ಚಿಕ್ಕಬಳ್ಳಾಪುರ: 4 ಕಿಮೀ ನಡೆದು ಬೆಟ್ಟದಿಂದ ಅಪರಿಚಿತ ಶವ ಹೊತ್ತು ತಂದ ಪೊಲೀಸರು ಮತ್ತು ಸೈನಿಕರು!

ಚಿಕ್ಕಬಳ್ಳಾಪುರದ ಅವಲಕುರ್ಕಿ ಗ್ರಾಮದ ಗುಡ್ಡದಲ್ಲಿ ಪತ್ತೆಯಾದ ವೃದ್ಧೆಯ ಮೃತದೇಹವನ್ನು ಬೆಟ್ಟದಿಂದ ಹೊತ್ತು ತಂದು ಜನರಲ್ ಆಸ್ಪತ್ರೆಗೆ ರವಾನಿಸಿದ್ದಾರೆ.
ಶವ ಹೊತ್ತು ತಂದ ಸೈನಿಕರು ಮತ್ತು ಪೊಲೀಸರು
ಶವ ಹೊತ್ತು ತಂದ ಸೈನಿಕರು ಮತ್ತು ಪೊಲೀಸರು

ಬೆಂಗಳೂರು: ಚಿಕ್ಕಬಳ್ಳಾಪುರದ ಅವಲಕುರ್ಕಿ ಗ್ರಾಮದ ಗುಡ್ಡದಲ್ಲಿ ಪತ್ತೆಯಾದ ವೃದ್ಧೆಯ ಮೃತದೇಹವನ್ನು ಬೆಟ್ಟದಿಂದ ಹೊತ್ತು ತಂದು ಜನರಲ್ ಆಸ್ಪತ್ರೆಗೆ ರವಾನಿಸಿದ್ದಾರೆ.

ಚಿಕ್ಕಬಳ್ಳಾಪುರದ ಅವಲಕುರ್ಕಿ ಗ್ರಾಮದ ಇಶಾ ಫೌಂಡೇಶನ್ ಬಳಿಯ ಗುಡ್ಡದಲ್ಲಿ ಸೇನಾ ಸಿಬ್ಬಂದಿ ಕಸರತ್ತು ನಡೆಸುತ್ತಿದ್ದಾಗ ವೃದ್ಧೆಯ ಶವವನ್ನು ಗಮನಿಸಿದ್ದಾರೆ. ಈ ವಿಷಯವನ್ನು ಎಸ್ಪಿ ಡಿಎಲ್ ನಾಗೇಶ್ ಅವರಿಗೆ ಮಾಹಿತಿ ನೀಡಿ ಸ್ಥಳಕ್ಕೆ ಆಗಮಿಸುವಂತೆ ತಿಳಿಸಿದ್ದಾರೆ.

ದಟ್ಟವಾದ ಪೊದೆಗಳು ಮತ್ತು ಗುಡ್ಡಗಾಡು ಪ್ರದೇಶದಿಂದಾಗಿ ಆಂಬ್ಯುಲೆನ್ಸ್ ಸೇರಿದಂತೆ ವಾಹನಗಳು ಸ್ಥಳಕ್ಕೆ ತಲುಪಲು ಸಾಧ್ಯವಾಗಲಿಲ್ಲ. ಪೊಲೀಸರು ಸುಮಾರು ನಾಲ್ಕು ಕಿಲೋಮೀಟರ್ ನಡೆದು ಶವವನ್ನು ಸಾಗಿಸಿದರು.

ನಂತರ ಪೊಲೀಸರು ಮತ್ತು ಸೇನಾ ಸಿಬ್ಬಂದಿ ಒಟ್ಟಾಗಿ ಕೆಲಸ ಮಾಡಿ ಬಿದಿರಿನ ಕೋಲುಗಳ ಸಹಾಯದಿಂದ ಶವವನ್ನು ಹೆಗಲ ಮೇಲೆ ಹೊತ್ತು ಆಂಬುಲೆನ್ಸ್ ತಲುಪಲು 4 ಕಿ.ಮೀ. ನಡೆದರು. ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ನಾಗೇಶ್, ಪ್ರಕರಣವನ್ನು ದಾಖಲಿಸಲಾಗಿದೆ ಮತ್ತು ಮೃತದೇಹವನ್ನು ಗುರುತಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದರು. ಶವವನ್ನು ಹೊತ್ತೊಯ್ಯಲು ಪೊಲೀಸರು ಮತ್ತು ಭಾರತೀಯ ಸೇನೆಯ ಸಿಬ್ಬಂದಿಯ ಪ್ರಯತ್ನವನ್ನು ಅವರು ಶ್ಲಾಘಿಸಿದರು.

ಈ ಸಂಬಂಧ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪರಿಚಿತ ವ್ಯಕ್ತಿಯ ಶವವನ್ನು ಜಿಲ್ಲಾಸ್ಪತ್ರೆಯ ಶೈತ್ಯಾಗಾರದಲ್ಲಿ ಇಡಲಾಗಿದ್ದು, ಮೃತರ ವಾರಸುದಾರರು ಯಾರಾದರೂ ಇದ್ದರೆ ತಮ್ಮನ್ನು ಸಂಪರ್ಕಿಸುವಂತೆ ಗ್ರಾಮಾಂತರ ಪೋಲಿಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com