ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಮನೆ ಮುಂದೆ ಮೂತ್ರ ವಿಸರ್ಜನೆ ಮಾಡದಂತೆ ಎಚ್ಚರಿಕೆ ನೀಡಿದ ತಂದೆ ಮಗನ ಮೇಲೆ ಐವರಿಂದ ಹಲ್ಲೆ!

ತಮ್ಮ ಮನೆ ಮುಂದೆ ಮೂತ್ರ ವಿಸರ್ಜಿಸದಂತೆ ಎಚ್ಚರಿಕೆ ನೀಡಿದ ನಂತರ ಐವರು ಪಾನಮತ್ತ ವ್ಯಕ್ತಿಗಳು 65 ವರ್ಷದ ವ್ಯಕ್ತಿಯನ್ನು ಮೊದಲ ಮಹಡಿಯ ಮನೆಯಿಂದ ಹೊರಗೆ ಎಳೆದು ಹಲ್ಲೆ ನಡೆಸಿರುವ ಘಟನೆ ಆರ್ ಟಿ ನಗರದಲ್ಲಿ ನಡೆದಿದೆ.

ಬೆಂಗಳೂರು: ತಮ್ಮ ಮನೆ ಮುಂದೆ ಮೂತ್ರ ವಿಸರ್ಜಿಸದಂತೆ ಎಚ್ಚರಿಕೆ ನೀಡಿದ ನಂತರ ಐವರು ಪಾನಮತ್ತ ವ್ಯಕ್ತಿಗಳು 65 ವರ್ಷದ ವ್ಯಕ್ತಿಯನ್ನು ಮೊದಲ ಮಹಡಿಯ ಮನೆಯಿಂದ ಹೊರಗೆ ಎಳೆದು ಹಲ್ಲೆ ನಡೆಸಿರುವ ಘಟನೆ ಆರ್ ಟಿ ನಗರದಲ್ಲಿ ನಡೆದಿದೆ.

ಕೆಲವು ದಿನಗಳ ಹಿಂದೆ ರಾತ್ರಿ 10.55 ರಿಂದ 11.15 ರ ನಡುವೆ ಈ ಘಟನೆ ನಡೆದಿದ್ದು ಆರೋಪಿಗಳನ್ನು ಬಂಧಿಸಲಾಗಿದೆ.

ತಂದೆಯ ರಕ್ಷಣೆಗೆ ಧಾವಿಸಿದ ಮಗ ಜೀವನ್ ಶೆಟ್ಟಿ (30) ಎಂಬಾತನಿಗೆ ಥಳಿಸಿದ್ದಾರೆ. ಆರೋಪಿಗಳು ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ವೃದ್ಧನ ಮಗಳು ಮತ್ತು ಪತ್ನಿ ಮೇಲೆ ದೌರ್ಜನ್ಯ ಎಸಗಿದ್ದಾರೆ.

ಕಾರಿನಲ್ಲಿ ಬಂದ ತಂಡ ಆರ್‌ಟಿ ನಗರದ ಪುಷ್ಪಾಂಜಲಿ ಥಿಯೇಟರ್ ಹಿಂಭಾಗದ ಸಂತ್ರಸ್ತರ ಮನೆ ಮುಂದೆ ನಿಲ್ಲಿಸಿ ಮೂತ್ರ ವಿಸರ್ಜನೆ ಮಾಡಲು ಪ್ರಾರಂಭಿಸಿದರು. ಈ ವೇಳೆ ಮೂತ್ರ ವಿಸರ್ಜನೆ ಮಾಡದಂತೆ ತಮ್ಮ ತಂದೆ ಎಚ್ಚರಿಕೆ ನೀಡಿದರು. ಈ ವೇಳೆ ಕುಪಿತ ಗೊಂಡ ಆರೋಪಿಗಳು ವೃದ್ಧ ವ್ಯಕ್ತಿಯನ್ನು ಮೊದಲ ಮಹಡಿಯಿಂದ ಎಳೆದು ತಂದಿದ್ದಾರೆ. ಸಹಾಯಕ್ಕೆ ಹೋದ ಮಗನ ಮೇಲೂ ಹಲ್ಲೆ ನಡೆಸಿದ್ದಾರೆ.ನಂತರ ಕಿರುಕುಳ ನೀಡಬೇಡಿ ಎಂದು ಮನವಿ ಮಾಡಿದ ಅವರ ಹೆಂಡತಿ ಮತ್ತು ಮಗಳ ಮೇಲೂ ದೌರ್ಜನ್ಯ ನಡೆಸಿದ್ದಾರೆ.

