಸವಾದ ಬೆಲೆಯಲ್ಲಿ ಬಿಡುಗಡೆ ಮಾಡಲಾಗುವುದು' ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com