ಪದೇ ಪದೆ ಅತ್ಯಾಚಾರ ಪ್ರಕರಣಗಳನ್ನು ದಾಖಲಿಸುವ ಅಭ್ಯಾಸದಿಂದ ಕಾನೂನಿನ ದುರುಪಯೋಗವಾಗುತ್ತದೆ: ಕರ್ನಾಟಕ ಹೈಕೋರ್ಟ್

ಸಾಮಾಜಿಕ ಮಾಧ್ಯಮದಲ್ಲಿ ಸ್ನೇಹ ಬೆಳೆಸಿದ ನಂತರ ಮಹಿಳೆಯೊಬ್ಬರು ಅತ್ಯಾಚಾರ ಮತ್ತು ವಂಚನೆ ಆರೋಪ ಮಾಡಿದ್ದು, ಈ ಆಧಾರದ ಮೇಲೆ ಪುರುಷನ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಮೊಕದ್ದಮೆಗಳನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ. ಮದುವೆ ನೆಪದಲ್ಲಿ ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಮಹಿಳೆ ಆರೋಪಿಸಿದ್ದರು.
ಕರ್ನಾಟಕ ಹೈಕೋರ್ಟ್
ಕರ್ನಾಟಕ ಹೈಕೋರ್ಟ್

ಬೆಂಗಳೂರು: ಸಾಮಾಜಿಕ ಮಾಧ್ಯಮದಲ್ಲಿ ಸ್ನೇಹ ಬೆಳೆಸಿದ ನಂತರ ಮಹಿಳೆಯೊಬ್ಬರು ಅತ್ಯಾಚಾರ ಮತ್ತು ವಂಚನೆ ಆರೋಪ ಮಾಡಿದ್ದು, ಈ ಆಧಾರದ ಮೇಲೆ ಪುರುಷನ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಮೊಕದ್ದಮೆಗಳನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ. ಮದುವೆ ನೆಪದಲ್ಲಿ ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಮಹಿಳೆ ಆರೋಪಿಸಿದ್ದರು.

ಇನ್ನೊಬ್ಬ ವ್ಯಕ್ತಿಯ ವಿರುದ್ಧವೂ ಆಕೆ ನೀಡಿದ್ದ ಇದೇ ರೀತಿಯ ದೂರನ್ನು ಗಮನಿಸಿದ ನ್ಯಾಯಾಲಯ, 'ದೂರುದಾರರು ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಜನರೊಂದಿಗೆ ಸಂಬಂಧ ಬೆಳೆಸುತ್ತಾರೆ ಮತ್ತು ನಂತರ ಅದೇ ಆರೋಪಗಳ ಮೇಲೆ ಅವರ ವಿರುದ್ಧ ಅಪರಾಧಗಳನ್ನು ದಾಖಲಿಸುವುದು ರೂಢಿಯಾಗಿದೆ. ಒಂದು ವೇಳೆ ಈ ಪ್ರಕರಣಗಳಲ್ಲಿ ವಿಚಾರಣೆ ಮುಂದುವರಿಸಲು ಅನುಮತಿ ನೀಡಿದರೆ, ಅದು ದೂರುದಾರರ ಚಟುವಟಿಕೆಗಳಿಗೆ ಮತ್ತು ಕಾನೂನಿನ ಪ್ರಕ್ರಿಯೆಯನ್ನು ಪದೇ ಪದೆ ದುರುಪಯೋಗಪಡಿಸಿಕೊಳ್ಳುವ ಅವರ ಪ್ರಯತ್ನಕ್ಕೆ ಉತ್ತೇಜನ ನೀಡಿದಂತಾಗುತ್ತದೆ' ಎಂದು ಅಭಿಪ್ರಾಯಪಟ್ಟಿದೆ.

2021ರ ಮಾರ್ಚ್‌ನಲ್ಲಿ ಬೆಂಗಳೂರಿನ ಇಂದಿರಾನಗರ ಠಾಣೆಗೆ ಸಲ್ಲಿಸಿದ್ದ ದೂರು ಮತ್ತು ನಂತರ ದಾವಣಗೆರೆಯ ಮಹಿಳಾ ಪೊಲೀಸ್ ಠಾಣೆಯಲ್ಲಿ ಬೆಂಗಳೂರಿನ 29 ವರ್ಷ ವಯಸ್ಸಿನ ಮಹಿಳೆ ನೀಡಿದ ದೂರನ್ನು ಪ್ರಶ್ನಿಸಿ ದಾವಣಗೆರೆಯ 30 ವರ್ಷದ ವ್ಯಕ್ತಿ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ಈ ಆದೇಶ ನೀಡಿದ್ದಾರೆ. 

