ಚಂದ್ರಯಾನ-3 ಯಶಸ್ಸಿನ ಹಿಂದೆ ನಾರಿ ಶಕ್ತಿ, ಶಿವ ಶಕ್ತಿಯಿದೆ: ಪ್ರಧಾನಿ ನರೇಂದ್ರ ಮೋದಿ

ಯಶಸ್ವಿ ಚಂದ್ರಯಾನ-3 ಮಿಷನ್‌ನಲ್ಲಿ ಭಾಗಿಯಾಗಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ವಿಜ್ಞಾನಿಗಳನ್ನು ಪ್ರಧಾನಿ ನರೇಂದ್ರ ಮೋದಿ ಶನಿವಾರ ಬೆಳಗ್ಗೆ ಭೇಟಿ ಮಾಡಿ ಮನಸಾರೆ ಕೊಂಡಾಡಿದರು. ಅಲ್ಲದೆ ಈ ಸಂದರ್ಭದಲ್ಲಿ ಮೂರು ಮಹತ್ವದ ಘೋಷಣೆಗಳನ್ನು ಕೂಡ ಮಾಡಿದ್ದಾರೆ. 
ಇಸ್ರೊ ಕೇಂದ್ರದಲ್ಲಿ ವಿಜ್ಞಾನಿಗಳನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ
ಇಸ್ರೊ ಕೇಂದ್ರದಲ್ಲಿ ವಿಜ್ಞಾನಿಗಳನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ
Updated on

ಬೆಂಗಳೂರು: ಯಶಸ್ವಿ ಚಂದ್ರಯಾನ-3 ಮಿಷನ್‌ನಲ್ಲಿ ಭಾಗಿಯಾಗಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ವಿಜ್ಞಾನಿಗಳನ್ನು ಪ್ರಧಾನಿ ನರೇಂದ್ರ ಮೋದಿ ಶನಿವಾರ ಬೆಳಗ್ಗೆ ಭೇಟಿ ಮಾಡಿ ಮನಸಾರೆ ಕೊಂಡಾಡಿದರು. ಅಲ್ಲದೆ ಈ ಸಂದರ್ಭದಲ್ಲಿ ಮೂರು ಮಹತ್ವದ ಘೋಷಣೆಗಳನ್ನು ಕೂಡ ಮಾಡಿದ್ದಾರೆ. 

ಅದರಲ್ಲಿ ಮೊದಲನೆಯದ್ದು, ಚಂದ್ರಯಾನ-3 ರ ವಿಕ್ರಮ್ ಲ್ಯಾಂಡರ್ ಸಾಫ್ಟ್ ಲ್ಯಾಂಡರ್ ಮಾಡಿದ ಸ್ಥಳವನ್ನು "ಶಿವಶಕ್ತಿ" ಎಂದು ಕರೆಯಲಾಗುವುದು ಎಂದು ಪ್ರಧಾನಿ ಹೇಳಿದರು.

ಚಂದ್ರಯಾನ-3 ಮಿಷನ್‌ನ ಯಶಸ್ಸನ್ನು ಭಾರತದ ಭಾರತದ ಬಾಹ್ಯಾಕಾಶ ಕಾರ್ಯಕ್ರಮದ ಇತಿಹಾಸದಲ್ಲಿ ಅಸಾಧಾರಣ ಕ್ಷಣ' ಎಂದು ಬಣ್ಣಿಸಿದ ಅವರು, 2019 ರಲ್ಲಿ ಚಂದ್ರಯಾನ-2 ಲ್ಯಾಂಡರ್ ಚಂದ್ರನ ಮೇಲ್ಮೈಯಲ್ಲಿ ಕ್ರ್ಯಾಶ್-ಲ್ಯಾಂಡ್ ಆದ ಸ್ಥಳವನ್ನು "ತಿರಂಗಾ ಪಾಯಿಂಟ್ ಎಂದು ಕರೆಯಲಾಗುವುದು ಎಂದು ಹೇಳಿದರು. ಚಂದ್ರಯಾನ-3 ಲ್ಯಾಂಡರ್ ಚಂದ್ರನ ಮೇಲ್ಮೈಯನ್ನು ಸ್ಪರ್ಶಿಸಿದ ದಿನವನ್ನು "ರಾಷ್ಟ್ರೀಯ ಬಾಹ್ಯಾಕಾಶ ದಿನ" ಎಂದು ಆಚರಿಸಲಾಗುವುದು ಎಂದು ಸಹ ಘೋಷಿಸಿದರು. 

