ಜುಲೈನಲ್ಲಿ ಮುಂಗಾರು ಆರ್ಭಟ: ರಾಜ್ಯದಲ್ಲಿ ಶೇ.3ರಷ್ಟು ಹೆಚ್ಚುವರಿ ಮಳೆ!

ರಾಜ್ಯದಲ್ಲಿ ಮುಂಗಾರು ಮಳೆ ವಿಳಂಭವಾಗಿದ್ದರೂ ಕೂಡ ಜುಲೈ ತಿಂಗಳಿನಲ್ಲಿ ನೈಋತ್ಯ ಮಾನ್ಸೂನ್ ವೇಗ ಪಡೆದುಕೊಂಡ ಪರಿಣಾಮ ರಾಜ್ಯದಲ್ಲಿ ಶೇ.3ರಷ್ಟು ಹೆಚ್ಚುವರಿ ಮಳೆಯಾಗಿದೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ವಿಳಂಭವಾಗಿದ್ದರೂ ಕೂಡ ಜುಲೈ ತಿಂಗಳಿನಲ್ಲಿ ನೈಋತ್ಯ ಮಾನ್ಸೂನ್ ವೇಗ ಪಡೆದುಕೊಂಡ ಪರಿಣಾಮ ರಾಜ್ಯದಲ್ಲಿ ಶೇ.3ರಷ್ಟು ಹೆಚ್ಚುವರಿ ಮಳೆಯಾಗಿದೆ ಎಂದು ತಿಳಿದುಬಂದಿದೆ.

ಜೂನ್ ಮತ್ತು ಜುಲೈ ತಿಂಗಳಿನಲ್ಲಿ ವಾಡಿಕೆ ಮಳೆ ಶೇ.45 ಸೆಂ.ಮೀ ಆಗಿದ್ದರೆ, ರಾಜ್ಯದಲ್ಲಿ 47 ಸೆಂ.ಮೀ ಮಳೆಯಾಗಿದೆ.

ಉತ್ತರ ಒಳನಾಡಿನಲ್ಲಿ ಶೇ.21ರಷ್ಟು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಶೇ.5ರಷ್ಟು ಹೆಚ್ಚುವರಿ ಮಳೆಯಾಗಿದೆ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಉಸ್ತುವಾರಿ ನಿರ್ದೇಶಕ ಎ ಪ್ರಸಾದ್ ಅವರು ಮಾಹಿತಿ ನೀಡಿದ್ದಾರೆ.

  
  

ಈ ನಡುವೆ ದಕ್ಷಿಣ ಒಳನಾಡಿನಲ್ಲಿ ಶೇ.7ರಷ್ಟು ಕಡಿಮೆ ಮಳೆಯಾಗಿರುವುದಾಗಿ ತಿಳಿದುಬಂದಿದೆ. ಆದರೆ, ಮಳೆಯ ಗರಿಷ್ಠ ಅವಧಿಯು ಸೆಪ್ಟೆಂಬರ್ ತಿಂಗಳಿನಲ್ಲಿ ಅಂತ್ಯಗೊಳ್ಳುವುದರಿಂದ ಈಗಲೇ ಆತಂಕಪಡುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸಾಮಾನ್ಯಕ್ಕಿಂತ ಕಡಿಮೆ ಮಳೆ ಶೇ.19 ಆಗಿರಬೇಕು. ಶೇ.7ರಷ್ಟು ಮಳೆಯ ಕೊರತೆಯು ಆತಂಕಕಾರಿಯಲ್ಲ ಎಂದು ತಿಳಿಸಿದ್ದಾರೆ.

ಇನ್ನು ಚಿತ್ರದುರ್ಗದಲ್ಲಿ ಈ ವರ್ಷ ಶೇ.74ರಷ್ಟು ಅಧಿಕ ಮಳೆಯಾಗಿದ್ದು, ರಾಜ್ಯದಲ್ಲಿ ಅತೀ ಹೆಚ್ಚು ದಾಖಲಿಸಿದ ಜಿಲ್ಲೆಯಾಗಿದೆ. ಇದೇ ರೀತಿ ಬೆಂಗಳೂರು ಗ್ರಾಮಾಂತರದಲ್ಲಿಯೂ ಶೇ.11ರಷ್ಟು ಹಾಗೂ ಬೆಂಗಳೂರು ನಗರದಲ್ಲಿ ಶೇ.8.6ರಷ್ಟು ಹೆಚ್ಚುವರಿ ಮಳೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com