ಬೆಂಗಳೂರು ಉಪನಗರ ರೈಲು ಯೋಜನೆ: ಎರಡು ಕಾರಿಡಾರ್‌ಗಳ ಜೋಡಣೆಗೆ ರೈಲ್ವೆಯಿಂದ ವಿಳಂಬ- K-RIDE 

ಬೆಂಗಳೂರು ಉಪನಗರ ರೈಲು ಯೋಜನೆ ಅನುಷ್ಠಾನದ ನೋಡಲ್ ಏಜೆನ್ಸಿ ಕೆ-ರೈಡ್ ಭಾರತೀಯ ರೈಲ್ವೆ ವಿರುದ್ಧ ವಿಳಂಬದ ಆರೋಪ ಮಾಡಿದೆ. ನೈಋತ್ಯ ರೈಲ್ವೆ  ಗ್ರೀನ್ ಸಿಗ್ನಲ್ ತೋರದ ಕಾರಣ 148.17 ಕಿಮೀ ಯೋಜನೆಯ ನಾಲ್ಕು ಕಾರಿಡಾರ್‌ಗಳ ಪೈಕಿ ಎರಡಕ್ಕೆ ಟೆಂಡರ್ ಕರೆಯಲು ಸಾಧ್ಯವಾಗಲಿಲ್ಲ ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಬೆಂಗಳೂರು ಉಪನಗರ ರೈಲು ಯೋಜನೆ ಅನುಷ್ಠಾನದ ನೋಡಲ್ ಏಜೆನ್ಸಿ ಕೆ-ರೈಡ್ ಭಾರತೀಯ ರೈಲ್ವೆ ವಿರುದ್ಧ ವಿಳಂಬದ ಆರೋಪ ಮಾಡಿದೆ. ನೈಋತ್ಯ ರೈಲ್ವೆ  ಗ್ರೀನ್ ಸಿಗ್ನಲ್ ತೋರದ ಕಾರಣ 148.17 ಕಿಮೀ ಯೋಜನೆಯ ನಾಲ್ಕು ಕಾರಿಡಾರ್‌ಗಳ ಪೈಕಿ ಎರಡಕ್ಕೆ ಟೆಂಡರ್ ಕರೆಯಲು ಸಾಧ್ಯವಾಗಲಿಲ್ಲ ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಾರಿಡಾರ್ 1 (ಕೆಎಸ್‌ಆರ್ ಬೆಂಗಳೂರು-ದೇವನಹಳ್ಳಿ) ಮತ್ತು ಕಾರಿಡಾರ್ 3 (ಕೆಂಗೇರಿಯಿಂದ ವೈಟ್‌ಫೀಲ್ಡ್) ಮಾರ್ಗದ ಜೋಡಣೆಗೆ ಸಂಬಂಧಿಸಿದಂತೆ  ಪ್ರಸ್ತಾವನೆಯನ್ನು ರೈಲ್ವೆಗೆ ಸಲ್ಲಿಸಿದ್ದೇವೆ. ರೈಲ್ವೆ ಇಲಾಖೆ ಇನ್ನೂ ಅನುಮೋದನೆ ನೀಡಿಲ್ಲ. ಹೀಗಾಗಿ ಕಾಮಗಾರಿ ಆರಂಭಿಸಲು ಟೆಂಡರ್ ನೀಡಲು ಸಾಧ್ಯವಾಗುತ್ತಿಲ್ಲ ಎಂದರು.

ಜುಲೈ 5, 2022 ರಂದು ವಿಮಾನ ನಿಲ್ದಾಣದ ಉಪನಗರ ಮಾರ್ಗದ ಪ್ರಸ್ತಾವನೆಯನ್ನು ಬೆಂಗಳೂರು ವಿಭಾಗಕ್ಕೆ ಸಲ್ಲಿಸಲಾಗಿತ್ತು. ನೈರುತ್ಯ ರೈಲ್ವೆ ಸೆಪ್ಟೆಂಬರ್ 22 ರಂದು ಅವಲೋಕನ ಮಾಡಿ ಕಳುಹಿಸಿದ್ದು, ನಾವು ಕಳೆದ ವರ್ಷ  ನವೆಂಬರ್ 22 ರಂದು ಅದಕ್ಕೆ ಉತ್ತರಿಸಿದ್ದೇವೆ. ಆದರೆ, ಅದರ ಜೋಡಣೆಗೆ  ನಮಗೆ ಇನ್ನೂ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ  ಎಂದು ಅವರು ತಿಳಿಸಿದರು. 