ಬೆಂಗಳೂರು ನಗರದಲ್ಲಿ ಇಸ್ರೋದ ಟೆಲಿಮೆಟ್ರಿ, ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್ ಸೆಂಟರ್ (ISTRAC) ನಲ್ಲಿ ಪ್ರಧಾನಮಂತ್ರಿ ಅವರು ಮಾತನಾಡಿದರು. ಅವರು ದಕ್ಷಿಣ ಆಫ್ರಿಕಾ ಮತ್ತು ಗ್ರೀಸ್‌ಗೆ ಭೇಟಿ ನೀಡಿದ ನಂತರ ನೇರವಾಗಿ ಬೆಂಗಳೂರಿನ ಬಾಹ್ಯಾಕಾಶ ಕೇಂದ್ರಕ್ಕೆ ಭೇಟಿ ನೀಡಿದರು.

ವಿಜ್ಞಾನಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ನಾನು ಆಗಸ್ಟ್ 23ರಂದು ದಕ್ಷಿಣ ಆಫ್ರಿಕಾದಲ್ಲಿದ್ದರೂ ಕೂಡ ನನ್ನ ಮನಸ್ಸು ನಿಮ್ಮೊಂದಿಗೆ ಇತ್ತು. ಈ ಯಶಸ್ಸಿಗೆ ನಾನು ಬಂದು ನಿಮ್ಮನ್ನು ಅಭಿನಂದಿಸಲು ಬಯಸುತ್ತೇನೆ. ನಿನ್ನ ಸಂಕಲ್ಪಕ್ಕಾಗಿ ನಾನು ನಿನ್ನನ್ನು ವಂದಿಸಲು ಬಯಸುತ್ತೇನೆ ಎಂದರು. 

ವಿಜ್ಞಾನಿಗಳ ಪರಿಶ್ರಮ ಮತ್ತು ಕಠಿಣ ಪರಿಶ್ರಮಕ್ಕಾಗಿ ಪ್ರಧಾನಿ ಅವರನ್ನು ಶ್ಲಾಘಿಸುತ್ತಾ, ಭಾರತವು ಚಂದ್ರನ ಮೇಲಿದೆ. ನಮ್ಮ ರಾಷ್ಟ್ರೀಯ ಹೆಮ್ಮೆಯನ್ನು ನಾವು ಚಂದ್ರನ ಮೇಲೆ ಇರಿಸಿದ್ದೇವೆ. ಯಾರೂ ಇಲ್ಲದ ಸ್ಥಳಕ್ಕೆ ನಾವು ತಲುಪಿದ್ದೇವೆ. ಯಾರೂ ಮಾಡದ ಕೆಲಸವನ್ನು ನಾವು ಮಾಡಿದ್ದೇವೆ. ಇದು ನವ ಭಾರತ" ಎಂದು ಬಣ್ಣಿಸಿದರು. 

ಇಸ್ರೋ ಕಚೇರಿಯನ್ನು ತಲುಪಿದ ನಂತರ, ಇಸ್ರೋ ಅಧ್ಯಕ್ಷರಾದ ಎಸ್ ಸೋಮನಾಥ್ ಅವರು ಪ್ರಧಾನಿ ಮೋದಿಯವರಿಗೆ ಸಂಪೂರ್ಣ ಲ್ಯಾಂಡಿಂಗ್ ಪ್ರಕ್ರಿಯೆಯು ಹೇಗೆ ನಡೆಯಿತು ಎಂಬುದರ ಪ್ರಾತ್ಯಕ್ಷಿಕೆಯನ್ನು ನೀಡಿದರು. ಸೋಮನಾಥ್ ಅವರು ವಿಕ್ರಮ್ ಲ್ಯಾಂಡರ್‌ನ ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಿದ ಮೊದಲ ಚಿತ್ರವನ್ನು ಪ್ರಧಾನಿ ಮೋದಿಯವರಿಗೆ ಉಡುಗೊರೆಯಾಗಿ ನೀಡಿದರು. ಅವರು ಚಂದ್ರಯಾನ-2 ಆರ್ಬಿಟರ್‌ನಿಂದ ಸೆರೆಹಿಡಿಯಲಾದ ಚಂದ್ರಯಾನ 3 ರ ಛಾಯಾಚಿತ್ರಗಳು ಮತ್ತು ಲ್ಯಾಂಡರ್‌ನ ಮಾದರಿಯನ್ನು ಸಹ ಪ್ರಧಾನ ಮಂತ್ರಿಗಳಿಗೆ ನೀಡಿದರು.

