ಬೆಂಗಳೂರು: ಅಕ್ರಮವಾಗಿ ವಾಸಿಸುತ್ತಿದ್ದ ನೈಜೀರಿಯಾ ವ್ಯಕ್ತಿಯನ್ನು ಡಿಟೆನ್ಸನ್ ಸೆಂಟರ್ ಗೆ ಕಳುಹಿಸಿದ ಕೋರ್ಟ್

2013ರಲ್ಲೇ ವೀಸಾ ಅವಧಿ ಮುಗಿದರೂ ಕಳೆದ 9 ವರ್ಷಗಳಿಂದ ಭಾರತದಲ್ಲಿ ಅಕ್ರಮವಾಗಿ ವಾಸಿಸಲು ಅವಕಾಶ ನೀಡಿದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ನಗರದ ಸೆಷನ್ಸ್ ನ್ಯಾಯಾಲಯ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: 2013ರಲ್ಲೇ ವೀಸಾ ಅವಧಿ ಮುಗಿದರೂ ಕಳೆದ 9 ವರ್ಷಗಳಿಂದ ಭಾರತದಲ್ಲಿ ಅಕ್ರಮವಾಗಿ ವಾಸಿಸಲು ಅವಕಾಶ ನೀಡಿದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ನಗರದ ಸೆಷನ್ಸ್ ನ್ಯಾಯಾಲಯ, ಆತನನ್ನು ಡಿಟೆನ್ಸನ್ ಸೆಂಟರ್ ಕಳುಹಿಸುವಂತೆ ಆದೇಶಿಸಿದೆ. 

ವಿದೇಶಗಳಲ್ಲಿ ಉದ್ಯೋಗ ಕೊಡಿಸುವ ನೆಪದಲ್ಲಿ ಹಲವು ಭಾರತೀಯರಿಗೆ ವಂಚಿಸಿರುವ ನೈಜೀರಿಯಾದ ನೋಕೋಚಾ ಕ್ಯಾಸ್ಮಿರ್ ಇಕೆಂಬಾ(39), ತಮಿಳುನಾಡಿನ ಕರೂರ್ ಪೊಲೀಸರಲ್ಲದೆ ನಗರ ಪೊಲೀಸರು ಮತ್ತು ತೆಲಂಗಾಣದ ಹೈದರಾಬಾದ್‌ನ ಸೈಬರ್ ಕ್ರೈಂ ಪೊಲೀಸರಿಗೆ ಬೇಕಾಗಿದ್ದಾರೆ. ಆರೋಪಿಗೆ ಜಾಮೀನು ಅರ್ಜಿ ಸಲ್ಲಿಸಲು ಅನುಮತಿಸಲಾಗಿದ್ದರೂ, ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ್ ಅವರು, ವಿಚಾರಣೆ ಮುಗಿಯುವವರೆಗೆ ನಗರದ ಡಿಟೆನ್ಸನ್ ಸೆಂಟರ್ ಗೆ ಕಳುಹಿಸುವಂತೆ ಸಕ್ಷಮ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

“ವಾಸ್ತವವಾಗಿ, ಕಾಲಾನಂತರದಲ್ಲಿ ಉಳಿಯುವ ಇಂತಹ ಕೃತ್ಯವು ರಾಷ್ಟ್ರದ ಭದ್ರತೆಗೆ ನಿಜವಾದ ಬೆದರಿಕೆಯಾಗಿದೆ. ಇದು ಭಾರತೀಯ ನಾಗರಿಕರ ಜೀವನ ಮತ್ತು ಸ್ವಾತಂತ್ರ್ಯಕ್ಕೂ ಅಡ್ಡಿಪಡಿಸುತ್ತದೆ. ಇತರ ದೇಶಗಳು ಭಾರತೀಯ ನಾಗರಿಕರು ಹೆಚ್ಚು ಕಾಲ ಉಳಿಯುವುದನ್ನು ಸಹಿಸುವುದಿಲ್ಲ ... ” ಎಂದು ನ್ಯಾಯಾಲಯ ಹೇಳಿದೆ.

ಆರೋಪಿ ಉದ್ಯೋಗ ನೀಡುವ ನೆಪದಲ್ಲಿ ಹಲವು ಭಾರತೀಯರಿಂದ ಹಲ ವಸೂಲಿ ಮಾಡಿ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ಆರೋಪಿಯು ತನ್ನ ಹೆಸರಿನಲ್ಲಿ ಏಳಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳು ಮತ್ತು 13 ಇ-ಮೇಲ್ ಖಾತೆಗಳನ್ನು ಹೊಂದಿದ್ದಾನೆ. ಮ್ಯಾನೇಜ್‌ಮೆಂಟ್, ಸ್ಟಾಫ್ ನರ್ಸ್ ಮತ್ತು ಬಾಣಸಿಗ ಕೆಲಸ ಕೊಡಿಸುವ ನೆಪದಲ್ಲಿ ಭಾರತೀಯರಿಗೆ ವಂಚಿಸುತ್ತಿದ್ದ ಎಂದು ತನಿಖಾಧಿಕಾರಿಗಳ ವರದಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com