ಕೆಂಗೇರಿಯಿಂದ ವೈಟ್‌ಫೀಲ್ಡ್‌ವರೆಗಿನ ಕಾರಿಡಾರ್-3 ಮಾರ್ಗದ  ಕುರಿತು ಮಾತನಾಡಿದ ಮತ್ತೋರ್ವ ಅಧಿಕಾರಿ, ವೈಟ್‌ಫೀಲ್ಡ್ ಮತ್ತು ಕಂಟೋನ್ಮೆಂಟ್ ನಡುವೆ ಜೋಡಣೆ ಯೋಜನೆಯನ್ನು ಕಳೆದ ವರ್ಷ ಡಿಸೆಂಬರ್ 29 ರಂದು ಗತಿ ಶಕ್ತಿಯ ಮುಖ್ಯ ಯೋಜನಾ ವ್ಯವಸ್ಥಾಪಕರಿಗೆ ಅನುಮೋದನೆಗಾಗಿ ಸಲ್ಲಿಸಲಾಗಿದೆ ಎಂದು ಹೇಳಿದರು.

"ಭಾರತೀಯ ರೈಲ್ವೇ ಮತ್ತು BSRP ಎರಡರಿಂದಲೂ ಕಾರಿಡಾರ್ ಹಂಚಿಕೆಯಲ್ಲಿ ಅಸಮರ್ಥತೆಯ ಸಮಸ್ಯೆಗಳ ಬಗ್ಗೆ ವಿವರವಾದ ಅಧ್ಯಯನವನ್ನು ಕೈಗೊಳ್ಳಲು ನೈರುತ್ಯ ರೈಲ್ವೆ ಈ ವರ್ಷ ಮಾರ್ಚ್ 13 ರಂದು K-RIDE ಗೆ ಸಲಹೆ ನೀಡಿತು. ಸಬರ್ಬನ್ ರೈಲು ಮತ್ತು ಭಾರತೀಯ ರೈಲ್ವೇಗಳ ನಡುವೆ ಕಾರಿಡಾರ್ ಅನ್ನು ಹಂಚಿಕೊಳ್ಳಲು ಕಾರ್ಯಸಾಧ್ಯತೆಯ ಅಧ್ಯಯನವನ್ನು ಕೈಗೊಳ್ಳಲು ರೈಟ್ಸ್‌ಗೆ ಮೇ 18, 2023 ರಂದು ಅಧಿಕೃತ ಪತ್ರವನ್ನು ನೀಡಿದೆ. ಬೆಂಗಳೂರು ಕಂಟೋನ್ಮೆಂಟ್ ಮತ್ತು ಕೆಂಗೇರಿ ನಡುವಿನ ಜೋಡಣೆ ಅಂತಿಮ ಹಂತದಲ್ಲಿದೆ ಎಂದು ಅವರು ಹೇಳಿದರು. 

ನೈರುತ್ಯ ರೈಲ್ವೆ ವಿಭಾಗದ ಮುಖ್ಯ ಸಾರಿಗೆ ಯೋಜನಾ ವ್ಯವಸ್ಥಾಪಕ ಮತ್ತು ಮುಖ್ಯ ಯೋಜನೆ ಮತ್ತು ವಿನ್ಯಾಸ ಎಂಜಿನಿಯರ್ ಇನ್ನೂ ಒಪ್ಪಿಗೆ ನೀಡಿದ ಹೊರತಾಗಿಯೂ ಕಾರಿಡಾರ್ 4 ಅಥವಾ ಕನಕ ಮಾರ್ಗ (ಹೀಲಲಿಗೆಯಿಂದ ರಾಜನುಕುಂಟೆಗೆ) ನಡೆಯುತ್ತಿರುವ ಟೆಂಡರ್ ನ್ನು ಮೌಲ್ಯಮಾಪನ ಮಾಡಲಾಗುತ್ತಿದೆ ಎಂದು ಇನ್ನೊಬ್ಬ ಅಧಿಕಾರಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com