
ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದು, ಚುನಾವಣಾ ಪ್ರಚಾರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬ್ಯೂಸಿಯಾಗಿದ್ದಾರೆ. ಈ ನಡುವಲ್ಲೂ ಪುಟ್ಟ ಪ್ರತಿಭೆಗಳ ಗುರುತಿಸಿ, ಅವರನ್ನು ಶ್ಲಾಘಿಸುವುದನ್ನು ಮಾತ್ರ ಮೋದಿಯವರು ಮರೆತಿಲ್ಲ.
ಪಲ್ಲವಗಳ ಪಲ್ಲವಿಯಲಿ ಗರಿಗೆದರಿದೆ ಗೀತಾ, ತಂಬೆಲರಲಿ ಹಬ್ಬುತ್ತಿದೆ ಕೋಕಿಲ ಸಂಗೀತಾ ಎಂಬ ಕನ್ನಡ ಹಾಡಿಗೆ ಪಿಯಾನೋ ನುಡಿಸಿದ್ದ ಪುಟ್ಟ ಬಾಲಕಿಯ ಪ್ರತಿಭೆಯನ್ನು ಮೋದಿಯವರು ಕೊಂಡಾಡಿದ್ದಾರೆ.
ಇತ್ತೀಚೆಗೆ ಅನಂತ್ ಕುಮಾರ್ ಎಂಬುವವರು ಶಾಲ್ಮಲಿ ಎಂಬ ಪುಟ್ಟ ಬಾಲಕಿ ಕೀಬೋರ್ಡ್ ನುಡಿಸುತ್ತಾ ತನ್ನ ತಾಯಿಯ ಜೊತೆ ಹಾಡು ಹಾಡುವ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ್ದರು.
ಈ ವಿಡಿಯೋವನ್ನು ಗಮನಿಸಿ ಪ್ರಧಾನಿ ಮೋದಿ ಅವರು, ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ್ದು, ಬಾಲಕಿಯನ್ನು ಶ್ಲಾಘಿಸಿದ್ದಾರೆ.
ಕೆ.ಎಸ್. ನರಸಿಂಹಸ್ವಾಮಿ ಅವರು ರಚಿಸಿದ ಪಲ್ಲವಗಳ ಪಲ್ಲವಿಯಲ್ಲಿ ಹಾಡಿಗೆ ತಕ್ಕಂತೆ ಪಿಯಾನೋ ಬಾಲಕಿ ಪಿಯಾನೋ ನುಡಿಸಿದ್ದು, ಬಾಲಕಿಯ ಪ್ರತಿಭೆಗೆ ಮೋದಿಯವರು ಫಿದಾ ಆಗಿದ್ದಾರೆ.
ಶಾಲ್ಮಲಿಯ ಅಸಾಧಾರಣ ಪ್ರತಿಭೆ, ಸೃಜನಶೀಲತೆಯನ್ನು ಮೋದಿಯವರು ಹೊಗಳಿದ್ದು, ಭವಿಷ್ಯದಲ್ಲಿ ಉನ್ನತಮಟ್ಟಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದ್ದಾರೆ.
ವಿಡಿಯೋವನ್ನು ಹಂಚಿಕೊಂಡಿರುವ ಮೋದಿಯವರು ಕನ್ನಡದಲ್ಲೇ ಟ್ವೀಟ್ ಮಾಡಿದ್ದಾರೆ, ಈ ವಿಡಿಯೋ ಪ್ರತಿಯೊಬ್ಬರ ಮುಖದ ಮೇಲೆ ಮುಗುಳುನಗೆ ತರಿಸಬಹುದು. ಅನನ್ಯ ಪ್ರತಿಭೆ ಹಾಗೂ ಸೃಜನಶೀಲತೆ. ಶಾಲ್ಮಲಿಗೆ ಶುಭಹಾರೈಕೆಗಳು ಎಂದು ಬರೆದಿದ್ದಾರೆ.
Advertisement