ಸಂಗ್ರಹ ಚಿತ್ರ
ರಾಜ್ಯ
ಗದಗ: ದನ ತೊಳೆಯಲು ಹೋಗಿದ್ದ ಇಬ್ಬರು ಬಾಲಕರು ನೀರುಪಾಲು
ಗದಗ ಜಿಲ್ಲೆಯ ರಹೀಮತ್ ನಗರದಲ್ಲಿ ದನ ತೊಳೆಯಲು ನದಿಗೆ ಇಳಿದಿದ್ದ ಇಬ್ಬರು ಬಾಲಕರು ನೀರುಪಾಲಾಗಿದ್ದಾರೆ.
ಗದಗ: ಗದಗ ಜಿಲ್ಲೆಯ ರಹೀಮತ್ ನಗರದಲ್ಲಿ ದನ ತೊಳೆಯಲು ನದಿಗೆ ಇಳಿದಿದ್ದ ಇಬ್ಬರು ಬಾಲಕರು ನೀರುಪಾಲಾಗಿದ್ದಾರೆ.
ಮೃತರನ್ನು 12 ವರ್ಷದ ಮೊಹಮ್ಮದ್ ಅಮನ್ ಮತ್ತು 14 ವರ್ಷದ ಸಂತೋಷ್ ಕುಂಬಾರ್ ಎಂದು ಗುರುತಿಸಲಾಗಿದೆ. ಇನ್ನು ಮತ್ತಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮೃತ ಬಾಲಕರ ಮೃತದೇಹ ಹೊರತೆಗೆಯಲು ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯ ನಡೆಸಿದ್ದಾರೆ. ಗದಗ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