ರಾಜ್ಯದ ಮುಂದಿವೆ ಕರಾಳ ದಿನಗಳು: ಕುಗ್ಗಿದ ಮುಂಗಾರು, ಹೆಚ್ಚಿದ ನೀರಿನ ಅಭಾವ, ಎದುರಾಯ್ತು ವಿದ್ಯುತ್ ಕೊರತೆ!

ಮುಂದಿನ ದಿನಗಳಲ್ಲಿ ರಾಜ್ಯದ ಜನರಿಗೆ ಒಂದು ಕರಾಳ ಪರಿಸ್ಥಿತಿ ಕಾದಿದೆ, ಕೇವಲ ನೀರಿನ ಬಿಕ್ಕಟ್ಟು ಮಾತ್ರವಲ್ಲದೆ, ದುರ್ಬಲ ಮುಂಗಾರು ಮಳೆ ಮತ್ತು ನೀರಿನ ಕೊರತೆಯೊಂದಿಗೆ ವಿದ್ಯುತ್ ಅಭಾವವೂ ಎದುರಾಗಲಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಮುಂದಿನ ದಿನಗಳಲ್ಲಿ ರಾಜ್ಯದ ಜನರಿಗೆ ಒಂದು ಕರಾಳ ಪರಿಸ್ಥಿತಿ ಕಾದಿದೆ, ಕೇವಲ ನೀರಿನ ಬಿಕ್ಕಟ್ಟು ಮಾತ್ರವಲ್ಲದೆ, ದುರ್ಬಲ ಮುಂಗಾರು ಮಳೆ ಮತ್ತು ನೀರಿನ ಕೊರತೆಯೊಂದಿಗೆ ವಿದ್ಯುತ್ ಅಭಾವವೂ ಎದುರಾಗಲಿದೆ.

ಇಂಧನ ಇಲಾಖೆ ಅಧಿಕಾರಿಗಳ ಪ್ರಕಾರ, ವಿದ್ಯುತ್ ಬೇಡಿಕೆ ಹೆಚ್ಚಿದೆ, ಆದರೆ ಉತ್ಪಾದನೆಗೆ ನಿರ್ಬಂಧವಿದೆ. ಅವರು ಈಗಾಗಲೇ ಜಲ ಸಂಪನ್ಮೂಲಗಳಲ್ಲಿನ ಗರಿಷ್ಠ ಸಾಮರ್ಥ್ಯವನ್ನು ಬಳಸಿಕೊಂಡಿದ್ದೇವೆ. ಕುಡಿಯಲು ಮತ್ತು ಶೇಖರಣಾ ಮಟ್ಟವನ್ನು ಕಾಪಾಡಿಕೊಳ್ಳಲು ನೀರಿನ ಅಗತ್ಯವಿರುವುದರಿಂದ ಹೆಚ್ಚು ಕೇಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಮಾರ್ಚ್ ಮತ್ತು ಏಪ್ರಿಲ್‌ನ ಬೇಸಿಗೆ ತಿಂಗಳುಗಳಿಗಿಂತ ಮಾನ್ಸೂನ್ ತಿಂಗಳಾದ ಆಗಸ್ಟ್‌ನಲ್ಲಿ ಗರಿಷ್ಠ ವಿದ್ಯುತ್ ಬೇಡಿಕೆ ಹೆಚ್ಚಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಳೆಯಾಗುವ ಯಾವುದೇ ಲಕ್ಷಣಗಳೂ ಕಾಣುತ್ತಿಲ್ಲ, ಜೊತೆಗೆ ತಾಪಮಾನದಲ್ಲಿ ಸಹ ಏರಿಕೆಯಾಗುತ್ತಿದೆ. ಹೀಗಾಗಿ ಏಪ್ರಿಲ್‌ಗೆ ಹೋಲಿಸಿದರೆ ಆಗಸ್ಟ್‌ನಲ್ಲಿ ವಿದ್ಯುತ್ ಬಳಕೆ ಹೆಚ್ಚಾಗಿದೆ.  ಹೀಗಾಗಿ ನಾವು ನವೀಕರಿಸಬಹುದಾದ ಇಂಧನ ಮತ್ತು ವಿದ್ಯುತ್ ಖರೀದಿಯ ಮೇಲೆ ಹೆಚ್ಚು ಅವಲಂಬಿತರಾಗಿದ್ದೇವೆ ಎಂದು ಅಧಿಕಾರಿಯೊಬ್ಬರು ಹೇಳಿದರು.

