ನಾಳೆ ಬೆಂಗಳೂರಿನಲ್ಲಿ ಪ್ರಧಾನಿ ರೋಡ್ ಶೋ ಇಲ್ಲ, ರಾಜ್ಯದ ಅಣೆಕಟ್ಟಿನಲ್ಲಿ ಎಷ್ಟು ನೀರಿದೆ ಎಂದು ಶ್ವೇತಪತ್ರ ಹೊರಡಿಸಬೇಕು: ಶೋಭಾ ಕರಂದ್ಲಾಜೆ

ಚಂದ್ರಯಾನ-3 ಕಾರ್ಯಾಚರಣೆ ಯಶಸ್ವಿಯಾದ ಬೆನ್ನಲ್ಲಿ ಗ್ರೀಸ್ ದೇಶದಿಂದ ನೇರವಾಗಿ ನಾಳೆ ಬೆಳಗ್ಗೆ ರಾಜಧಾನಿ ಬೆಂಗಳೂರಿಗೆ ಬಂದಿಳಿಯಲಿರುವ ಪ್ರಧಾನಿ ನರೇಂದ್ರ ಮೋದಿಯವರಿಂದ ಇಸ್ರೊ ಕಚೇರಿಗೆ ಭೇಟಿ ನೀಡಿ ಅಲ್ಲಿನ ವಿಜ್ಞಾನಿಗಳನ್ನು ಮಾತನಾಡಿಸಿದ ಬಳಿಕ ರೋಡ್ ಶೋ ಇದೆ ಎಂಬ ಸುದ್ದಿ ಹರಡಿತ್ತು.
ಶೋಭಾ ಕರಂದ್ಲಾಜೆ-ಪ್ರಧಾನಿ ನರೇಂದ್ರ ಮೋದಿ(ಸಂಗ್ರಹ ಚಿತ್ರ)
ಶೋಭಾ ಕರಂದ್ಲಾಜೆ-ಪ್ರಧಾನಿ ನರೇಂದ್ರ ಮೋದಿ(ಸಂಗ್ರಹ ಚಿತ್ರ)

ಬೆಂಗಳೂರು: ಚಂದ್ರಯಾನ-3 ಕಾರ್ಯಾಚರಣೆ ಯಶಸ್ವಿಯಾದ ಬೆನ್ನಲ್ಲಿ ಗ್ರೀಸ್ ದೇಶದಿಂದ ನೇರವಾಗಿ ನಾಳೆ ಬೆಳಗ್ಗೆ ರಾಜಧಾನಿ ಬೆಂಗಳೂರಿಗೆ ಬಂದಿಳಿಯಲಿರುವ ಪ್ರಧಾನಿ ನರೇಂದ್ರ ಮೋದಿಯವರಿಂದ ಇಸ್ರೊ ಕಚೇರಿಗೆ ಭೇಟಿ ನೀಡಿ ಅಲ್ಲಿನ ವಿಜ್ಞಾನಿಗಳನ್ನು ಮಾತನಾಡಿಸಿದ ಬಳಿಕ ರೋಡ್ ಶೋ ಇದೆ ಎಂಬ ಸುದ್ದಿ ಹರಡಿತ್ತು.

ಇದಕ್ಕೆ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುವ ವೇಳೆ ಸ್ಪಷ್ಟನೆ ನೀಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಪ್ರಧಾನಿ ನೇರವಾಗಿ ಬೆಂಗಳೂರಿಗೆ ಬರುತ್ತಾರೆ. ಇಸ್ರೋ ವಿಜ್ಞಾನಿಗಳ ಜತೆ ಸಭೆ ನಡೆಸುತ್ತಾರೆ. ಬೆಳಗ್ಗೆ ಏರ್‌ಪೋರ್ಟ್‌ನಲ್ಲಿ ಅವರಿಗೆ ಸ್ವಾಗತ ಕಾರ್ಯಕ್ರಮ ಇದೆ, ರೋಡ್ ಶೋ ಯೋಜ‌ನೆ ಆಗಿಲ್ಲ ಎಂದು ತಿಳಿಸಿದರು.

ಕಳೆದ‌ ಬಾರಿ ಸ್ವತಃ ಪ್ರಧಾನಿ ಬೆಂಗಳೂರಿಗೆ ಬಂದಿದ್ದರು. ಅತ್ಯಂತ ಕಡಿಮೆ‌ ಸಮಯದಲ್ಲಿ ಚಂದ್ರಯಾನ-3 ರೂಪಿಸಲಾಗಿದೆ. ಚಂದ್ರನ ದಕ್ಷಿಣದಲ್ಲಿ ತಲುಪಿದ ಮೊದಲ ದೇಶ ಭಾರತವಾಗಿದೆ. ಕಳೆದ ಬಾರಿ ವಿಜ್ಞಾನಿಗಳನ್ನು ಪ್ರಧಾನಿ ಅಭಿನಂದಿಸಿ ಹಣವನ್ನು ಕೂಡ ಕೊಟ್ಟಿದ್ದರು ಎಂದರು. 