ಭಾರತವು ಚಂದ್ರನ ಕರಾಳ ಭಾಗವನ್ನು ಬೆಳಗಿಸಿದೆ. ನಾವು ಒಂದು ಪ್ರಮುಖ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವಂತೆ ಪ್ರತಿಯೊಬ್ಬ ಭಾರತೀಯನು ಗೆಲುವು ತನ್ನದೆಂದು ಭಾವಿಸಿದ್ದಾನೆ ಎಂದರು. ಭಾರತವು ಚಂದ್ರನ ಮೇಲೆ ಇಳಿದ ಆಗಸ್ಟ್ 23 ರಿಂದ ಕೆಲವು ದೃಶ್ಯಗಳನ್ನು ಮರೆಯಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಚಂದ್ರನ ಮೇಲ್ಮೈಯಲ್ಲಿ ಚಂದ್ರಯಾನ-3 ಇಳಿಯುವಿಕೆಯ ಪ್ರದರ್ಶನವನ್ನು ಸಹ ತೋರಿಸಲಾಯಿತು- ವಿಕ್ರಮ್‌ನ ಲ್ಯಾಂಡಿಂಗ್, ರೋವರ್‌ನ ನಿಯೋಜನೆ ಮತ್ತು ರೋವರ್‌ನ ಚಲನೆ. ಬಾಹ್ಯಾಕಾಶ ತಂತ್ರಜ್ಞಾನವನ್ನು ಅನ್ವೇಷಿಸಲು ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಿದ ಪ್ರಧಾನಿ, ಭಾರತದಲ್ಲಿ ಬಾಹ್ಯಾಕಾಶ ತಂತ್ರಜ್ಞಾನವನ್ನು ಉತ್ತೇಜಿಸಲು ಮತ್ತು ನಿರ್ಣಾಯಕ ಸಮಸ್ಯೆಗಳಿಗೆ ಆಧುನಿಕ ಪರಿಹಾರಗಳನ್ನು ಅನ್ವೇಷಿಸಲು ದೇಶಕ್ಕೆ ಸಹಾಯ ಮಾಡಲು ಇಸ್ರೋ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ಹ್ಯಾಕಥಾನ್ ಆಯೋಜಿಸಲು ಸಹಕರಿಸಬೇಕು ಎಂದು ಹೇಳಿದರು.

ದೇಶದ ಎಲ್ಲಾ ಯುವಕರಿಗಾಗಿ my.gov.in ಚಂದ್ರಯಾನ-3 ಕುರಿತು ರಸಪ್ರಶ್ನೆ ಸ್ಪರ್ಧೆಯನ್ನು ನಡೆಸಲಿದೆ ಎಂದು ಮೋದಿ ಹೇಳಿದರು.

ISTRAC ತಲುಪುವ ಮೊದಲು, ಪ್ರಧಾನಿ ಮೋದಿ ಎರಡು ತ್ವರಿತ ನಿಲುಗಡೆಗಳನ್ನು ಮಾಡಿದರು; ಎಚ್‌ಎಎಲ್ ವಿಮಾನ ನಿಲ್ದಾಣದ ಹೊರಗೆ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, “ಜೈ ವಿಜ್ಞಾನ ಜೈ ಅನುಸಂಧಾನ” ಎಂಬ ಘೋಷಣೆಯನ್ನು ಕೂಗಿದರು. ನಂತರ ಮೋದಿ ಅವರು ಜಾಲಹಳ್ಳಿ ಸಿಗ್ನಲ್‌ನಲ್ಲಿ ನಿಂತಾಗ ಹಲವರು ಪ್ರಧಾನಿಯನ್ನು ಸ್ವಾಗತಿಸಿದರು.

