90 ಪರ್ಸೆಂಟ್ ಮಾರ್ಕ್ಸ್ ತೆಗೆದಿದ್ದೀರಾ?: ಬೆಂಗಳೂರಿನಲ್ಲಿ ಬಾಡಿಗೆ ಮನೆ ಹುಡುಕುವ ಬ್ಯಾಚುಲರ್ಸ್ ಗೆ ಹೊಸ ಕಂಡೀಷನ್!

ಐಟಿ ಸಿಟಿ ಬೆಂಗಳೂರು ನಗರದಲ್ಲಿ ಬಾಡಿಗೆಗೆ ಮನೆ ಹುಡುಕುತ್ತಿರುವವರು ಅದರಲ್ಲೂ ವಿಶೇಷವಾಗಿ ಅಪಾರ್ಟ್ ಮೆಂಟ್ ನಲ್ಲಿ ನೆಲೆಸಬೇಕೆಂದು ಬಯಸುವವರು ವಿಚಿತ್ರ ಬೇಡಿಕೆಯನ್ನು ಈಡೇರಿಸಿದರೆ ಮಾತ್ರ ಮನೆ ಸಿಗುವಂತಹ ಪರಿಸ್ಥಿತಿ ಉಂಟಾಗಿದೆ. ಈ ವಿಷಯ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಫ್ಲ್ಯಾಟ್
ಫ್ಲ್ಯಾಟ್

ಬೆಂಗಳೂರು: ಐಟಿ ಸಿಟಿ ಬೆಂಗಳೂರು ನಗರದಲ್ಲಿ ಬಾಡಿಗೆಗೆ ಮನೆ ಹುಡುಕುತ್ತಿರುವವರು ಅದರಲ್ಲೂ ವಿಶೇಷವಾಗಿ ಅಪಾರ್ಟ್ ಮೆಂಟ್ ನಲ್ಲಿ ನೆಲೆಸಬೇಕೆಂದು ಬಯಸುವವರು ವಿಚಿತ್ರ ಬೇಡಿಕೆಯನ್ನು ಈಡೇರಿಸಿದರೆ ಮಾತ್ರ ಮನೆ ಸಿಗುವಂತಹ ಪರಿಸ್ಥಿತಿ ಉಂಟಾಗಿದೆ. ಈ ವಿಷಯ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅದೆಂದರೆ ಪರೀಕ್ಷೆಗಳಲ್ಲಿ ಶೇಕಡಾ 90 ಮತ್ತು ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸಿದವರಿಗೆ ಮಾತ್ರ ವಸತಿ ಸಿಗುತ್ತದೆ. 

ಶುಭ್ ಎಂಬುವವರು ಟ್ವೀಟ್ ನಲ್ಲಿ, ಅಂಕಗಳು ನಿಮ್ಮ ಭವಿಷ್ಯವನ್ನು ನಿರ್ಧರಿಸುವುದಿಲ್ಲ, ಆದರೆ ನೀವು ಬೆಂಗಳೂರಿನಲ್ಲಿ ಫ್ಲಾಟ್ ಪಡೆಯುತ್ತೀರೋ ಇಲ್ಲವೋ ಎಂಬುದನ್ನು ಅವು ಖಂಡಿತವಾಗಿಯೂ ನಿರ್ಧರಿಸುತ್ತವೆ ಎಂದು ಬರೆದುಕೊಂಡಿದ್ದಾರೆ. 

