ನಿನ್ನೆ 211 ಪೊಲೀಸ್ ಇನ್ಸ್​​​​ಪೆಕ್ಟರ್​​​​​​​ಗಳ ವರ್ಗಾವಣೆ: ಇಂದು 19 ತಡೆ ಹಿಡಿದ ಸರ್ಕಾರ

ನಿನ್ನೆ ವರ್ಗಾವಣೆಗೊಂಡಿದ್ದ ಕೆಲ ಇನ್ಸ್​​ಪೆಕ್ಟರ್​ಗಳ ವರ್ಗಾವಣೆಗೆ ಸರ್ಕಾರ ತಡೆ ಹಿಡಿದಿದೆ. ಮಂಗಳವಾರ ರಾಜ್ಯಾದ್ಯಂತ 211 ಪೊಲೀಸ್ ಇನ್ಸ್​​​​ಪೆಕ್ಟರ್​​​​​​​ಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಎರಡೇ ತಿಂಗಳಲ್ಲಿ ಸರ್ಕಾರ ವರ್ಗಾವಣೆ ದಂಧೆಯನ್ನು ಆರಂಭಿಸಿದೆ ಎಂದು ವಿಪಕ್ಷಗಳಿಂದ ಗಂಭೀರ ಟೀಕೆಗೆ ಒಳಗಾಗಿದೆ.

ಇದಕ್ಕೆ ಸಾಕ್ಷಿ ಎಂಬಂತೆ  ರಾಜ್ಯದ 211 ಪೊಲೀಸ್‌ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ ಮಾಡಿದ್ದ ಸರ್ಕಾರ, ಈಗ 19 ಪೊಲೀಸ್‌ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ ತಡೆಹಿಡಿದ ಆದೇಶ ವಿಪಕ್ಷಗಳ ಆರೋಪಕ್ಕೆ ಪುಷ್ಟಿ ನೀಡಿದಂತಾಗಿದೆ.

ನಿನ್ನೆ ವರ್ಗಾವಣೆಗೊಂಡಿದ್ದ ಕೆಲ ಇನ್ಸ್​​ಪೆಕ್ಟರ್​ಗಳ ವರ್ಗಾವಣೆಗೆ ಸರ್ಕಾರ ತಡೆ ಹಿಡಿದಿದೆ. ಮಂಗಳವಾರ ರಾಜ್ಯಾದ್ಯಂತ 211 ಪೊಲೀಸ್ ಇನ್ಸ್​​​​ಪೆಕ್ಟರ್​​​​​​​ಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು.

ಆದರೆ ಇಂದು ಬೆಳಗ್ಗೆ ಸರ್ಕಾರದಿಂದ ದಿಢೀರ್ ತಡೆ ಹಿಡಿಯಲಾಗಿದೆ. ವರ್ಗಾವಣೆ ಆದೇಶ ಬರುತ್ತಿದ್ದಂತೆ ಇಂದು ಚಾರ್ಜ್ ತೆಗೆದುಕೊಳ್ಳಲು ಮುಂದಾಗಿದ್ದ 11 ಇನ್ಸ್ ಪೆಕ್ಟರ್​​​ಗಳ ವರ್ಗಾವಣೆಗೆ ಬೆಳ್ಳಂಬೆಳಗ್ಗೆ ತಡೆ ನೀಡಲಾಗಿದೆ.

ವರ್ಗಾವಣೆ ಆದೇಶ ಬರ್ತಿದ್ದಂತೆ ಹಲವು ಬೆಳಗಾಗುವುದರೊಳಗೆ 11 ಇನ್ಸ್ ಪೆಕ್ಟರ್‌ಗಳು ಹಾಗೂ ಮಧ್ಯಾಹ್ನದ ವೇಳೆ ಪುನಃ 8 ಇನ್ಸ್‌ಪೆಕ್ಟರ್‌ಗಳು ಸೇರಿ ಒಟ್ಟು 19 ಪೊಲೀಸ್‌ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆಗೆ ತಡೆ ನೀಡಿ ಆದೇಶ ಹೊರಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com