ಇಂದು ಅಂತಾರಾಷ್ಟ್ರೀಯ ಶ್ವಾನ ದಿನ: ಬೆಂಗಳೂರಿನಲ್ಲಿ ನಾಯಿಗಳ ದತ್ತು ಪಡೆಯುವುದರಲ್ಲಿ ಕ್ರಮೇಣ ಕ್ಷೀಣ!

ರಾಜಧಾನಿ ಬೆಂಗಳೂರಿನಲ್ಲಿ ನಾಯಿಗಳ ದತ್ತು ಪಡೆಯುವುದರಲ್ಲಿ ಕ್ರಮೇಣ ಕ್ಷೀಣವಾಗುತ್ತಿರುವುದು ಕಂಡುಬಂದಿದೆ. ಅಂತಾರಾಷ್ಟ್ರೀಯ ಶ್ವಾನ ದಿನದ ಸಂದರ್ಭದಲ್ಲಿ ನಗರದಲ್ಲಿ ಸಾಕುವ ನಾಯಿಗಳನ್ನು ಹೊರಗೆ ಬಿಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಬೀದಿ ನಾಯಿಗಳನ್ನು ದತ್ತು ಪಡೆಯುವುದರಲ್ಲಿ ಕ್ರಮೇಣ ಕ್ಷೀಣವಾಗುತ್ತಿದೆ ಎಂದು ಹಲವಾರು ಎನ್ ಜಿಒ ಗಳು ದೂರಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನಾಯಿಗಳ ದತ್ತು ಪಡೆಯುವುದರಲ್ಲಿ ಕ್ರಮೇಣ ಕ್ಷೀಣವಾಗುತ್ತಿರುವುದು ಕಂಡುಬಂದಿದೆ. ಅಂತಾರಾಷ್ಟ್ರೀಯ ಶ್ವಾನ ದಿನದ ಸಂದರ್ಭದಲ್ಲಿ ನಗರದಲ್ಲಿ ಸಾಕುವ ನಾಯಿಗಳನ್ನು ಹೊರಗೆ ಬಿಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಬೀದಿ ನಾಯಿಗಳನ್ನು ದತ್ತು ಪಡೆಯುವುದರಲ್ಲಿ ಕ್ರಮೇಣ ಕ್ಷೀಣವಾಗುತ್ತಿದೆ ಎಂದು ಹಲವಾರು ಎನ್ ಜಿಒ ಗಳು ದೂರಿವೆ.

ಒಂದು ವೇಳೆ ಯಾವುದೇ ಬೀದಿಗಳು ನಾಯಿಗಳು ವಿಷ ಸೇವಿಸಿದ್ದರೆ, ಅಂತಹವುಗಳನ್ನು ಮರಣೋತ್ತರ ಪರೀಕ್ಷೆಯ ಮೂಲಕ ತಕ್ಷಣ ಗುರುತಿಸಬಹುದಾಗಿದ್ದು, ಬಿಬಿಎಂಪಿ ವಾರದ ಎಲ್ಲಾ ದಿನವೂ ಸರ್ಕಾರಿ ಆಸ್ಪತ್ರೆಗಳನ್ನು ತೆರೆಯಬೇಕೆಂದು ಕಾರ್ಯಕರ್ತರು ಬಯಸುತ್ತಾರೆ.

ಈ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಹೆವೆನ್ ಪ್ರಾಣಿ ಕಲ್ಯಾಣ ಟ್ರಸ್ಟ್ ಸಂಸ್ಥಾಪಕ ಟೋನಿ ಫ್ರೀರ್, ಬೀದಿನಾಯಿಗಳಿಗೆ ಸಾಮಾನ್ಯವಾಗಿ ರಾತ್ರಿ ವೇಳೆಯಲ್ಲಿಯೇ ವಿಷ ಹಾಕಲಾಗುತ್ತದೆ. ಮುಂದಿನ 12 ಗಂಟೆಗಳಲ್ಲಿ ದೇಹವು ಕೊಳೆಯಲು ಪ್ರಾರಂಭಿಸುತ್ತದೆ. ನಾವು ಅಪರಾಧಿಗಳನ್ನು ಹಿಡಿಯಬೇಕಾದರೆ ನಮಗೆ ಕೋಲ್ಡ್ ಸ್ಟೋರೇಜ್ ಸೌಲಭ್ಯಗಳು ಮತ್ತು ತುರ್ತು ಪ್ರತಿಕ್ರಿಯೆ ತಂಡದ ಅಗತ್ಯವಿದೆ ಎಂದರು. 

