ಟೊಮೆಟೊ ಬಳಿಕ ಇದೀಗ ಈರುಳ್ಳಿ ಸರದಿ: ಗ್ರಾಹಕರ ಕಣ್ಣಲ್ಲಿ ನೀರು ತರಿಸುವ ಸಾಧ್ಯತೆ?

ಗಗನಕ್ಕೇರಿದ್ದ ಟೊಮ್ಯಾಟೋ ಬೆಲೆ ಇಳಿಮುಖವಾಗುತ್ತಿದೆ ಎಂದು ಸಮಾಧಾನಪಡುವಷ್ಟರಲ್ಲಿ ಈರುಳ್ಳಿ ಬೆಲೆ ಗಗನಕ್ಕೇರುತ್ತಿದ್ದು, ಈ ಬೆಳವಣಿಗೆ ಇದೀಗ ಆತಂಕ ಸೃಷ್ಟಿಸುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಗಗನಕ್ಕೇರಿದ್ದ ಟೊಮ್ಯಾಟೋ ಬೆಲೆ ಇಳಿಮುಖವಾಗುತ್ತಿದೆ ಎಂದು ಸಮಾಧಾನಪಡುವಷ್ಟರಲ್ಲಿ ಈರುಳ್ಳಿ ಬೆಲೆ ಗಗನಕ್ಕೇರುತ್ತಿದ್ದು, ಈ ಬೆಳವಣಿಗೆ ಇದೀಗ ಆತಂಕ ಸೃಷ್ಟಿಸುತ್ತಿದೆ.

ಕಳೆದ ವಾರ ಚಿಲ್ಲರೆ ಅಂಗಡಿಗಳಲ್ಲಿ ಕೆಜಿಗೆ 25 ರೂ.ಗಳಷ್ಟಿದ್ದ ಈರುಳ್ಳಿ ಬೆಲೆ, ಗುಣಮಟ್ಟಕ್ಕೆ ಅನುಗುಣವಾಗಿ 35-40 ರೂ.ಗೆ ತಲುಪಿದೆ, ಟಾಪ್ ಎಂಡ್ ಸೂಪರ್ಮಾರ್ಕೆಟ್‌ಗಳಲ್ಲಿ ಕೆಜಿಗೆ 45 ರೂಗಳಂತೆ ಮಾರಾಟ ಮಾಡಲಾಗುತ್ತಿದೆ. ಬೆಂಗಳೂರಿನಾದ್ಯಂತ ಚಿಲ್ಲರೆ ಅಂಗಡಿಗಳು ಮತ್ತು ಸೂಪರ್‌ಮಾರ್ಕೆಟ್‌ಗಳಲ್ಲಿ ಕಳೆದ ಒಂದು ವಾರದಿಂದ ಈರುಳ್ಳಿ ಬೆಲೆಯಲ್ಲಿ ಕೆಜಿಗೆ ಸುಮಾರು 12-15 ರೂ ರಷ್ಟು ಏರಿಕೆಯಾಗಿದೆ.

ಈ ನಡುವೆ 5 ರಾಜ್ಯಗಳಲ್ಲಿ ಚುನಾವಣೆ ಇರುವ ಪರಿಣಾಮ ಬೆಲೆ ಏರಿಕೆ ಜನರ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿದ್ದು, ಈ ಹಿನ್ನೆಲೆಯಲ್ಲಿ ಬೆಲೆ ಏರಿಕೆ ನಿಯಂತ್ರಣಕ್ಕೆ ಕ್ರಮಕೈಗೊಳ್ಳಲು ಮುಂದಾಗಿದೆ ಎಂದು ತಿಳಿದುಬಂದಿದೆ.

ಇತ್ತೀಚೆಗೆ ಕೇಂದ್ರ ಸರ್ಕಾರ ಅಧಿಕಾರಿಗಳು ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ ಮತ್ತು ರಾಷ್ಟ್ರೀಯ ಸಹಕಾರಿ ಗ್ರಾಹಕ ಒಕ್ಕೂಟದೊಂದಿಗೆ ಸರಣಿ ಸಭೆಗಳನ್ನು ನಡೆಸಿತು.

