ತುಳು ಭಾಷೆಯಲ್ಲಿ ಮೊಟ್ಟ ಮೊದಲ ಸಂಶೋಧನಾ ಅಧ್ಯಯನ ಪ್ರಕಟ: ಪಿಹೆಚ್ ಡಿ ಗಳಿಸಿದ ಮಂಗಳೂರಿನ ಡಾ ವಿ ಕೆ ಯಾದವ್

ತುಳು ಭಾಷೆಯಲ್ಲಿ ಸಂಶೋಧನಾ ಅಧ್ಯಯನವನ್ನು ಪ್ರಕಟಿಸಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಈ ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕರೊಬ್ಬರು ಪಾತ್ರರಾಗಿದ್ದಾರೆ. 
ಮಂಗಳೂರಿನ ಡಾ ವಿ ಕೆ ಯಾದವ್ ಮತ್ತು ಅವರ ಸಂಶೋಧನಾ ಗ್ರಂಥ
ಮಂಗಳೂರಿನ ಡಾ ವಿ ಕೆ ಯಾದವ್ ಮತ್ತು ಅವರ ಸಂಶೋಧನಾ ಗ್ರಂಥ

ಮಂಗಳೂರು: ತುಳು ಭಾಷೆಯಲ್ಲಿ ಸಂಶೋಧನಾ ಅಧ್ಯಯನವನ್ನು ಪ್ರಕಟಿಸಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಈ ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕರೊಬ್ಬರು ಪಾತ್ರರಾಗಿದ್ದಾರೆ. 

ಮಂಗಳೂರಿನ ಸಸಿಹಿತ್ಲುವಿನ ಡಾ.ವಿ.ಕೆ.ಯಾದವ್ ಅವರು ಆಂಧ್ರಪ್ರದೇಶದ ಕುಪ್ಪಂನ ದ್ರಾವಿಡ ವಿಶ್ವವಿದ್ಯಾಲಯದಿಂದ ‘ಮೊಗವೀರನ ಸಾಂಸ್ಕೃತಿಕ ಬದ್ಕ್ ಬೊಕ್ಕ ಆರ್ಥಿಕ ಚಿಂತನೆ’ (ಮೊಗವೀರ ಸಮುದಾಯದ ಸಾಂಸ್ಕೃತಿಕ ಮತ್ತು ಆರ್ಥಿಕ ಚಿಂತನೆಗಳು) ಕುರಿತು ತಮ್ಮ ಪಿಹೆಚ್ ಡಿ ಪೂರ್ಣಗೊಳಿಸಿದ್ದಾರೆ. ವಿಶ್ವವಿದ್ಯಾಲಯದ ತುಳು ಅಧ್ಯಯನ ವಿಭಾಗದ ಮುಖ್ಯಸ್ಥ ಡಾ. ಬಿ.ಎಸ್.ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ ಪಿ ಹೆಚ್ ಡಿ ಪದವಿ ಗಳಿಸಿದ್ದಾರೆ. 

ಪುಸ್ತಕ ರೂಪದಲ್ಲಿ ಹೊರತಂದಿರುವ ಇವರ ಪ್ರಬಂಧವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಂಸ್ಥಾಪಕ ಡಾ ಎಂ ಮೋಹನ್ ಆಳ್ವ ಅವರು ಆಗಸ್ಟ್ 27 ರಂದು ಅನಾವರಣಗೊಳಿಸಲಿದ್ದಾರೆ. ಎರಡು ವರ್ಷಗಳ ಹಿಂದೆ ಸಂಗೀತಾ ಅವರು ತುಳುವಿನಲ್ಲಿ ಪಿಹೆಚ್ ಡಿ ಮಾಡಿದ್ದರು, ಆದರೆ ಅದು ಪ್ರಕಟವಾಗಿರಲಿಲ್ಲ. ತುಳುವಿನಲ್ಲಿ ಪ್ರಕಟವಾದ ಮೊದಲ ಪಿಹೆಚ್ ಡಿ ಪ್ರಬಂಧ ಇದಾಗಿದೆ ಎಂದು ಹೇಳಿದ ಯಾದವ್, ತುಳು ಭಾಷೆ ಮತ್ತು ಸಾಹಿತ್ಯದಲ್ಲಿ ಸಂಶೋಧನೆ ಮಾಡುವವರಿಗೆ ಇದು ಸಹಾಯ ಮಾಡುತ್ತದೆ ಎಂದು ಹೇಳಿದರು. ಪ್ರಸ್ತುತ, ದ್ರಾವಿಡ ವಿಶ್ವವಿದ್ಯಾಲಯ ಮಾತ್ರ ಇತರ ದ್ರಾವಿಡ ಭಾಷೆಗಳ ಜೊತೆಗೆ ತುಳು ಭಾಷೆಯಲ್ಲಿ ಪಿಹೆಚ್ ಡಿ ಮಾಡಲು ಅವಕಾಶ ನೀಡುತ್ತದೆ.

ಮೊಗವೀರ ಸಮುದಾಯದಲ್ಲಿ ಮಾತ್ರ ಕಂಡುಬರುವ ತುಳು ಭಾಷೆಯ ಕೆಲವು ವಿಭಿನ್ನ ವ್ಯಂಜನಗಳು ಮತ್ತು ಉಚ್ಚಾರಣೆಗಳನ್ನು ಸಹ ಸಂಶೋಧನಾ ಅಧ್ಯಯನದಲ್ಲಿ ದಾಖಲಿಸಲಾಗಿದೆ ಎಂದು ಲೇಖಕ ಚಂದ್ರಹಾಸ ಕಣಂತೂರು ಹೇಳಿದರು. ತುಳು ಅಕಾಡೆಮಿಯ ಮಾಜಿ ಸದಸ್ಯ ಬೆನೆಟ್ ಜಿ ಅಮ್ಮಣ್ಣ, ತುಳು ಭಾಷೆ ಮತ್ತು ಸಾಹಿತ್ಯದ ಇತಿಹಾಸದಲ್ಲಿ ಇದು ಮಹತ್ವದ ಬೆಳವಣಿಗೆಯಾಗಿದೆ, ವಿಶೇಷವಾಗಿ ತುಳು ಭಾಷೆಗೆ ಸಾಂವಿಧಾನಿಕ ಮಾನ್ಯತೆ ಸಿಗದ ಹಿನ್ನೆಲೆಯಲ್ಲಿ ಅಧ್ಯಯನ ಮತ್ತು ಸಾಹಿತ್ಯದ ಕೊರತೆಯನ್ನು ಉಲ್ಲೇಖಿಸಿ ಪ್ರಕಟಿಸಲಾಗಿದೆ.

ಪುಸ್ತಕ ಬಿಡುಗಡೆಗೂ ಮುನ್ನ ತುಳು ಕವಿಗೋಷ್ಠಿ ನಡೆಯಲಿದ್ದು, 12 ಜನ ಭರವಸೆಯ ಕವಿಗಳು ಭಾಗವಹಿಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com