ಚಂದ್ರಯಾನ-3: ನವಜಾತ ಶಿಶುಗಳಿಗೆ ವಿಕ್ರಮ, ಪ್ರಗ್ಯಾನ್ ಎಂದ ಹೆಸರಿಟ್ಟ ಯಾದಗಿರಿ ದಂಪತಿ

ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಚಂದ್ರಯಾನ-3 ಯಶಸ್ಸಿನ ಬೆನ್ನಲ್ಲೇ ಇಡೀ ದೇಶ ಅದರ ಖುಷಿಯಲ್ಲಿದ್ದು, ಇದೇ ಖುಷಿಯಲ್ಲಿ ಇಲ್ಲೊಂದು ದಂಪತಿಗಳು ತಮ್ಮ ಮಕ್ಕಳಿಗೆ ವಿಕ್ರಮ್ ಲ್ಯಾಂಡರ್ ಮತ್ತು ಪ್ರಜ್ಞಾನ್ ರೋವರ್ ಗಳ ಹೆಸರನ್ನೇ ಇಟ್ಟಿದ್ದಾರೆ.
ಚಂದ್ರಯಾನ-3 ಮಿಷನ್
ಚಂದ್ರಯಾನ-3 ಮಿಷನ್

ಯಾದಗಿರಿ: ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಚಂದ್ರಯಾನ-3 ಯಶಸ್ಸಿನ ಬೆನ್ನಲ್ಲೇ ಇಡೀ ದೇಶ ಅದರ ಖುಷಿಯಲ್ಲಿದ್ದು, ಇದೇ ಖುಷಿಯಲ್ಲಿ ಇಲ್ಲೊಂದು ದಂಪತಿಗಳು ತಮ್ಮ ಮಕ್ಕಳಿಗೆ ವಿಕ್ರಮ್ ಲ್ಯಾಂಡರ್ ಮತ್ತು ಪ್ರಜ್ಞಾನ್ ರೋವರ್ ಗಳ ಹೆಸರನ್ನೇ ಇಟ್ಟಿದ್ದಾರೆ.

ಚಂದ್ರನ ಮೇಲೆ ವಿಕ್ರಮ ಲ್ಯಾಂಡ್ ಮಾಡುವ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಚಾರಿತ್ರಿಕ ಸಾಧನೆ ಮಾಡಿದೆ. ಈ ಅಭೂತಪೂರ್ವ ಸಾಧನೆಗೆ ಇಡೀ ವಿಶ್ವವೇ ಭಾರತದತ್ತ ನೋಡುತ್ತಿದೆ. ಆಸ್ಪತ್ರೆಗಳಲ್ಲಿ ಜನಿಸಿದ ಶಿಶುಗಳಿಗೆ ಚಂದ್ರಯಾನ ಹೆಸರನ್ನು ನಾಮಕರಣ ಮಾಡಿ ವಿಜ್ಞಾನಿಗಳ ಸಾಧನೆಯನ್ನು ಪೋಷಕರು ಬಿಂಬಿಸಿದ್ದಾರೆ.

ಕರ್ನಾಟಕದ ಯಾದಗಿರಿ ಜಿಲ್ಲೆಯ ಬಾಳಪ್ಪ ಮತ್ತು ನಾಗಮ್ಮ ದಂಪತಿಗೆ ಜನಿಸಿದ ಮಗುವಿಗೆ ವಿಕ್ರಮ್ ಎಂದು ಹೆಸರಿಟ್ಟಿದ್ದರೆ, ನಿಂಗಪ್ಪ ಮತ್ತು ಶಿವಮ್ಮ ಅವರಿಗೆ ಜನಿಸಿದ ಮಗುವಿಗೆ ಪ್ರಗ್ಯಾನ್ ಎಂಬ ಹೆಸರನ್ನು ನಾಮಕರಣ ಮಾಡಿದ್ದಾರೆ. ಜುಲೈ 28 ರಂದು ಹಾಗೂ ಆಗಸ್ಟ್ 18ರಂದು ಈ ಮಕ್ಕಳು ಜನಿಸಿದ್ದರು. ಆಗಸ್ಟ್  24 ರಂದು ಎರಡು ಮಕ್ಕಳಿಗೆ ಚಂದ್ರಯಾನ -3ರ ಯಶಸ್ಸಿಗೆ ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಲು ಈ ಹೆಸರನ್ನು ನಾಮಕರಣ ಮಾಡಲಾಗಿದೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.

ವಿಕ್ರಮ ಮತ್ತು ಪ್ರಗ್ಯಾನ್ ಎಂದು ಹೆಸರಿಟ್ಟಿರುವ ಮಕ್ಕಳು ಚಂದ್ರನಂತೆ ಬೆಳಗಿ, ಅದ್ಭುತ ಸಾಧನೆ ಮಾಡಲಿ ಎಂದು ಹಾರೈಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com