ಶಿವರಾಮ ಕಾರಂತ ಲೇಔಟ್ ನಿರ್ಮಾಣಕ್ಕಾಗಿ ಭೂ ಸ್ವಾಧೀನ: ಬಿಡಿಎ ನಡೆಗೆ ಗಾಣಿಗರಹಳ್ಳಿ ನಿವೇಶನ ಮಾಲೀಕರ ಆಕ್ಷೇಪ

ಕೆಲ ದಿನಗಳ ಹಿಂದೆ ಡಾ.ಶಿವರಾಮ ಕಾರಂತ ಲೇಔಟ್ ನಿರ್ಮಾಣಕ್ಕಾಗಿ ಬಿಡಿಎನಿಂದ ತಮ್ಮ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ ಎಂಬ ಸುದ್ದಿ ಯಶವಂತಪುರ ಹೋಬಳಿ ಗಾಣಿಗರಹಳ್ಳಿಯ ಸುಮಾರು 200 ನಿವೇಶನ ಮಾಲೀಕರನ್ನು ಆತಂಕ್ಕ ತಳ್ಳಿತ್ತು.
ಬಿಡಿಎ ಬಳಿ ಪ್ರತಿಭಟನೆ ನಡೆಸುತ್ತಿರುವ ನಿವೇಶನ ಮಾಲೀಕರು
ಬಿಡಿಎ ಬಳಿ ಪ್ರತಿಭಟನೆ ನಡೆಸುತ್ತಿರುವ ನಿವೇಶನ ಮಾಲೀಕರು

ಬೆಂಗಳೂರು: ಕೆಲ ದಿನಗಳ ಹಿಂದೆ ಡಾ.ಶಿವರಾಮ ಕಾರಂತ ಲೇಔಟ್ ನಿರ್ಮಾಣಕ್ಕಾಗಿ ಬಿಡಿಎನಿಂದ ತಮ್ಮ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ ಎಂಬ ಸುದ್ದಿ ಯಶವಂತಪುರ ಹೋಬಳಿ ಗಾಣಿಗರಹಳ್ಳಿಯ ಸುಮಾರು 200 ನಿವೇಶನ ಮಾಲೀಕರನ್ನು ಆತಂಕ್ಕ ತಳ್ಳಿತ್ತು. ಲೇಔಟ್  ನಿರ್ಮಾಣಕ್ಕಾಗಿ 2008ರಲ್ಲಿ ಹೊರಡಿಸಲಾದ ಅಂತಿಮ ಅಧಿಸೂಚನೆಯಲ್ಲಿ ಅವರ ಭೂಮಿ ಸ್ವಾಧೀನ ಪಟ್ಟಿಯಿಂದ ಕೈ ಬಿಟ್ಟಿರುವುದರಿಂದ ತಮ್ಮ ಭೂಮಿ ಸುರಕ್ಷಿತ ಎಂದು ಅವರು ಭಾವಿಸಿದ್ದರು. ಅನೇಕ ಮಂದಿ ಅಲ್ಲಿ ಮನೆಗಳನ್ನು ಕೂಡಾ ಕಟ್ಟಿದ್ದಾರೆ.

ಸರ್ವೇ ನಂಬರ್ 72ರಲ್ಲಿನ ನಿವೇಶನ ಮತ್ತು ಮಾಲೀಕತ್ವ ಸಂಬಂಧ ಅವರು ಆಕ್ಷೇಪ ಸಲ್ಲಿಸಿದ್ದಾರೆ.  ಸುಮಾರು 70 ಭೂ ಮಾಲೀಕರು ವಿವಿಧ ಹಂತಗಳಲ್ಲಿ ಈ ಕಂದಾಯ ನಿವೇಶನಗಳನ್ನು ಖರೀದಿಸಿದ್ದಾರೆ. ಬುಧವಾರ ಬಿಡಿಎ ಬಳಿ ಪ್ರತಿಭಟನೆ ನಡೆಸಿದ ನಿವೇಶನ ಮಾಲೀಕರು, ತಮ್ಮ ಭೂ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಅನೇಕ ದಾಖಲೆಗಳನ್ನು ಸಲ್ಲಿಸಿದರು. 