ಮಹಿಳಾ ತಂಡಕ್ಕೆ ಪ್ರಧಾನಿ ವಿಶೇಷ ಶ್ಲಾಘನೆ: ಪ್ರಧಾನಿಯವರು ಇಂದು ಭಾಷಣ ವೇಳೆ ಇಸ್ರೊದ ಮಹಿಳಾ ವೃಂದವನ್ನು ಗುರುತಿಸಿ ಅಭಿನಂದಿಸುವುದನ್ನು ಮರೆಯಲಿಲ್ಲ. ಈ ವೇಳೆ ಸ್ವಲ್ಪ ಭಾವುಕರಾದರೂ ಕೂಡ.

ವಿಚಾರ ಮತ್ತು ವಿಜ್ಞಾನಕ್ಕೆ ಒಂದು ಶಕ್ತಿ ಕೊಡುವುದು ನಮ್ಮ ಎಲ್ಲರ ಒಳಗಿರುವ ವಿಶೇಷ ಚೈತನ್ಯವಾಗಿದೆ. ಈ ಚೈತನ್ಯವೇ ಶಿವ ಎಂದು ಮೋದಿ ಹೇಳಿದರು. ಹಾಗೆಯೇ ಈ ಮಿಷನ್ನಲ್ಲಿ ಮಹಿಳಾ ವಿಜ್ಞಾನಿಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ನಾರಿ ಎನ್ನುವುದು ಚೈತನ್ಯದ ಶಕ್ತಿಯಾಗಿದೆ. ಸೃಷ್ಟಿ ಪಾಲನೆ ಮತ್ತು ಲಯದ ಹಿಂದೆ ಕೂಡ ನಾರಿ ಶಕ್ತಿಯ ಪ್ರೇರಣೆ ಇದೆ. ಸಮಸ್ತ ಜಗತ್ತಿನ ಚೈತನ್ಯದಲ್ಲೂ ನಾರಿಯರ ಶಕ್ತಿ ಇದೆ. ಶಿವ ಮತ್ತು ಶಕ್ತಿಯನ್ನು ಸೇರಿಸಿದರೆ ಅದು ಶಿವಶಕ್ತಿಯಾಗುತ್ತದೆ. ಹೀಗಾಗಿ ವಿಕ್ರಂ ಇಳಿದ ಜಾಗಕ್ಕೆ ಭಾರತ ಶಿವ ಶಕ್ತಿ ಎಂದು ನಾಮಕರಣ ಮಾಡುವುದಾಗಿ ಮೋದಿ ಘೋಷಿಸಿದರು. 

ಚಂದ್ರ ಇರೋವರೆಗೂ ಭಾರತದ ಚಿಂತನೆ ಮತ್ತು ಸಾಧನೆಯ ಸಾಕ್ಷಿಯಾಗಿ ಚಂದ್ರನ ಮೇಲೆ ಶಿವಶಕ್ತಿ ರಾರಾಜಿಸಲಿದೆ ಎಂದು ಮೋದಿ ಪ್ರಕಟಿಸಿದರು. ಈ ಹೆಸರು ಮುಂದಿನ ಪೀಳಿಗೆಗೂ ಕೂಡ ಪ್ರೇರಣೆಯಾಗಲಿದೆ ಎಂದು ಮೋದಿ ತಿಳಿಸಿದರು. ವಿಜ್ಞಾನದ ಸಾಧನೆಗಳು ಮಾನವೀಯತೆಯ ಕಲ್ಯಾಣಕ್ಕಾಗಿ ಇವೆ. ಮನುಕುಲದ ಒಳಿತು ಭಾರತದ ಶ್ರೇಷ್ಠ ಬದ್ಧತೆಯಾಗಿದೆ ಎಂದು ಮೋದಿ ಹೇಳಿದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com