3ನೇ ಬಾರಿ ಪ್ರಧಾನಿಯಾಗುತ್ತಾರೆ: ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾಗುವ ಸಮಯ ಹತ್ತಿರವಾಗುತ್ತಿದೆ, ಭಾರತಕ್ಕೆ ಮಾತ್ರವಲ್ಲ, ವಿಶ್ವಕ್ಕೇ ಮೋದಿಯವರ ನೇತೃತ್ವ ಬೇಕು ಎಂದು ವಿಶ್ವ ಬಯಸುತ್ತಿದೆ. ಅಂತಹ ಪ್ರಧಾನಿಯನ್ನು ಆಯ್ಕೆ ಮಾಡುವುದು ನಮ್ಮ ಜವಾಬ್ದಾರಿ. ಕಾಲೇಜು ವಿದ್ಯಾರ್ಥಿಗಳಿಗೆ ಮತದಾರರ ಪಟ್ಟಿಗೆ ಸೇರ್ಪಡೆಯ ಮಾಹಿತಿ ಇರುವುದಿಲ್ಲ. ಹೊಸ ಮತದಾರರ ಸೇರ್ಪಡೆ, ವಿಳಾಸ ಬದಲಾವಣೆ, ನಿಧನರಾದವರ ಹೆಸರು ಡಿಲೀಟ್ ಮಾಡಿ ನಕಲಿ ಮತದಾರರನ್ನ ಗುರುತಿಸಬೇಕು. ಈ ಕಾರ್ಯವನ್ನು ಬಿಜೆಪಿ ಕೈಗೆತ್ತಿಕೊಂಡಿದೆ. ಗಡಿ ರಾಜ್ಯಗಳಲ್ಲಿ ನಕಲಿ ಮತದಾರರು ಪತ್ತೆಯಾಗಿದ್ದಾರೆ ಎಂದರು ಹೇಳಿದರು.

ಸರಿಯಾದ ಮತದಾರರ ಪಟ್ಟಿ ತಯಾರಿಗೆ ಚುನಾವಣಾ ಆಯೋಗ ಕೆಲಸ ಮಾಡುತ್ತಿದೆ. ಆಯೋಗಕ್ಕೆ ಪೂರಕವಾಗಿ ಬಿಜೆಪಿ ಕೆಲಸ ಮಾಡುತ್ತದೆ. 2024ರ ಚುನಾವಣೆಯಲ್ಲಿ ಯಾವುದೇ ಗೊಂದಲ ಆಗಬಾರದು ಎಂಬುದು ಇದರ ಉದ್ದೇಶ ಎಂದರು.

ಶ್ವೇತ ಪತ್ರ ಹೊರಡಿಸಿ: ರಾಜ್ಯದ ಅಣೆಕಟ್ಟಿನಲ್ಲಿ ಎಷ್ಟು ನೀರಿದೆ, ಎಷ್ಟು ಬಿಟ್ಟಿದ್ದಾರೆ ಎಂದು ಶ್ವೇತಪತ್ರ ಹೊರಡಿಸಬೇಕು. ರಾಜ್ಯಕ್ಕೆ ನೀರಿಲ್ಲದಿದ್ದರೂ ನೀರು ಬಿಟ್ಟಿದ್ದಾರೆ. ಕಳೆದ ವರ್ಷ ಮಳೆಯಾಗಿತ್ತು, ಹೆಚ್ಚು ನೀರು ಬಿಟ್ಟಿದ್ದರು. ನೀರು ಹೆಚ್ಚಿದ್ದಾಗ ಬಿಡುವುದಕ್ಕೆ ಅಭ್ಯಂತರ ಇಲ್ಲ. ತಮಿಳುನಾಡು - ಕರ್ನಾಟಕ ಭಾರತ-ಪಾಕಿಸ್ತಾನ ಅಲ್ಲ. ಅವರು ನಮ್ಮ ನೆರೆಹೊರೆಯವರು. ಇಂಡಿಯಾ ಮೈತ್ರಿಕೂಟ ಸಂತುಷ್ಠಗೊಳಿಸಲು ನೀರು ಹರಿಸಿದ್ದಾರೆ. ತಮಿಳುನಾಡಿನ ನಾಯಕರನ್ನು ಮನವೊಲಿಸಬೇಕಾದ್ದು ಸಿದ್ದರಾಮಯ್ಯನವರು ಮಾಡಬೇಕಾದ ಕೆಲಸ. ನೀರು ಬಿಡುವುದನ್ನು ನಿಲ್ಲಿಸಿ. ಕ್ಷುಲ್ಲಕ ರಾಜಕಾರಣ ಮಾಡುವುದನ್ನು ಬಿಡಬೇಕು ಎಂದು ಶೋಭಾ ಕರಂದ್ಲಾಜೆ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com