1977ರಲ್ಲಿ ಎಸ್ ಸಿ, ಎಸ್ ಟಿ ಕೆಟಗರಿ ಅಡಿಯಲ್ಲಿ ಸರ್ಕಾರದಿಂದ ಹಂಚಿಕೆಯಾದ ಈ ಭೂಮಿಯ ಮೌಲ್ಯದ ಬಗ್ಗೆ ಖಚಿತತೆ ಇಲ್ಲ. ಎನ್. ಸಿ. ಮುನಿರತ್ನ ಹೆಸರಿನಲ್ಲಿ ಕುಟುಂಬದವರೆಲ್ಲಾ ಸೇರಿ ಭೂಮಿ ಖರೀದಿಸಿದ್ದು, ನಂತರ ಪ್ರತಿಯೊಬ್ಬರು 30 ಗುಂಟೆಯಂತೆ ಹಂಚಿಕೊಂಡಿದ್ದೇವು. ಮಾರಾಟ ಮಾಡಿರುವುದು ನಮ್ಮ ಹೆಸರಿನಲ್ಲಿದೆ. ಆದರೆ, ಖಾತಾ ಮಾತ್ರ ಈಗಲೂ ಮೂಲ ಹಂಚಿಕೆದಾರರು ಹೆಸರಿನಲ್ಲಿದೆ ಎಂದು ನಿವೇಶನದ ಮಾಲೀಕರಾದ ಎಸ್. ಚಂದ್ರಶೇಖರ್  ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು. 

ಐದು ದಶಕಗಳ ಹಿಂದೆ ಹಂಚಿಕೆಯಾಗಿರುವ ಭೂಮಿಗೆ ಈಗ ನೋಟಿಸ್ ಕಳುಹಿಸಲಾಗಿದೆ. ಶಿವರಾಮ ಕಾರಂತ ಲೇಔಟ್ ಗಾಗಿ ಬಿಡಿಎ ನಮ್ಮ ಭೂಮಿ ಸ್ವಾಧೀನಪಡಿಸಿಕೊಳ್ಳಲು ನಾವು ಕೊಡ್ಡಲ. ಒಂದು ವೇಳೆ ಪರ್ಯಾಯ ಆಯ್ಕೆ ಇಲ್ಲದಿದ್ದಲೆ ಡಾ. ಶಿವರಾಮ ಕಾರಂತ ಲೇಔಟ್ ನಿರ್ಮಾಣವಾದ ನಂತರ ಅಲ್ಲಿಯೇ ನಿವೇಶನ ಕೊಡಬೇಕೆಂದು ನಮ್ಮ ಬೇಡಿಕೆಯಾಗಿದೆ ಎಂದು ಅವರು ಹೇಳಿದರು. 

14 ವರ್ಷಗಳ ಹಿಂದೆ ಹೊರಡಿಸಲಾದ ನೋಟಿಫಿಕೇಷನ್ ನಲ್ಲಿ ಕೆಲವೊಂದು ಜಾಗ ಕೈ ಬಿಟ್ಟಿದ್ದು, ಅವುಗಳನ್ನು ಇದೀಗ ವಶಕ್ಕೆ ಪಡೆಯುವುದು ಅಗತ್ಯವಾಗಿದೆ. ಈ ವಿಚಾರದ ಬಗ್ಗೆ ಗಮನ ಹರಿಸಿ, ಅವುಗಳನ್ನು ಕೈ ಬಿಡಲು ಪ್ರಯತ್ನಿಸಲಾಗುವುದು ಎಂದು ಬಿಡಿಎ ಭೂ ಸ್ವಾಧೀನ ಉಪ ಆಯುಕ್ತರಾದ ಡಾ.ಎ. ಸೌಜನ್ಯ ತಿಳಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com