ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರಿನ ಬೀದಿಗಳಲ್ಲಿ ಬೇಕಾಬಿಟ್ಟಿ ಫೈಬರ್ ಕೇಬಲ್; ವಾಹನ ಸವಾರರ ಜೀವಕ್ಕೆ ಕಂಟಕ

ರಾಜಧಾನಿ ಬೆಂಗಳೂರಿನ ಬೀದಿಗಳಲ್ಲಿ ಬೇಕಾಬಿಟ್ಟಿಯಾಗಿ ಕಟ್ಟಿರುವ ಆಪ್ಟಿಕಲ್ ಫೈಬರ್ ಕೇಬಲ್‌ಗಳು(OFC) ನಗರದ ಸೌಂದರ್ಯವನ್ನು ಮಾತ್ರ ಹಾಳುಮಾಡುತ್ತಿಲ್ಲ ವಾಹನ ಸವಾರರ ಜೀವಕ್ಕೂ ಕಂಟಕವಾಗಿ ಪರಿಣಮಿಸಿವೆ.
Published on

ಬೆಂಗಳೂರು: ರಾಜಧಾನಿ ಬೆಂಗಳೂರಿನ ಬೀದಿಗಳಲ್ಲಿ ಬೇಕಾಬಿಟ್ಟಿಯಾಗಿ ಕಟ್ಟಿರುವ ಆಪ್ಟಿಕಲ್ ಫೈಬರ್ ಕೇಬಲ್‌ಗಳು(OFC) ನಗರದ ಸೌಂದರ್ಯವನ್ನು ಮಾತ್ರ ಹಾಳುಮಾಡುತ್ತಿಲ್ಲ ವಾಹನ ಸವಾರರ ಜೀವಕ್ಕೂ ಕಂಟಕವಾಗಿ ಪರಿಣಮಿಸಿವೆ.

ರಸ್ತೆಗಳಲ್ಲಿರುವ ಮರದ ಕೊಂಬೆಗಳಲ್ಲಿ ಹೆಬ್ಬಾವಿನಂತೆ ಸುತ್ತಿಕೊಂಡಿದ್ದು, ಲೈಟ್ ಕಂಬಗಳಲ್ಲೂ ಕೇಬಲ್ ಗಳ ಗೊಂಚಲುಗಳು ನೇತಾಡುತ್ತಿದ್ದು, ಕಳೆದ ವಾರ ಎರಡು ಮಾರಣಾಂತಿಕ ಅಪಘಾತಗಳಿಗೆ ಕಾರಣವಾಗಿವೆ. 

ದೇಶದ ಸಿಲಿಕಾನ್‌ ವ್ಯಾಲಿ ಎಂದು ಕರೆಸಿಕೊಳ್ಳುವ, ಜಗತ್ತಿನ ಪ್ರತಿಷ್ಠ ನಗರಗಳಲ್ಲಿ ಒಂದಾಗಿರುವ ಬೆಂಗಳೂರಿನ ಬೀದಿಗಳನ್ನು ಫೈಬರ್‌ ಕೇಬಲ್‌ಗಳು ಆವರಿಸಿಕೊಂಡಿದ್ದು, ಜನರ ಜೀವನಕ್ಕೆ ಕಂಟಕವಾಗುವ ಜತೆಗೆ, ಗಾರ್ಡನ್ ಸಿಟಿ ಎಂದು ಕರೆಸಿಕೊಳ್ಳುವ ನಗರದ ಸೌಂದರ್ಯವನ್ನೇ ಹಾಳು ಮಾಡಿದೆ.

ಫುಟ್‌ಪಾತ್‌ಗಳಲ್ಲೂ ಕೇಬಲ್‌ಗಳು ರಾಶಿ ರಾಶಿಯಾಗಿ ಬಿದ್ದಿದ್ದು, ಪಾದಚಾರಿಗಳು ಸಹ ಅಪಾಯದಲ್ಲಿ ಓಡಾಡುತ್ತಿದ್ದಾರೆ. ಬೆಸ್ಕಾಂ ತಮ್ಮ ಟ್ರಾನ್ಸ್‌ಫಾರ್ಮರ್‌ಗಳಿಗೆ ಯಾವುದೇ ಕೇಬಲ್‌ಗಳನ್ನು ನೇತುಹಾಕಬಾರದು ಎಂದು ಆದೇಶಿಸಿದರೂ ಅನಧಿಕೃತ ಆಪ್ಟಿಕಲ್ ಫೈಬರ್ ಕೇಬಲ್‌ಗಳು, ಟಿ.ವಿ ಕೇಬಲ್‌ಗ‌ಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಲಾಗುತ್ತಿದೆ.

ಕೇಬಲ್ ಮತ್ತು ಟೆಲಿಕಮ್ಯುನಿಕೇಷನ್ ಆಪರೇಟರ್‌ಗಳಿಗೆ ನೀಡಿರುವ ಅನುಮತಿ ಮತ್ತು ಅವುಗಳಲ್ಲಿ ಎಷ್ಟು ಲೈವ್ ಆಗಿವೆ ಎಂಬುದನ್ನು ತಿಳಿದುಕೊಳ್ಳಲು ನಾವು ಶೀಘ್ರದಲ್ಲೇ ಸಮೀಕ್ಷೆ ಕೈಗೊಳ್ಳುತ್ತೇವೆ ಮತ್ತು ಅದರ ಪ್ರಕಾರ ದಂಡವನ್ನು ವಿಧಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಅವರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

“ಮರದ ಕೊಂಬೆಗಳ ಮೇಲೆ ನೇತಾಡುವ ಮತ್ತು ಫುಟ್‌ಪಾತ್‌ಗಳ ಮೇಲೆ ಬಿದ್ದಿರುವ ಹಲವು ಕೇಬಲ್ ಗಳು  ಕಾರ್ಯನಿರ್ವಹಿಸುವುದಿಲ್ಲ. ಏಕೆಂದರೆ ಕೇಬಲ್ ಟಿವಿ ಈಗ ಹೆಚ್ಚು ಜನಪ್ರಿಯವಾಗಿಲ್ಲ. ಹೆಚ್ಚಿನ ಮನೆಗಳು ಈಗ OTT ಪ್ಲಾಟ್‌ಫಾರ್ಮ್‌ಗಳ ಸಂಪರ್ಕ ಹೊಂದಿವೆ. ಹೀಗಾಗಿ ಈ ಕೇಬಲ್‌ಗಳನ್ನು ಫುಟ್‌ಪಾತ್‌ಗಳ ಮೇಲೆ ಸೆಯಲಾಗಿದೆ ಎಂದು ಗಿರಿನಾಥ್ ಅವರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com