ಕೆನಡಾದಿಂದ ಬೆಂಗಳೂರಿಗೆ ಕೆಲಸಕ್ಕಾಗಿ ಸ್ಥಳಾಂತರಗೊಂಡಿದ್ದ ಅವರ ಸೋದರ ಸಂಬಂಧಿ ಅಪಾರ್ಟ್‌ಮೆಂಟ್‌ಗಾಗಿ ಹುಡುಕುತ್ತಿದ್ದರು. ದಲ್ಲಾಳಿಗಳೊಂದಿಗಿನ ವಾಟ್ಸಾಪ್ ಸಂಭಾಷಣೆಯ ಸ್ಕ್ರೀನ್‌ಶಾಟ್‌ ತೋರಿಸಿದರು. ಮನೆಯ ಮಾಲೀಕರು ಇವರ ಬಳಿ ತಮ್ಮ ಆಧಾರ್ ಮತ್ತು ಪ್ಯಾನ್ ಕಾರ್ಡ್‌ಗಳು, ಟ್ವಿಟರ್/ಲಿಂಕ್ಡ್‌ಇನ್ ಪ್ರೊಫೈಲ್, ಶೈಕ್ಷಣಿಕ ಪ್ರಮಾಣಪತ್ರಗಳ ಜೊತೆಗೆ ಕಂಪನಿ ಸೇರುವ ಪ್ರಮಾಣಪತ್ರದ ಕಾಪಿ ಕೇಳಿದರು. ತಮ್ಮ ಸಂಬಂಧಿ ದ್ವಿತೀಯ ಪಿಯುಸಿಯಲ್ಲಿ ಶೇಕಡಾ 90ಕ್ಕಿಂತ ಕಡಿಮೆ ಅಂಕಗಳನ್ನು ಗಳಿಸಿದ ಕಾರಣ ಮನೆ ನೀಡಲು ತಿರಸ್ಕರಿಸಿದರು ಎಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ. 

ಸ್ನಾತಕೋತ್ತರ ಪದವಿ ಹೊಂದುವವರು ಬೆಂಗಳೂರಿನಲ್ಲಿ ಅಪಾರ್ಟ್ಮೆಂಟ್ ನ್ನು ಬಾಡಿಗೆಗೆ ಪಡೆಯುವುದು "ಮಿಷನ್ ಅಸಾಧ್ಯ" ಎಂದು ಚಿರಾಗ್ TNIE ಗೆ ತಿಳಿಸಿದರು. ಮಾಲೀಕನಿಗೆ ಮನವರಿಕೆ ಮಾಡಲು ತಮ್ಮ ಸಿವಿ ಮತ್ತು ಲಿಂಕ್ಡ್‌ಇನ್ ಪ್ರೊಫೈಲ್ ನ್ನು ತೋರಿಸಬೇಕಾಗಿತ್ತು. ಪೀಣ್ಯದಲ್ಲಿ ವಾಸವಾಗಿರುವ ಇವರು ಅಂತಿಮ ವರ್ಷದ ಬಿಕಾಂ ವಿದ್ಯಾರ್ಥಿಯಾಗಿದ್ದಾರೆ.

ಮತ್ತೊಬ್ಬ ಬಳಕೆದಾರರು "ಪಧೈ ಲಿಖೈ ಕರೋ, ತಭಿ ಘರ್ ಬನಾ ಪಾವೋಗೆ" ಎಂದು ಮನೆ ಮಾಲೀಕರೊಬ್ಬರು ಹೇಳಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. 

ಲಕ್ಷ್ಮೀ ನಾರಾಯಣ್ ಎಂಬ ಬ್ರೋಕರ್, ''ಪರೀಕ್ಷೆಯಲ್ಲಿ ಶೇಕಡಾ 90 ಮತ್ತು ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಹೊಂದಿರುವ ವ್ಯಕ್ತಿಗೆ ಅಪಾರ್ಟ್ಮೆಂಟ್ ಬಾಡಿಗೆಗೆ ನೀಡುವ ಕ್ರಮ ಸರಿಯಲ್ಲ. ಶೈಕ್ಷಣಿಕವಾಗಿ ಮುಂದಿದ್ದವರಿಗೆ ಮಾತ್ರ ಮನೆ ನೀಡುವುದು ಎಂದರೆ ಏನರ್ಥ ಎಂದರು. 

ಮನೆಯಲ್ಲಿ ತಡರಾತ್ರಿ ಪಾರ್ಟಿಗಳನ್ನು ಮಾಡುವುದು, ತಡರಾತ್ರಿ ಮನೆಗೆ ಬರುವುದು, ನೆರೆಹೊರೆಯವರಿಗೆ ತೊಂದರೆಯಾಗುವಂತೆ ಮ್ಯೂಸಿಕ್ ಹಾಕುವುದರಿಂದ ಸಾಮಾನ್ಯವಾಗಿ ಮನೆ ಮಾಲೀಕರು ಬ್ಯಾಚ್ ಲರ್ ಗಳಿಗೆ ಬಾಡಿಗೆ ಮನೆ ನೀಡಲು ಹಿಂದೇಟು ಹಾಕುತ್ತಾರೆ ಎಂದು ನಾರಾಯಣ್ ಹೇಳಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com