ದಾಖಲೆಗಳ ಪ್ರಕಾರ, ಆಗಸ್ಟ್ 25, 2023 ರಂದು ಕರ್ನಾಟಕದಲ್ಲಿ ಗರಿಷ್ಠ ಗರಿಷ್ಠ ಬೇಡಿಕೆ 16,950 ಮೆಗಾ ವ್ಯಾಟ್ ದಾಖಲಾಗಿದೆ. ಆಗಸ್ಟ್ 29, 2023 ರಂದು,  ಬೆಳಗ್ಗೆ 11 ಗಂಟೆವರೆಗೆ ಗರಿಷ್ಠ ವಿದ್ಯುತ್ ಬೇಡಿಕೆ 16,11ಮೆಗಾ ವ್ಯಾಟ್  ಆಗಿದ್ದರೆ, ಮಾರ್ಚ್‌ನಲ್ಲಿ ಗರಿಷ್ಠ ವಿದ್ಯುತ್ ಬೇಡಿಕೆ 16,110ಮೆಗಾ ವ್ಯಾಟ್  ಆಗಿತ್ತು ಎಂದು ಮಾಹಿತಿ ನೀಡಿದ್ದಾರೆ.

ಬೆಸ್ಕಾಂ ಪ್ರಕಾರ, ಬೆಂಗಳೂರಿನಲ್ಲಿ ಬೇಸಿಗೆಯಲ್ಲಿ ಗರಿಷ್ಠ ವಿದ್ಯುತ್ ಬೇಡಿಕೆ ಏಪ್ರಿಲ್ 20 ರಂದು 7,800 ಮೆಗಾವ್ಯಾಟ್ ಆಗಿದ್ದು, ಆಗಸ್ಟ್ 25 ರಂದು 7,981 ಮೆಗಾವ್ಯಾಟ್ ತಲುಪಿದೆ. ಇಂಧನ ಉತ್ಪಾದನೆಯು ಕೇವಲ ಬೇಡಿಕೆಗೆ ಅನುಗುಣವಾಗಿರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಗಸ್ಟ್ 28 ರಂದು ಇಂಧನ ಇಲಾಖೆಯ ದಾಖಲೆಗಳ ಪ್ರಕಾರ, ರಾಜ್ಯದ ಜಲವಿದ್ಯುತ್ ಉತ್ಪಾದನೆಯು 26.25MU ಮತ್ತು ಉಷ್ಣ ವಿದ್ಯುತ್ ಉತ್ಪಾದನೆಯು 41.35MU ಆಗಿತ್ತು. ರಾಜ್ಯದ ಒಟ್ಟು ವಿದ್ಯುತ್ ಬಳಕೆಯು 288.83MU ಆಗಿತ್ತು, ಇದರಲ್ಲಿ ಇತರ ಮೂಲಗಳಿಂದ ವಿದ್ಯುತ್ ಉತ್ಪಾದನೆ ಕೂಡ ಸೇರಿದೆ.

ನಾವು ಹವಾಮಾನ ಇಲಾಖೆ ಅಧಿಕಾರಿಗಳೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿದ್ದೇವೆ. ಪ್ರತಿ ಬಾರಿ ಅವರು ಮಳೆ ಎಚ್ಚರಿಕೆ ನೀಡಿ ಮಳೆಯ ಮುನ್ಸೂಚನೆ ನೀಡಿದಾಗ ನಮ್ಮ ನಿರೀಕ್ಷೆಗಳು ಹೆಚ್ಚಾಗುತ್ತವೆ, ಆದರೆ ಮಳೆ ಮಾತ್ರ ಬೀಳುತ್ತಿಲ್ಲ. ಮುಂಗಾರು ಮುಗಿಯುತ್ತಿದ್ದಂತೆ ಇಡೀ ವರ್ಷ ಶೇಖರಣೆ ಮಾಡಬೇಕಾಗಿರುವುದರಿಂದ ವಿದ್ಯುತ್ ಉತ್ಪಾದನೆಗೆ ಹೆಚ್ಚು ನೀರು ಹರಿಸಲು ಸಾಧ್ಯವಿಲ್ಲ ಎಂದು ಇಂಧನ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರದ ಮಾಹಿತಿಯಂತೆ ಆಗಸ್ಟ್ 29 ರಂದು ಕಾವೇರಿ ಜಲಾನಯನ ಪ್ರದೇಶದಲ್ಲಿ 71.42tmcft (ಶೇ. 62) ಮತ್ತು ಕೃಷ್ಣಾ ಜಲಾನಯನ ಪ್ರದೇಶದಲ್ಲಿ 335.82tmcft (ಶೇ 79) ರಷ್ಟು ಸಂಗ್ರಹವಾಗಿದೆ ಎಂದು ತಿಳಿದು ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com