ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ ಕರೆ: ತನಿಖೆಗೆ ವಿಶೇಷ ತಂಡ ರಚನೆ

ರಾಜಧಾನಿ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆ ಸೇರಿ 68 ಶಾಲೆಗಳಿಗೆ ಬಾಂಬ್ ಬೆದರಿಕೆ ಪತ್ರ ಬಂದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಯಾ ಪೊಲೀಸ್ ಠಾಣೆಗಳಲ್ಲಿ ಎಫ್‍ಐಆರ್ ದಾಖಲಿಸಲಾಗಿದ್ದು, ವಿಶೇಷ ತಂಡವನ್ನು ರಚಿಸಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ,
ಪೊಲೀಸರಿಂದ ಮಾಹಿತಿ ಪಡೆಯುತ್ತಿರುವ ಡಿಕೆ.ಶಿವಕುಮಾರ್.
ಪೊಲೀಸರಿಂದ ಮಾಹಿತಿ ಪಡೆಯುತ್ತಿರುವ ಡಿಕೆ.ಶಿವಕುಮಾರ್.

ಬೆಂಗಳೂರು: ರಾಜಧಾನಿ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆ ಸೇರಿ 68 ಶಾಲೆಗಳಿಗೆ ಬಾಂಬ್ ಬೆದರಿಕೆ ಪತ್ರ ಬಂದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಯಾ ಪೊಲೀಸ್ ಠಾಣೆಗಳಲ್ಲಿ ಎಫ್‍ಐಆರ್ ದಾಖಲಿಸಲಾಗಿದ್ದು, ವಿಶೇಷ ತಂಡವನ್ನು ರಚಿಸಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ,

ಪ್ರಕರಣದ ತನಿಖೆಗಾಗಿ ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಎನ್.ಸತೀಶ್ ಕುಮಾರ್ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿದೆ.

ಇಮೇಲ್‌ಗಳನ್ನು ವಿದೇಶದಿಂದ 'khharijites@beeble.com' ಎಂಬ ಇಮೇಲ್ ಮೂಲಕ ಕಳುಹಿಸಲಾಗಿದೆ, ಕಂಪನಿಯ ಡೊಮೇನ್ ಮೂಲಕ ಕಳುಹಿಸಿದ್ದರಿಂದ ಸೈಬರ್ ಕ್ರೈಂ ಪೊಲೀಸರು ಬೀಬಲ್‌ಗೆ ಇಮೇಲ್ ಕಳುಹಿಸಿದ್ದಾರೆಂಗು ಅಧಿಕಾರಿಯೊಬ್ಬರು ಹೇಳಿದ್ದಾರೆ.

ದೂರವಾಣಿ ಕರೆಗಳನ್ನು ಪತ್ತೆ ಹಚ್ಚುವುದು ಸುಲಭ. ಆದರೆ, ಇಂಟರ್ನೆಟ್ ಪ್ರೊಟೊಕಾಲ್ (ಐಪಿ) ವಿಳಾಸದ ವಿವರಗಳನ್ನು ಪಡೆಯುವುದು ಕಷ್ಟಕರ. ಏಕೆಂದರೆ ಮೇಲ್‌ಗಳನ್ನು ವರ್ಚುವಲ್ ಪ್ರೈವೇಟ್ ನೆಟ್‌ವರ್ಕ್ ಬಳಸಿ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದೇ ರೀತಿಯ ಬೆದರಿಕೆ ಇಮೇಲ್ ಗಳನ್ನು ಮಲೇಷಿಯಾದ 19 ಶಾಲೆಗಳಿಗೆ ಕಳುಹಿಸಲಾಗಿದೆ. ಪ್ರಸ್ತುತ ನಗರದ ಶಾಲೆಗಳಿಗೆ ರವಾನಿಸಲಾಗಿರುವ ಬೆದರಿಕೆ ಪತ್ರಗಳು ಇದೇ ರೀತಿಯದ್ದೇ ಆಗಿದೆ. ಒಂದು ವೇಳೆ ವಿಷಯ ಹಾಗೂ ಸರ್ವರ್ ಐಪಿ ವಿಳಾಸವನ್ನು ಬದಲಾಯಿಸಿದಿದ್ದರೆ, ಆರೋಪಿಗಳು ಅವರಿರುವ ಸ್ಥಳವನ್ನು ಬಹಿರಂಗಪಡಿಸದಂತಾಗುತ್ತಿತ್ತು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com