ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನಕಲಿ ಇನ್‌ಸ್ಟಾಗ್ರಾಮ್ ಐಡಿ ಸೃಷ್ಟಿಸಿ ನಗ್ನ ವಿಡಿಯೋ ಪೋಸ್ಟ್: ಬಾಲಕಿ ವಿರುದ್ಧ ಪ್ರಕರಣ ದಾಖಲು

ಮತ್ತೊಬ್ಬ ಬಾಲಕಿಯ ಫೋನ್ ನಂಬರ್ ಹಾಗೂ ಇಮೇಲ್ ಐಡಿ ಬಳಸಿಕೊಂಡು ನಕಲಿ ಇನ್‌ಸ್ಟಾಗ್ರಾಮ್ ಐಡಿ ಸೃಷ್ಟಿಸಿ, ನಗ್ನ ವಿಡಿಯೋಗಳನ್ನು ಪೋಸ್ಟ್ ಮಾಡಿದ ಬಾಲಕಿಯೊಬ್ಬಳ ವಿರುದ್ಧ ಉಡುಪಿ ಸೈಬರ್ ಎಕನಾಮಿಕ್ ಆ್ಯಂಡ್ ನಾರ್ಕೋಟಿಕ್ ಕ್ರೈಂ (ಸಿಇಎನ್) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published on

ಉಡುಪಿ: ಮತ್ತೊಬ್ಬ ಬಾಲಕಿಯ ಫೋನ್ ನಂಬರ್ ಹಾಗೂ ಇಮೇಲ್ ಐಡಿ ಬಳಸಿಕೊಂಡು ನಕಲಿ ಇನ್‌ಸ್ಟಾಗ್ರಾಮ್ ಐಡಿ ಸೃಷ್ಟಿಸಿ, ನಗ್ನ ವಿಡಿಯೋಗಳನ್ನು ಪೋಸ್ಟ್ ಮಾಡಿದ ಬಾಲಕಿಯೊಬ್ಬಳ ವಿರುದ್ಧ ಉಡುಪಿ ಸೈಬರ್ ಎಕನಾಮಿಕ್ ಆ್ಯಂಡ್ ನಾರ್ಕೋಟಿಕ್ ಕ್ರೈಂ (ಸಿಇಎನ್) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಗಸ್ಟ್ 7 ರಂದು ಕಾರ್ಕಳದ ಸಂತ್ರಸ್ತ ಬಾಲಕಿಯ ತಾಯಿ ದೂರು ದಾಖಲಿಸಿದ್ದಾರೆ. ನನ್ನ ಮಗಳ ಪೋನ್ ನಂಬರ್ ಹಾಗೂ ಇಮೇಲ್ ಐಡಿ ಬಳಸಿಕೊಂಡು ನಕಲಿ ಖಾತೆ ಸೃಷ್ಟಿಸಲಾಗಿದ್ದು, ನಗ್ನ ಚಿತ್ರಗಳನ್ನ ಪೋಸ್ಟ್ ಮಾಡಿದ್ದಾಳೆ. ಈ ಮೂಲಕ ನನ್ನ ಮಗಳೇ ಪೋಸ್ಟ್ ಮಾಡಿದ್ದಾಳೆಂದು ಭಾವನೆ ಮೂಡುವಂತೆ ಮಾಡಿದ್ದಾಳೆಂದು ದೂರಿನಲ್ಲಿ ಹೇಳಿಕೊಂಡಿದ್ದಾರೆ.

ಆಗಸ್ಟ್ 4 ಮತ್ತು 5 ರಂದು ಪೋಸ್ಟ್‌ಗಳನ್ನು ಗಮನಿಸಿದ ಪೋಷಕರು ಆಗಸ್ಟ್ 7 ರಂದು ದೂರು ದಾಖಲಿಸಿದ್ದಾರೆ.

ದೂರಿ ಹಿನ್ನೆಲೆಯಲ್ಲಿ ಸಿಇಎನ್ ಪೊಲೀಸರು, ಅಪ್ರಾಪ್ತ ಬಾಲಕಿಯ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್ 66 (ಸಿ) ಮತ್ತು 67 (ಬಿ) ಅಡಿಯಲ್ಲಿ ದೂರು ದಾಖಲಿಸಿದ್ದಾರೆ.

ಇದಕ್ಕೂ ಮುನ್ನ ಆಗಸ್ಟ್ 1 ರಂದು ಉಡುಪಿಯ 14 ವರ್ಷದ ಬಾಲಕಿಯ ತಾಯಿ ತನ್ನ ಮಗಳ ಮಾರ್ಫ್ ಮಾಡಿದ ಅಶ್ಲೀಲ ಚಿತ್ರಗಳನ್ನು ಪ್ರಸಾರ ಮಾಡುತ್ತಿರುವ ಬಗ್ಗೆ ಉಡುಪಿ ಸಿಇಎನ್ ಪೊಲೀಸರಿಗೆ ದೂರು ನೀಡಿದ್ದರು. ಜುಲೈ 30 ರಂದು ಸ್ನ್ಯಾಪ್‌ಚಾಟ್‌ನಲ್ಲಿನ ತನ್ನ ಸಂಪರ್ಕಗಳಿಗೆ ನಕಲಿ ಖಾತೆಯಿಂದ ವೀಡಿಯೊವನ್ನು ಕಳುಹಿಸಲಾಗಿದೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com