ಹಾಸನ ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳ ಆಟಾಟೋಪ: ಪೊಲೀಸರ ದಿಢೀರ್ ದಾಳಿ ವೇಳೆ ಮಾದಕ ವಸ್ತು, ಮೊಬೈಲ್ ಫೋನ್​ಗಳು ಪತ್ತೆ!

ಹಾಸನ ಜಿಲ್ಲಾ ಕಾರಾಗೃಹದ ಪೊಲೀಸ್ ವರಿಷ್ಠಾಧಿಕಾರಿ ತಮ್ಮಯ್ಯ ನೇತೃತ್ವದ ತಂಡ ದಿಢೀರ್ ದಾಳಿ ನಡೆಸಿದ್ದು, ಈ ವೇಳೆ ಕೈದಿಗಳಿಂದ 18 ಮೊಬೈಲ್‌ಗಳು, ಐದು ಸ್ಮಾರ್ಟ್‌ಫೋನ್‌ಗಳು, ಗಾಂಜಾ ಪ್ಯಾಕೆಟ್‌ಗಳು, ಬೀಡಿ ಮತ್ತು ಸಿಗರೇಟ್ ಪ್ಯಾಕೆಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಕಾರಾಗೃಹದಲ್ಲಿ ವಶಕ್ಕೆ ಪಡೆಯಲಾಗಿರುವ ಮೊಬೈಲ್ ಫೋನ್ ಗಳು.
ಕಾರಾಗೃಹದಲ್ಲಿ ವಶಕ್ಕೆ ಪಡೆಯಲಾಗಿರುವ ಮೊಬೈಲ್ ಫೋನ್ ಗಳು.

ಹಾಸನ: ಹಾಸನ ಜಿಲ್ಲಾ ಕಾರಾಗೃಹದ ಪೊಲೀಸ್ ವರಿಷ್ಠಾಧಿಕಾರಿ ತಮ್ಮಯ್ಯ ನೇತೃತ್ವದ ತಂಡ ದಿಢೀರ್ ದಾಳಿ ನಡೆಸಿದ್ದು, ಈ ವೇಳೆ ಕೈದಿಗಳಿಂದ 18 ಮೊಬೈಲ್‌ಗಳು, ಐದು ಸ್ಮಾರ್ಟ್‌ಫೋನ್‌ಗಳು, ಗಾಂಜಾ ಪ್ಯಾಕೆಟ್‌ಗಳು, ಬೀಡಿ ಮತ್ತು ಸಿಗರೇಟ್ ಪ್ಯಾಕೆಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಎಸ್ಪಿ ಹರಿರಾಂ ಶಂಕರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಮ್ಮಯ್ಯ ಹಾಗೂ ಇನ್‌ಸ್ಪೆಕ್ಟರ್ ರೇವಣ್ಣ ನೇತೃತ್ವದಲ್ಲಿ ಶುಕ್ರವಾರ ರಾತ್ರಿ ದಾಳಿ ನಡೆಸಲಾಗಿದ್ದು, ಶನಿವಾರ ಬೆಳಗಿನ ಜಾವದವರೆಗೂ ಪರಿಶೀಲನೆಗಳು ಮುಂದುವರೆದಿದ್ದವು. ಈ ವೇಳೆ ಕಾರಾಗೃಹದಲ್ಲಿ ಮೊಬೈಲ್, ಗಾಂಜಾ ಪೂರೈಕೆ ಬಗ್ಗೆ ತನಿಖೆ ಕೈಗೊಂಡಿದ್ದಾರೆ.

ದಾಳಿ ವೇಳೆ ಜೈಲಿನೊಳಗೆ ಸ್ಮಾರ್ಟ್‌ ಫೋನ್‌ಗಳು, ಮೊಬೈಲ್‌ಗಳು, ಗಾಂಜಾ, ಬಿಡಿ, ಸಿಗರೇಟ್ ಪತ್ತೆಯಾಗಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.

ಇವೆಲ್ಲ ಜೈಲಿನಲ್ಲಿ ನಿಷೇಧವಾಗಿದ್ದರೂ, ಅವುಗಳನ್ನು ಕೈದಿಗಳಿಗೆ ಯಾರು ಪೂರೈಕೆ ಮಾಡಿದ್ದಾರೆ ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ. ಅಧಿಕಾರಿಗಳು ಜೈಲು ಸಿಬ್ಬಂದಿಗಳನ್ನು ಕೂಲಂಕಷವಾಗಿ ವಿಚಾರಣೆ ನಡೆಸಿದ್ದಾರೆ.

ಜೈಲಿನಲ್ಲಿ ನಡೆಸಿರುವ ದಾಳಿ, ವಶಕ್ಕೆ ಪಡೆದಿರುವ ವಸ್ತುಗಳ ಕುರಿತು ಬಂಧಿಖಾನೆಯ ಡಿಜಿ ಅವರಿಗೆ ವರದಿ ಸಲ್ಲಿಸಲಾಗುತ್ತಿದ್ದು, ಸಂಬಂಧಿಸಿದವರ ವಿರುದ್ಧ ಅವರೇ ಕ್ರಮ ಕೈಗೊಳ್ಳಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಪೊಲೀಸರು 18 ಕೈದಿಗಳ ವಿರುದ್ಧವೂ ಪ್ರಕರಣ ದಾಖಲಿಸಿದ್ದಾರೆಂದು ತಿಳಿದುಬಂದಿದೆ.

ಜನವರಿ 19ರಂದು ಪೊಲೀಸರು ಇದೇ ಜೈಲಿನ ಮೇಲೆ ದಾಳಿ ನಡೆಸಿ, ಸೆಲ್‌ಫೋನ್‌ಗಳು, ಚಾಕು ಮತ್ತು ಗಾಂಜಾವನ್ನು ವಶಪಡಿಸಿಕೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com