ಮೈಸೂರು ದಸರಾದಲ್ಲಿ ಏರ್ ಶೋ ನಡೆಸುವಂತೆ ರಾಜನಾಥ್‌ ಸಿಂಗ್‌ಗೆ ಸಿಎಂ ಸಿದ್ದರಾಮಯ್ಯ ಮನವಿ

ಮೈಸೂರು ದಸರಾ ಮಹೋತ್ಸವದ ವೇಳೆ ಏರ್ ಶೋ ನಡೆಸುವಂತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್‌ಗೆ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಗುರುವಾರ ಮನವಿ ಮಾಡಿದ್ದಾರೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಮನವಿ ಪತ್ರ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಮನವಿ ಪತ್ರ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ.

ನವದೆಹಲಿ: ಮೈಸೂರು ದಸರಾ ಮಹೋತ್ಸವದ ವೇಳೆ ಏರ್ ಶೋ ನಡೆಸುವಂತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್‌ಗೆ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಗುರುವಾರ ಮನವಿ ಮಾಡಿದ್ದಾರೆ.

ದೆಹಲಿಯ ಸಂಸತ್ ಭವನದಲ್ಲಿರುವ ರಾಜನಾಥ್ ಸಿಂಗ್ ಕಚೇರಿಯಲ್ಲಿ ಭೇಟಿಯಾಗಿ ಈ ಸಂಬಂಧ ಮಾತುಕತೆ ನಡೆಸಿದರು.

ಕರ್ನಾಟಕದ ವೈಭವ ಸಾರುವ ಪ್ರಸಿದ್ಧ ಮೈಸೂರು ದಸರಾ ಉತ್ಸವದ ಆಚರಣೆಗಳ ಬಗ್ಗೆ ಇಡೀ ದೇಶಕ್ಕೇ ಅರಿವಾಗುವ ಅಗತ್ಯ ಇದ್ದು, ರಾಜ್ಯದ ವೈಭವದ ಇತಿಹಾಸ ಮತ್ತು ಸಂಪ್ರದಾಯಗಳ ಮೇಲೆ ಬೆಳಕು ಚೆಲ್ಲಬೇಕಾಗಿದೆ. ಈ ವರ್ಷ ಅಕ್ಟೋಬರ್ 15 ರಿಂದ 24 ರವರೆಗೆ ದಸರಾ ಆಚರಿಸಲು ನಿರ್ಧರಿಸಲಾಗಿದೆ.

ಮೈಸೂರು ದಸರಾ ಆಚರಣೆಗೆ ಸಂಬಂಧಪಟ್ಟ ಉನ್ನತ ಸಮಿತಿಯ ಸಭೆಯಲ್ಲಿ 2023ರ ದಸರಾ ಮಹೋತ್ಸವದ ವೇಳೆ ಏರ್ ಶೋ ನಡೆಸಬೇಕೆಂಬ ಜನರ ಬಯಕೆಯನ್ನು ಸಮಿತಿಯ ಮುಂದೆ ಇಡಲಾಯಿತು. 2017 ಮತ್ತು 2019 ರಲ್ಲಿ, ಮೈಸೂರಿನ ಟಾರ್ಚ್ ಲೈಟ್ ಪರೇಡ್ ಮೈದಾನದಲ್ಲಿ ಭಾರತೀಯ ವಾಯುಪಡೆಯು ಪ್ರದರ್ಶಿಸಿದ ವಿಶೇಷ ಏರ್ ಶೋ ಮೂಲಕ ದಸರಾ ಉತ್ಸವವು ಹತ್ತಾರು ಪ್ರವಾಸಿಗರು ಮತ್ತು ಕನ್ನಡಿಗರ ಗಮನವನ್ನು ಸೆಳೆದಿತ್ತು.

ಹೀಗಾಗಿ, ಈ ಬಾರಿ ಮೈಸೂರಿನಲ್ಲಿ ನಾಡಹಬ್ಬ ದಸರಾ 2023ರ ಸಂದರ್ಭದಲ್ಲಿ ಇದೇ ರೀತಿಯ ‘ಏರ್‌ಶೋ’ ಅನ್ನು ಆಯೋಜಿಸಲು ಸಂಬಂಧಪಟ್ಟವರಿಗೆ ದಯೆಮಾಡಿ ನಿರ್ದೇಶಿಸಿ ಎಂದು ಈ ಮೂಲಕ ವಿನಂತಿಸುತ್ತಿದ್ದೇವೆ. ನಿಮ್ಮ ಸಮಯೋಚಿತ ಮಧ್ಯಸ್ಥಿಕೆ ದಸರಾ ಹಬ್ಬಕ್ಕೆ ಇನ್ನಷ್ಟು ರಂಗು ತುಂಬಲಿದೆ. ದೃಢವಾದ ಮತ್ತು ತ್ವರಿತ ಕ್ರಮಕ್ಕಾಗಿ ಎದುರುನೋಡುತ್ತಿದ್ದೇನೆ ಎಂದು ಹೇಳಿದರು.

ಸಿಎಂ ಸಿದ್ದರಾಮಯ್ಯ ಅವರ ಈ ಮನವಿಯನ್ನು ಸ್ವೀಕರಿಸಿದ ರಾಮನಾಥ್ ಸಿಂಗ್ ಅವರು, ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಹೇಳಿದರು.

ಸೋಮವಾರ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಮೈಸೂರು ದಸರಾ ಆಚರಣೆಯ ಉನ್ನತಾಧಿಕಾರ ಸಮಿತಿಯ ಸಭೆಯಲ್ಲಿ, ಮೈಸೂರು ದಸರಾವನ್ನು "ಅರ್ಥಪೂರ್ಣ ಮತ್ತು ಅದ್ಧೂರಿಯಾಗಿ" ಆಚರಣೆ ಮಾಡಲು ನಿರ್ಧರಿಸಲಾಗಿತ್ತು, ಸಭೆಯಲ್ಲಿ ಈ ವರ್ಷ ಮೈಸೂರು ದಸರಾವನ್ನು ಅಕ್ಟೋಬರ್ 15 ರಿಂದ 24 ರವರೆಗೆ ಆಚರಿಸಲು ನಿರ್ಧರಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com