ದೂರುದಾರರು 2013ರಲ್ಲಿ ಅರ್ಜಿದಾರರೊಂದಿಗೆ ಫೇಸ್‌ಬುಕ್ ಮೂಲಕ ಸಂಪರ್ಕಕ್ಕೆ ಬಂದಿದ್ದರು. ನಂತರ, ಅವರು ಸ್ನೇಹಿತರಾದರು ಮತ್ತು 2019ರವರೆಗೆ ಇದು ಮುಂದುವರೆಯಿತು. ಅರ್ಜಿದಾರರು ವಿವಾಹದ ಭರವಸೆ ಮೇಲೆ ಲೈಂಗಿಕ ಸಂಭೋಗವನ್ನು ಹೊಂದಿದ್ದರು ಮತ್ತು 2019ರ ನಂತರ ಈ ಎಲ್ಲಾ ಅನ್ಯೋನ್ಯತೆಯನ್ನು ನಿಲ್ಲಿಸಿದರು ಎಂದು ಮಹಿಳೆ ಆರೋಪಿಸಿದ್ದಾರೆ.

ಇದು ಒಂದು ಅಥವಾ ಎರಡಲ್ಲ. ಅರ್ಜಿದಾರರು ಮತ್ತು ದೂರುದಾರರ ನಡುವೆ ಆರು ವರ್ಷಗಳ ಸಮ್ಮತಿಯ ದೈಹಿಕ/ಲೈಂಗಿಕ ಸಂಬಂಧವಾಗಿದೆ. ಆರು ವರ್ಷಗಳ ಒಮ್ಮತದ ಲೈಂಗಿಕ ಕ್ರಿಯೆಯ ನಂತರ ಇಬ್ಬರ ನಡುವೆ ಅನ್ಯೋನ್ಯತೆ ಮರೆಯಾಗುತ್ತಿರುವುದು ಐಪಿಸಿಯ ಸೆಕ್ಷನ್ 375 ರ ಅಡಿಯಲ್ಲಿ ಬರುತ್ತದೆ ಎಂದರ್ಥವಲ್ಲ. ಆದ್ದರಿಂದ, ಇದನ್ನು ಅತ್ಯಾಚಾರ ಎಂದು ಅರ್ಥೈಸಲಾಗುವುದಿಲ್ಲ. ಆದರೆ, ಇದು ಸೆಕ್ಷನ್ 376 ಅಡಿಯಲ್ಲಿ ಶಿಕ್ಷಾರ್ಹ ಎಂದು ನ್ಯಾಯಾಲಯ ತಿಳಿಸಿದೆ.

ಅರ್ಜಿದಾರರ ಪರ ವಕೀಲರು, ದೂರುದಾರರು ಹಲವಾರು ಜನರ ವಿರುದ್ಧ ಅಪರಾಧಗಳನ್ನು ದಾಖಲಿಸುವ ಅಭ್ಯಾಸವನ್ನು ಹೊಂದಿದ್ದಾರೆ ಎಂದು ಹೇಳಿದರು. ಅಂತಹ ಒಂದು ನಿದರ್ಶನವನ್ನು ಉಲ್ಲೇಖಿಸಿದ ವಕೀಲರು, 2014ರಲ್ಲಿ ಇನ್ನೊಬ್ಬ ವ್ಯಕ್ತಿಯ ವಿರುದ್ಧ ಸಲ್ಲಿಸಿದ ಇದೇ ರೀತಿಯ ದೂರು 2016ರಲ್ಲಿ ಖುಲಾಸೆಗೊಂಡಿತು ಎಂದು ವಿವರಿಸಿದರು. ಅವರು ತಮ್ಮ ನಿಲುವನ್ನು ಬದಲಾಯಿಸಿದ್ದರಿಂದ ಪ್ರಕರಣದ ಖುಲಾಸೆಗೆ ಕಾರಣವಾಯಿತು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com