ಮೈಸೂರಿನಲ್ಲಿ ಮಾದಕ ವಸ್ತು ಸೇವಿಸಿ ಕೇರಳ ಯುವಕರ 'ಮೋಜು-ಮಸ್ತಿ': ವಿಡಿಯೋ, ಚಿತ್ರಗಳು ವೈರಲ್!

ಮೈಸೂರು ಜಿಲ್ಲೆಯ ಗೋಳೂರಿನ ಕೃಷಿ ಭೂಮಿಯಲ್ಲಿ ಯುವಕ-ಯುವತಿಯರ ಗುಂಪು ಮಾದಕ ದ್ರವ್ಯ ಸೇವಿಸಿದ ಸ್ಥಿತಿಯಲ್ಲಿನ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಕೇರಳ ಯುವಕರ ಮೋಜು ಮಸ್ತಿ
ಕೇರಳ ಯುವಕರ ಮೋಜು ಮಸ್ತಿ

ಮೈಸೂರು: ಮೈಸೂರು ಜಿಲ್ಲೆಯ ಗೋಳೂರಿನ ಕೃಷಿ ಭೂಮಿಯಲ್ಲಿ ಯುವಕ-ಯುವತಿಯರ ಗುಂಪು ಮಾದಕ ದ್ರವ್ಯ ಸೇವಿಸಿದ ಸ್ಥಿತಿಯಲ್ಲಿನ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಮೂಲಗಳ ಪ್ರಕಾರ, ಕೇರಳ ಮೂಲದ ಯುವಕರು ಗೋಳೂರು ಬಳಿ ಸ್ಥಳೀಯರಿಗೆ ಸೇರಿದ ಕೃಷಿ ಜಮೀನಿನಲ್ಲಿ ತಂಗಿದ್ದರು. ವೈರಲ್ ಆಗಿರುವ ವೀಡಿಯೊದಲ್ಲಿ, ಓರ್ವ ಯುವತಿ ನಿಯಂತ್ರಣವನ್ನು ಕಳೆದುಕೊಂಡು ನೆಲದ ಮೇಲೆ ಉರುಳುತ್ತಿರುವುದನ್ನು ಕಾಣಬಹುದು. ಆಕೆಯ ಸ್ನೇಹಿತರು ಆಕೆ ನಿಲ್ಲಲು ಸಹಾಯ ಮಾಡಲು ಪ್ರಯತ್ನಿಸುತ್ತಿದ್ದರೂ ಸಹ ಯುವತಿಗೆ ಸಾಧ್ಯವಾಗುತ್ತಿಲ್ಲ. ಅಲ್ಲದೆ ಯುವಕರು ಹೇಗಾದರೂ ಅವಳನ್ನು ತಮ್ಮೊಂದಿಗೆ ಕರೆದೊಯ್ಯಲು ಮುಂದಾಗಿದ್ದನ್ನು ಕಾಣಬಹುದು.

ಯುವಕರ ಆಕ್ಷೇಪಾರ್ಹ ಕೃತ್ಯದ ಬಗ್ಗೆ ಸ್ಥಳೀಯರು ಪ್ರಶ್ನಿಸಿದಾಗ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಬೆಳವಣಿಗೆಯು ಕರ್ನಾಟಕ-ಕೇರಳ ಗಡಿಯಲ್ಲಿ ಗಾಂಜಾ ಸೇರಿದಂತೆ ಮಾದಕ ವಸ್ತುಗಳ ಮಾರಾಟ ಮತ್ತು ಜಾಲದ ಬಗ್ಗೆ ಪ್ರಶ್ನೆಯನ್ನು ಹುಟ್ಟುಹಾಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com