"ದಿವ್ಯ ಕಾಶಿ- ಭವ್ಯ ಕಾಶಿ" ದರ್ಶನ: ಮುಂದಿನ ತಿಂಗಳು 11 ರಿಂದ ರೈಲು ಪ್ರಾರಂಭ- ಶಶಿಕಲಾ ಜೊಲ್ಲೆ

ರಾಜ್ಯದ ಧಾರ್ಮಿಕ ದತ್ತಿ ಇಲಾಖೆ ವತಿಯಿಂದ 5 ಸಾವಿರ ರೂ. ಸಹಾಯಧನದೊಂದಿಗೆ ರಾಜ್ಯದ ಭಕ್ತಾಧಿಗಳಿಗೆ  ದಿವ್ಯ ಕಾಶಿ- ಭವ್ಯ ಕಾಶಿ ದರ್ಶನ ಕಾರ್ಯಕ್ರಮ ಆಯೋಜಿಸಲಾಗಿದ್ದು, ಮುಂದಿನ ತಿಂಗಳು 11 ರಿಂದ ರೈಲು ಪ್ರಾರಂಭವಾಗಲಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.
ಶಶಿಕಲಾ ಜೊಲ್ಲೆ
ಶಶಿಕಲಾ ಜೊಲ್ಲೆ

ಬೆಂಗಳೂರು: ರಾಜ್ಯದ ಧಾರ್ಮಿಕ ದತ್ತಿ ಇಲಾಖೆ ವತಿಯಿಂದ 5 ಸಾವಿರ ರೂ. ಸಹಾಯಧನದೊಂದಿಗೆ ರಾಜ್ಯದ ಭಕ್ತಾಧಿಗಳಿಗೆ  ದಿವ್ಯ ಕಾಶಿ- ಭವ್ಯ ಕಾಶಿ ದರ್ಶನ ಕಾರ್ಯಕ್ರಮ ಆಯೋಜಿಸಲಾಗಿದ್ದು, ಮುಂದಿನ ತಿಂಗಳು 11 ರಿಂದ ರೈಲು ಪ್ರಾರಂಭವಾಗಲಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.

ರೈಲು  ಪ್ಯಾಕೇಜ್ ದರ ರೂ.15,000 ಆಗಿದ್ದು, 8 ದಿನಗಳ ವಿಶೇಷ ಟೂರ್ ಪ್ಯಾಕೇಜ್ ನಲ್ಲಿ ಸಂಪೂರ್ಣ ಪ್ರಯಾಣ, ತಿಂಡಿ, ಊಟ, ವಸತಿ, ದರ್ಶನ ಹಾಗೂ ವಿಮೆ ಒಳಗೊಂಡಿರುತ್ತದೆ ಎಂದು ಅವರು ಹೇಳಿದ್ದಾರೆ.

ಕಡಿಮೆ ವೆಚ್ಚದಲ್ಲಿ ಕಾಶಿ ವಿಶ್ವನಾಥ, ಅಯೋಧ್ಯೆ, ರಾಮಲಲ್ಲಾ ಮತ್ತು ಪ್ರಯಾಗ ರಾಜ್ ದೈವ ಭೂಮಿಯ ವೈಭವ ಸವಿಯುವ ಸದಾವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಅವರು ವಿನಂತಿಸಿಕೊಂಡಿದ್ದಾರೆ.

ಕರ್ನಾಟಕ - ಭಾರತ್ ಗೌರವ್ ಕಾಶಿ ದರ್ಶನ ವಿಶೇಷ ರೈಲು ಪ್ಯಾಕೇಜ್ ಬುಕ್ ಮಾಡಲು: https://bit.ly/3TRslIG ಸಂಪರ್ಕಿಸಬಹುದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com