ಹಾಸನ: ‘ಅನುಮತಿಯಿಲ್ಲದೆ ಹಾಸ್ಟೆಲ್‌ಗೆ ನುಗ್ಗಿ ಪೊಲೀಸರಿಂದ ದೌರ್ಜನ್ಯ'; ವಿದ್ಯಾರ್ಥಿಗಳು ದೂರು

ಹಾಸನದ ವಿದ್ಯಾನಗರದಲ್ಲಿರುವ ಎಸ್‌ಸಿ/ಎಸ್‌ಟಿ ವಸತಿ ನಿಲಯದ ಆವರಣಕ್ಕೆ ಬುಧವಾರ ತಡರಾತ್ರಿ ಹಲವಾರು ರಾತ್ರಿ ಬೀಟ್ ಪೊಲೀಸ್ ಸಿಬ್ಬಂದಿ ನುಗ್ಗಿದ ನಂತರ ಭಾರಿ ಕೋಲಾಹಲಕ್ಕೆ ಸಾಕ್ಷಿಯಾಯಿತು.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಹಾಸನ: ಹಾಸನದ ವಿದ್ಯಾನಗರದಲ್ಲಿರುವ ಎಸ್‌ಸಿ/ಎಸ್‌ಟಿ ವಸತಿ ನಿಲಯದ ಆವರಣಕ್ಕೆ ಬುಧವಾರ ತಡರಾತ್ರಿ ಹಲವಾರು ರಾತ್ರಿ ಬೀಟ್ ಪೊಲೀಸ್ ಸಿಬ್ಬಂದಿ ನುಗ್ಗಿದ ನಂತರ ಭಾರಿ ಕೋಲಾಹಲಕ್ಕೆ ಸಾಕ್ಷಿಯಾಯಿತು.

ಹಾಸ್ಟೆಲ್ ವಾರ್ಡನ್ ಅಥವಾ ಹಿರಿಯ ಅಧಿಕಾರಿಗಳಿಂದ ಅನುಮತಿ ಪಡೆಯದೆ ಮೂವರು ಪೊಲೀಸ್ ಪೇದೆಗಳು ಹಾಸ್ಟೆಲ್‌ಗೆ ನುಗ್ಗಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಗುರುವಾರ ಮುಂಜಾನೆ 3 ಗಂಟೆಯವರೆಗೆ ಪ್ರತಿಭಟನೆ ನಡೆಸಿದರು.

ವಿದ್ಯಾರ್ಥಿಯೊಬ್ಬನ ಜಾತಿ ಬಗ್ಗೆ ಕೇಳುವ ಮೂಲಕ ಕಾನ್‌ಸ್ಟೆಬಲ್‌ಗಳು ನಿಂದಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

'ಅಂಬೇಡ್ಕರ್ ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದೇವೆ ಎಂದು ವಿದ್ಯಾರ್ಥಿಯೊಬ್ಬ ಹೇಳಿದಾಗ, ಪೊಲೀಸ್ ಪೇದೆಯೊಬ್ಬರು ಡಾ. ಬಿಆರ್ ಅಂಬೇಡ್ಕರ್ ಯಾರು ಎಂದು ಕೇಳಿದರು ಎಂದು ವಿದ್ಯಾರ್ಥಿಯೊಬ್ಬರು ದೂರಿದ್ದಾರೆ. ಘಟನೆಯನ್ನು ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬರ ಸೆಲ್ ಫೋನ್ ಅನ್ನು ಸಹ ಒಬ್ಬ ಕಾನ್‌ಸ್ಟೇಬಲ್ ಕಸಿದುಕೊಂಡು ಒಡೆದು ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

ಹಾಸನ ಉಪ ಪೊಲೀಸ್ ವರಿಷ್ಠಾಧಿಕಾರಿ ಮುರುಳೀಧರ್ ಅವರು ಮಧ್ಯರಾತ್ರಿ 2 ಗಂಟೆಗೆ ಹಾಸ್ಟೆಲ್‌ಗೆ ಭೇಟಿ ನೀಡಿ ವಿದ್ಯಾರ್ಥಿಗಳನ್ನು ಸಮಾಧಾನಪಡಿಸಿದರು. ಅಂಬೇಡ್ಕರ್ ಅವರಿಗೆ ಅಗೌರವ ತೋರಿದ್ದಕ್ಕಾಗಿ ಮೂವರು ಪೊಲೀಸ್ ಪೇದೆಗಳು ಕ್ಷಮೆ ಯಾಚಿಸಿದ್ದಾರೆ ಎಂದು ವರದಿಯಾಗಿದೆ. ವರದಿ ಆಧರಿಸಿ ಒಬ್ಬ ಕಾನ್‌ಸ್ಟೆಬಲ್‌ನನ್ನು ಅಮಾನತು ಮಾಡಲಾಗಿದ್ದು, ಇಬ್ಬರಿಗೆ ನೋಟಿಸ್ ಜಾರಿ ಮಾಡಲಾಗಿದೆ.

ಹಾಸ್ಟೆಲ್‌ನಿಂದ ಕರೆ ಬಂದ ನಂತರವೇ ಕಾನ್‌ಸ್ಟೆಬಲ್‌ಗಳು ಹಾಸ್ಟೆಲ್‌ಗೆ ಹೋದರು ಎಂದು ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಹೇಳಿದ್ದಾರೆ. ಕಾನ್ಸ್‌ಟೇಬಲ್‌ಗಳು ಮದ್ಯ ಸೇವಿಸಿಲ್ಲ ಮತ್ತು ಘಟನೆ ನಂತರ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com