ಸಂತ್ರಸ್ತರಿಗೆ ತಮ್ಮ ನೆರೆಹೊರೆಯವರಿಂದ ಯಾವುದೇ ಸಹಾಯ ಮಾಡಲಿಲ್ಲ, ಎಲ್ಲರೂ ಸುಮ್ಮನೆ ನಿಂತು ನೋಡುತ್ತಿದ್ದರು. ಮಾಮೂಲಿ ಉಡುಪಿನಲ್ಲಿದ್ದ ಪೋಲೀಸರೊಬ್ಬರು ಅವರ ರಕ್ಷಣೆಗೆ ಧಾವಿಸಿ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಲು ತಮ್ಮ ಸೆಲ್ ಫೋನ್ ಅನ್ನು ಅವರಿಗೆ ನೀಡಿದರು.

ಕರೆ ಮಾಡಿದ ಕೆಲವೇ ಕ್ಷಣಗಳಲ್ಲಿ ಪೊಲೀಸರು  ಅಲ್ಲಿಗೆ ತಲುಪಿದರು. ಪೊಲೀಸರು ಬಂದ ನಂತರವೂ ಆರೋಪಿಗಳು, ತಾವು ಯಾರಿಗೂ ಹೆದರುವುದಿಲ್ಲ ಎಂದು ಹೇಳಿಕೊಂಡು ಸ್ಥಳದಲ್ಲಿಯೇ ಇದ್ದರು. ಅಲ್ಲಿಗೆ ಬಂದ ಪೊಲೀಸ್ ತಂಡ ಐವರನ್ನು ವಶಕ್ಕೆ ತೆಗೆದುಕೊಂಡಿತು. ತಂಡವು ಕಾರನ್ನು ವಶಪಡಿಸಿಕೊಂಡಿದೆ ಮತ್ತು ಅದರಲ್ಲಿ ಕೆಲವು ಮದ್ಯದ ಬಾಟಲಿಗಳನ್ನು ಸೀಜ್ ಮಾಡಿದೆ.

ಗ್ಯಾಂಗ್‌ನ ಸದಸ್ಯರು ತಮ್ಮ ಮನೆ ಮುಂದೆ ಮೂತ್ರ ವಿಸರ್ಜನೆ ಮಾಡಲು ಪ್ರಾರಂಭಿಸಿದಾಗ ಜೀವನ್ ಶೆಟ್ಟಿ ಅವರ ಮತ್ತು ಅವರ ಸಹೋದರಿ ವರಾಂಡದಲ್ಲಿ ನಿಂತಿದ್ದರು ಎಂದು ಶೆಟ್ಟಿ ಅವರು ದೂರಿನಲ್ಲಿ ತಿಳಿಸಿದ್ದಾರೆ.

ಅವರು ಗೇಟುಗಳನ್ನು ತೆರೆದು ಒಳಗೆ ನುಗ್ಗಿದರು, ಅವರು ಮೇಲಕ್ಕೆ ಹೋಗಿ ತಮ್ಮ ತಂದೆಯನ್ನು ಕೆಳಗೆ ಎಳೆದುಕೊಂಡು ಪ್ರಾರಂಭಿಸಿದರು. ಗದ್ದಲ ಕೇಳಿದ ನಂತರ ಶೆಟ್ಟಿ ತನ್ನ ತಂದೆಯ ರಕ್ಷಣೆಗೆ ಧಾವಿಸಿದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದೂರುದಾರರಿಗೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಪೊಲೀಸ್ ಠಾಣೆಯಲ್ಲೂ ಆರೋಪಿಗಳು ಬೆದರಿಕೆ ಹಾಕಿದ್ದಾರೆ. ದೂರುದಾರರ ಪೋಷಕರು ಮತ್ತು ಸಹೋದರಿ ಆರೋಪಿಗೆ ಹೆದರಿ ಠಾಣೆಗೆ ಹೋಗಿರಲಿಲ್ಲ. ಘಟನೆಯ ನಂತರ, ಕುಟುಂಬ ಈಗ ಮಂಗಳೂರಿಗೆ ಮರಳಲು ಬಯಸಿದೆ.

ಎಲ್ಲ ಆರೋಪಿಗಳನ್ನು ಬಂಧಿಸಲಾಗಿದೆ. ಸಂತ್ರಸ್ತರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಅಧಿಕಾರಿ ತಿಳಿಸಿದ್ದಾರೆ. ಶೆಟ್ಟಿ ಅವರನ್ನು ಸಂಪರ್ಕಿಸಿದಾಗ ಪ್ರತಿಕ್ರಿಯಿಸಲು ನಿರಾಕರಿಸಿದರು. ಆರೋಪಿಯ ವಿರುದ್ಧ ಐಪಿಸಿಯ ಇತರ ಸೆಕ್ಷನ್‌ಗಳ ಜೊತೆಗೆ ಐಪಿಸಿ 354, ಐಪಿಸಿ 323  ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.

Related Stories

No stories found.

Advertisement

X
Kannada Prabha
www.kannadaprabha.com