ಬೆಂಬಲಿಗರಿಂದ ಅನಧಿಕೃತ ಬ್ಯಾನರ್‌: ಪ್ರಿಯಾಂಕ್‌ ಖರ್ಗೆಗೆ 5000 ರು. ದಂಡ ವಿಧಿಸಿದ ಕಲಬುರಗಿ ಪಾಲಿಕೆ

ಕಲಬುರಗಿ ಮಹಾನಗರ ಪಾಲಿಕೆಯ ಅನುಮತಿ ಪಡೆಯದೇ ಬ್ಯಾನರ್ ಹಾಕಿದ್ದು  ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಪಾಲಿಕೆಯಿಂದ 5,000 ರೂ. ದಂಡ ವಿಧಿಸಲಾಗಿದೆ.
ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ

ಕಲಬುರಗಿ: ಕಲಬುರಗಿ ಮಹಾನಗರ ಪಾಲಿಕೆಯ ಅನುಮತಿ ಪಡೆಯದೇ ಬ್ಯಾನರ್ ಹಾಕಿದ್ದು ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಪಾಲಿಕೆಯಿಂದ 5,000 ರೂ. ದಂಡ ವಿಧಿಸಲಾಗಿದೆ.

ಅನಧಿಕೃತವಾಗಿ ಬ್ಯಾನರ್‌ ಹಾಕುವವರ ವಿರುದ್ಧ ಕ್ರಮಕ್ಕೆ ಮುಂದಾಗುವಂತೆ ಕೆಲವು ದಿನಗಳ ಹಿಂದೆ ಅಧಿಕಾರಿಗಳಿಗೆ ಪ್ರಿಯಾಂಕ್ ಸೂಚಿಸಿದ್ದರು. ಬೆಂಬಲಿಗರು ಪಾಲಿಕೆಯ ಅನುಮತಿ ಪಡೆಯದೇ ಬ್ಯಾನರ್ ಹಾಕಿದ್ದರಿಂದ ಈಗ ಸಚಿವರು ದಂಡ ಪಾವತಿಸಬೇಕಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಬೆಂಬಲಿಗರು ಪಾಲಿಕೆಯ ಅನುಮತಿ ಪಡೆಯದೆ ನಗರದ ಸಾರ್ವಜನಿಕ ಸ್ಥಳದಲ್ಲಿ ಬ್ಯಾನರ್ ಹಾಕಿದ್ದು ಕಂಡುಬಂದಿದೆ. ಹೀಗಾಗಿ, ಪಾಲಿಕೆಯಿಂದ ಸಚಿವರಿಗೆ 5,000 ದಂಡ ವಿಧಿಸಲಾಗಿದೆ’ ಎಂದು ಪಾಲಿಕೆಯ ಅಧಿಕಾರಿ ಹೇಳಿದ್ದಾರೆ.

ಈ ವಿಷಯವನ್ನು ಮನಗಂಡ ಸಚಿವರು, ಪಾಲಿಕೆಯ ಕ್ರಮವನ್ನು ಬೆಂಬಲಿಸಿ ದಂಡದ ಮೊತ್ತವನ್ನು ಪಾವತಿಸಲು ಒಪ್ಪಿಕೊಂಡಿದ್ದಾರೆ ಎಂದಿದ್ದಾರೆ. ಕಲಬುರಗಿ ನಗರದ ಹೊರವಲಯದ ಬಂಗರಗಾ ಕಲ್ಯಾಣ ಮಂಟಪದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಲು ಆಗಮಿಸುತ್ತಿದ್ದ ಸಂದರ್ಭದಲ್ಲಿ ಖರ್ಗೆ ಬೆಂಬಲಿಗರು ಸ್ವಾಗತ ಕೋರುವ ಹಿನ್ನೆಲೆಯಲ್ಲಿ ಬ್ಯಾನರ್ ಹಾಕಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com