ಕೊಪ್ಪಳ: ಆರ್‌ಎಸ್ಎಸ್‌ನಂತ ಉಗ್ರ ಸಂಘಟನೆ ಮತ್ತೊಂದಿಲ್ಲ ಎಂದು ಪೋಸ್ಟ್; ವ್ಯಕ್ತಿ ವಿರುದ್ಧ ದೂರು ದಾಖಲು

ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ವನ್ನು 'ಭಯೋತ್ಪಾದಕ' ಸಂಘಟನೆ ಎಂದು ಬಿಂಬಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬರ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ಸೋಮವಾರ ತಿಳಿಸಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೊಪ್ಪಳ: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ವನ್ನು 'ಭಯೋತ್ಪಾದಕ' ಸಂಘಟನೆ ಎಂದು ಬಿಂಬಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬರ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ಸೋಮವಾರ ತಿಳಿಸಿವೆ.

ಕೊಪ್ಪಳದ ಗಂಗಾವತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಗಂಗಾವತಿ ಪಟ್ಟಣದ ನಿವಾಸಿ ಅಮೀರ್ ಅಮ್ಮು ಎಂಬಾತ ದೃಷ್ಟಿದೋಷವುಳ್ಳ ಮುಸ್ಲಿಂ ವ್ಯಕ್ತಿಯ ಮೇಲಿನ ಹಲ್ಲೆಯನ್ನು ಖಂಡಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು.

'ನೀವು ವಯಸ್ಸಾದ ಕುರುಡನನ್ನು ದರೋಡೆ ಮಾಡಿದ್ದೀರಿ ಮತ್ತು 'ಜೈ ಶ್ರೀ ರಾಮ್' ಘೋಷಣೆಗಳನ್ನು ಕೂಗುವಂತೆ ಒತ್ತಾಯಿಸಿದ್ದೀರಿ. ನಿಮಗೆ ಆರ್‌ಎಸ್ಎಸ್ ಕಾರ್ಯಕರ್ತರಿಗೆ ಗೌರವವಿಲ್ಲವೇ?. ನಿಮಗಿಂತ ಕೆಟ್ಟ ಭಯೋತ್ಪಾದಕ ಸಂಘಟನೆ ಇನ್ನೊಂದಿಲ್ಲ' ಎಂದು ಅಮೀರ್ ತಮ್ಮ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

ನವೆಂಬರ್ 24ರಂದು ಗಂಗಾವತಿ ಪಟ್ಟಣದ ಸಿದ್ದಿಕೇರಿ ರೈಲ್ವೆ ಬ್ರಿಡ್ಜ್ ಬಳಿ ಯುವಕರ ಗುಂಪೊಂದು ದೃಷ್ಟಿದೋಷವುಳ್ಳ 65 ವರ್ಷದ ಹುಸೇನ್ ಸಾಬ್ ಎಂಬುವವರ ಗಡ್ಡವನ್ನು ಸುಟ್ಟು 'ಜೈ ಶ್ರೀರಾಮ್' ಘೋಷಣೆ ಕೂಗುವಂತೆ ಒತ್ತಾಯಿಸಿದ್ದರು.
ತಡರಾತ್ರಿ ಹೊಸಪೇಟೆಯಿಂದ ಗಂಗಾವತಿಗೆ ಹಿಂತಿರುಗುತ್ತಿದ್ದ ವೇಳೆ ಈ ಘಟನೆ ನಡೆದಿತ್ತು.

ಅವರು ಆಟೋಗಾಗಿ ಕಾಯುತ್ತಿದ್ದಾಗ, ಬೈಕ್‌ನಲ್ಲಿ ಬಂದ ಆರೋಪಿಗಳು ಅವರನ್ನು ಬಲವಂತವಾಗಿ ತಮ್ಮ ವಾಹನಕ್ಕೆ ಹತ್ತಿಸಿಕೊಂಡು ರೈಲ್ವೆ ಸೇತುವೆ ಕೆಳಗೆ ಕರೆದೊಯ್ದಿದ್ದರು. ಬಳಿಕ ಅವರ ಗಡ್ಡವನ್ನು ಸುಟ್ಟು 'ಜೈ ಶ್ರೀರಾಮ್' ಎಂದು ಘೋಷಣೆಗಳನ್ನು ಕೂಗುವಂತೆ ಒತ್ತಾಯಿಸಿದ್ದರು.

ಬಳಿಕ ಆತನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ, ನಗದು ದೋಚಿದ್ದರು ಮತ್ತು ಪರಾರಿಯಾಗಿದ್ದರು. ಸಂತ್ರಸ್ತ ರಾತ್ರಿಯಿಡೀ ರೈಲ್ವೆ ಸೇತುವೆಯ ಕೆಳಗೆ ಇರುವಂತಾಗಿತ್ತು. 

ಬೆಳಗ್ಗೆ ಆತನನ್ನು ಗಮನಿಸಿದ ಕುರಿ ಮೇಯಿಸುವವರು, ಆತನನ್ನು ಮನೆಗೆ ಕರೆದೊಯ್ದಿದ್ದರು. ಈ ಸಂಬಂಧ ಹುಸೇನ್ ಸಾಬ್ ಪೊಲೀಸರಿಗೆ ದೂರು ದಾಖಲಿಸಿದ್ದರು.

ಘಟನಾ ಸ್ಥಳಕ್ಕೆ ಕೊಪ್ಪಳ ಎಸ್‌ಪಿ ಯಶೋದಾ ವಂಟಗೋಡಿ ಭೇಟಿ ನೀಡಿ ಆರೋಪಿಗಳನ್ನು ಶೀಘ್ರ ಪತ್ತೆ ಹಚ್ಚಲಾಗುವುದು ಎಂದು ಭರವಸೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com