ಸಾಕುನಾಯಿಗಳ ಮೇಲಿನ ಹಲ್ಲೆ ಪ್ರಕರಣಗಳ ಕುರಿತು ಒತ್ತಿ ಹೇಳಿದ ಅವರು, ರಕ್ಷಕರು ಕೂಡಾ ಸಹ ಟೋಲ್-ಫ್ರೀ ಸಂಖ್ಯೆಯನ್ನು ಬಯಸುತ್ತಾರೆ, ಅಲ್ಲಿ ಸಾಕುನಾಯಿಗಳಿಗೆ ವಿಷ ಹಾಕಲಾಗಿದೆಯೇ ಅಥವಾ ಮತ್ತಿತರ ಸಮಸ್ಯೆಗಳನ್ನು ವರದಿ ಮಾಡಬಹುದು. ನಗರದಲ್ಲಿ ಬೀದಿ ನಾಯಿಗಳನ್ನು ರಕ್ಷಿಸಲು ಸರ್ಕಾರದಿಂದ ಕಡಿಮೆ ಬೆಂಬಲವಿದೆ ಎಂದು ಅವರು ಅಭಿಪ್ರಾಯಪಟ್ಟರು. ಪೊಲೀಸ್ ಠಾಣೆಗಳಲ್ಲಿ ನಿರ್ದಿಷ್ಟ ವ್ಯಕ್ತಿಗಳನ್ನು ನೇಮಿಸಲು ಒತ್ತಾಯಿಸಬೇಕು ಆದ್ದರಿಂದ ಪ್ರಾಣಿಗಳ ಆಘಾತ ಪ್ರಕರಣಗಳನ್ನು ನಿರ್ಲಕ್ಷಿಸಲಾಗದು ಎಂದು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯ ಮತ್ತೋರ್ವ ಕಾರ್ಯಕರ್ತ ಹೇಳಿದರು. 

ಅನುದಾನದ ಕೊರತೆಯಿಂದ ಆಶ್ರಯ ಮನೆಗಳಿಗೆ ಹೊರೆ: ಇತ್ತೀಚೆಗೆ 15 ನಾಯಿಗಳನ್ನು ಹೊರಗೆ ಬಿಡಲಾಗಿದೆ ಎಂದು ನಗರದಲ್ಲಿನ ಶ್ವಾನ ರಕ್ಷಕರೊಬ್ಬರು  ವರದಿ ಮಾಡಿದ್ದಾರೆ, ಕೆಲವನ್ನು ಕಂಬಗಳಿಗೆ ಕಟ್ಟಿದ್ದರೆ, ಮತ್ತೆ ಕೆಲವನ್ನು ರಸ್ತೆಗಳಲ್ಲಿ ಬಿಟ್ಟಿದ್ದಾರೆ, ಆದಾಗ್ಯೂ, ಎನ್‌ಜಿಒಗಳು ಮತ್ತು ಶೆಲ್ಟರ್‌ಗಳನ್ನು ನಡೆಸುತ್ತಿರುವ ವ್ಯಕ್ತಿಗಳು ಸಾಕುಪ್ರಾಣಿಗಳನ್ನು ಆಶ್ರಯ ಮನೆಗಳಿಗೆ ಸೇರಿಸುವುದನ್ನು ನಿಲ್ಲಿಸಿದ್ದಾರೆ ಏಕೆಂದರೆ ಅವುಗಳಿಗೆ ಹಣಕಾಸಿನ ಕೊರತೆ ಮತ್ತು ಮನೆಗಳು ಹೆಚ್ಚು ಹೊರೆಯಾಗಿದೆ.

“ನಾವು ಪ್ರತಿದಿನ ಸುಮಾರು 15-20  ಇಂತಹ  ಪ್ರಕರಣಗಳನ್ನು ನೋಡುತ್ತೇವೆ. ನಾವು ಕ್ರೌಡ್‌ಫಂಡಿಂಗ್ ಮೇಲೆ ಅವಲಂಬಿತರಾಗಿದ್ದೇವೆ. ಪ್ರಸ್ತುತ, ನಾವು ಆರ್ಥಿಕ ಮುಗ್ಗಟ್ಟಿನಲ್ಲಿದ್ದೇವೆ ಮತ್ತು ಆಸ್ಪತ್ರೆಯ ಬಿಲ್‌ಗಳು ಲಕ್ಷಗಳಲ್ಲಿ ಬಾಕಿ ಉಳಿದಿವೆ ಎಂದು ನಾಯಿಗಳ ರಕ್ಷಕ ಲಕ್ಷ್ಮಿಗೌಡ ಹೇಳುತ್ತಾರೆ. 

ಪ್ರತಿ ನಾಯಿಗೂ ತನ್ನದೇ ಆದ ದಿನವಿದೆ! ಅಂತಾರಾಷ್ಟ್ರೀಯ ಶ್ವಾನ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲು, ಬೆಂಗಳೂರಿನಲ್ಲಿರುವ ನಾಯಿ ಆಹಾರ ಮಾರಾಟ ಮಾಡುವ ಅಂಗಡಿಯೊಂದು ನಗರದಲ್ಲಿನ 500 ಬೀದಿನಾಯಿಗಳಿಗೆ ಅಮೇರಿಕಾದಿಂದ ಆಮದು ಮಾಡಿಕೊಳ್ಳುವ ಅನ್ನಮೇಟ್ ಎಂಬ ಪ್ರೀಮಿಯಂ ನಾಯಿ ಆಹಾರವನ್ನು ನೀಡಲು ಯೋಜಿಸಿದೆ. ಇದಕ್ಕಾಗಿ ಹಲವಾರು ರಕ್ಷಕರು ಮತ್ತು ನಾಯಿ ಎನ್‌ಜಿಒಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಅನ್ನಮೇಟ್ ಬೆಲೆ ಪ್ರತಿ ಕೆಜಿಗೆ 900-1400 ರೂಪಾಯಿಗಳ ನಡುವೆ ಇರಲಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com