ಸಭೆಯಲ್ಲಿ  ಬೆಲೆಗಳನ್ನು ಇಳಿಕೆ ಮಾಡಲು ರಾಜ್ಯಗಳು ಮತ್ತು ಮಾರುಕಟ್ಟೆಗಳಲ್ಲಿ ಸಂಗ್ರಹವಾಗಿರುವ ಬೃಹತ್ 3 ಲಕ್ಷ ಮೆಟ್ರಿಕ್ ಟನ್ ಬಫರ್ ಸ್ಟಾಕ್ ಅನ್ನು ಬಳಸಲು ನಿರ್ಧಾರ ಕೈಗೊಳ್ಳಲಾಯಿತು.

ರಾಜ್ಯ ಕೃಷಿ ಸಚಿವ ಚಲುವರಾಯಸ್ವಾಮಿ ಅವರು ಮಾತನಾಡಿ, ಸಮಸ್ಯೆಯನ್ನು ಪರಿಶೀಲಿಸಲಾಗುತ್ತಿದ್ದು, ಸರಿಪಡಿಸುವ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಬೆಂಗಳೂರಿನ ಈರುಳ್ಳಿ ವರ್ತಕರ ಸಂಘದ ಕಾರ್ಯದರ್ಶಿಯೂ ಆಗಿರುವ ಎಪಿಎಂಸಿ ಯಾರ್ಡ್ ವ್ಯಾಪಾರಿ ರವಿಶಂಕರ್ ಬಿ ಮಾತನಾಡಿ, ‘ಮುಂಗಾರು ಮಳೆ ಹಿನ್ನೆಲೆಯಲ್ಲಿ ಚಿತ್ರದುರ್ಗ, ದಾವಣಗೆರೆ ಹಾಗೂ ಕರ್ನಾಟಕದ ಇತರೆಡೆಯಿಂದ ದಾಸ್ತಾನು ಲಭ್ಯವಿಲ್ಲ. ಈ ಪ್ರದೇಶಗಳಿಂದ ಈರುಳ್ಳಿ ಸರಬರಾಜಿನಲ್ಲಿ ವಿಳಂಬವಾಗಬಹುದು, ಇದರಿಂದಾಗಿ ಬೆಲೆಗಳು ತೀವ್ರವಾಗಿ ಏರಿಕೆಯಾಗಬಹುದು. ಸರ್ಕಾರವು ಮಾರುಕಟ್ಟೆಗೆ ಬಫರ್ ಸ್ಟಾಕ್‌ಗಳನ್ನು ಬಿಡುಗಡೆ ಮಾಡಿದರೆ, ಸಮಸ್ಯೆ ಪರಿಹರಿಸಬಹುದು ಎಂದು ಹೇಳಿದ್ದಾರೆ.

ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ರಾಜ್ಯದಲ್ಲಿ ಸುಮಾರು 4,000 ಹೆಕ್ಟೇರ್‌ನಲ್ಲಿ ಬೆಳೆ ಕೊರತೆಯಾಗುವ ನಿರೀಕ್ಷೆಯಿದೆ. ಮುಂಗಾರು ಮಳೆ ವಿಳಂಬವಾಗಿರುವುದರಿಂದ ಸುಮಾರು 6-8 ವಾರಗಳ ಕೊಯ್ಲು ವಿಳಂಬವಾಗಿದೆ. ಮಹಾರಾಷ್ಟ್ರದ ನಾಸಿಕ್ ನಲ್ಲಿಯೂ ಇದೇ ರೀತಿಯ ಸಮಸ್ಯೆಯಾಗಿದೆ. ಹೀಗಾಗಿ ಬೆಳೆ ಉತ್ಪಾದನೆಯಲ್ಲಿ ಕೊರತೆಗಳು ಎದುರಾಗಿದೆ ಎಂದು ತಿಳಿಸಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com