ಭಟ್ಕಳ: ಯುವತಿಗೆ ಕಿರುಕುಳ, ಗುಂಪು ಘರ್ಷಣೆ, ಉದ್ವಿಗ್ನತೆ!

ನಿರ್ದಿಷ್ಟ ಸಮುದಾಯದ ಯುವತಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಭಟ್ಕಳದ ರಂಜಾನ್ ಮಾರ್ಕೆಟ್ ನಲ್ಲಿ ಗುರುವಾರ ತಡರಾತ್ರಿ ಎರಡು ಗುಂಪು ನಡುವೆ ಘರ್ಷಣೆ ನಡೆದು, ಉದ್ವಿಗ್ನತೆ ಉಂಟಾಗಿತ್ತು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಭಟ್ಕಳ: ನಿರ್ದಿಷ್ಟ ಸಮುದಾಯದ ಯುವತಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಭಟ್ಕಳದ ರಂಜಾನ್ ಮಾರ್ಕೆಟ್ ನಲ್ಲಿ ಗುರುವಾರ ತಡರಾತ್ರಿ ಎರಡು ಗುಂಪು ನಡುವೆ ಘರ್ಷಣೆ ನಡೆದು, ಉದ್ವಿಗ್ನತೆ ಉಂಟಾಗಿತ್ತು.

ಕಾರ್ಯಪ್ರವೃತ್ತರಾದ ಪೊಲೀಸರು ಭಟ್ಕಳ ಹದ್ಲೂರಿನ ಆಟೋರಿಕ್ಷಾ ಚಾಲಕ ಚಂದ್ರ ಸೋಮಯ್ಯಗೌಡ (28), ಸುಲ್ತಾನ್ ಸ್ಟ್ರೀಟ್‌ನ ಜವಳಿ ಅಂಗಡಿ ನೌಕರ ರವೀಂದ್ರ ಶಂಕರ ನಾಯಕ್, ಮೊಹಮ್ಮದ್ ಮೀರಾನ್ ಮೊಹಮ್ಮದ್ ಇಮ್ರಾನ್ ಶೇಖ್ (35) ಹದೀನ್ ಸರ್ಪನಕಟ್ಟೆಯ ಆಟೋರಿಕ್ಷಾ ಚಾಲಕ ನಾಯಕ್ (32) ಮತ್ತಿತರರನ್ನು ವಶಕ್ಕೆ ಪಡೆದು ಪರಿಸ್ಥಿತಿಯನ್ನು ಹತೋಟಿಗೆ ತಂದರು. ಗಲಭೆ ಮತ್ತು ಕೋಮು ಸೌಹಾರ್ದತೆಗೆ ಧಕ್ಕೆ ತಂದ ಆರೋಪದ ಮೇಲೆ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಜನರ ಗುಂಪೊಂದು ಯುವತಿಗೆ ಕಿರುಕುಳ ನೀಡಿದ್ದರಿಂದ ಗಲಾಟೆ ಉಂಟಾಯಿತು. ಈ ಮಧ್ಯೆ ಮತ್ತೊಂದು ಗುಂಪು ಘಟನಾ ಸ್ಥಳಕ್ಕೆ ಧಾವಿಸಿ, ಯುವತಿಗೆ ಕಿರುಕುಳ ನೀಡಿದವರನ್ನು ಪೊಲೀಸರಿಗೆ ಒಪ್ಪಿಸಲು ಮುಂದಾದವರನ್ನು ಥಳಿಸಲು ಆರಂಭಿಸಿತು. ಆದರೆ ಮಧ್ಯಪ್ರವೇಶಿಸಿದ ಕೆಲವರು ಘಟನೆಯಲ್ಲಿ ಭಾಗಿಯಾಗಿರುವ ವ್ಯಕ್ತಿಗಳನ್ನು ಪೊಲೀಸರಿಗೆ ಹಸ್ತಾಂತರಿಸಬಾರದು ಎಂದು ಬಯಸಿತು.

ಪೊಲೀಸರು ಸ್ಥಳಕ್ಕೆ ಆಗಮಿಸಿ ವಾಗ್ವಾದ ನಡೆಸುತ್ತಿದ್ದ ಗುಂಪುಗಳನ್ನು ಸಮಾಧಾನ ಪಡಿಸಲು ಯತ್ನಿಸಿದರು. ಆದರೆ ಕೆಲವರು ಪೊಲೀಸ್ ವಾಹನದ ಮೇಲೆ ಕಲ್ಲು ತೂರಿದ್ದರಿಂದ ಪರಿಸ್ಥಿತಿ ಮತ್ತೆ ಉದ್ವಿಗ್ನಗೊಂಡಿತು. ಪರಿಸ್ಥಿತಿ ಹತೋಟಿಗೆ ತರಲು ಪೊಲೀಸರು ಹರಸಾಹಸ ಪಟ್ಟರು. ಕೆಲಕಾಲ ಪರಿಸ್ಥಿತಿ ಉದ್ವಿಗ್ನವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಗೆ ಎರಡು ಪ್ರಮುಖ ರಾಜಕೀಯ ಪಕ್ಷಗಳು ಕೋಮು ಬಣ್ಣ ಬಳಿದಿವೆ. ಆದರೆ, ಇದು ಪೂರ್ವ ಯೋಜಿತ ಎಂದು ಕೆಲವು ನಿವಾಸಿಗಳು ಹೇಳಿದ್ದಾರೆ. ಆದರೆ, ಯುವತಿಯಿಂದ ಯಾವುದೇ ದೂರು ದಾಖಲಾಗಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com