ಕರ್ನಾಟಕದಲ್ಲಿ ಕೊಲೆ ಪ್ರಕರಣಗಳ ಏರಿಕೆ; ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ನೀಡಿದ ಶಾಕಿಂಗ್ ಮಾಹಿತಿ

ಎನ್‌ಸಿಆರ್‌ಬಿ ಡೇಟಾದ ವಿಶ್ಲೇಷಣೆ ಪ್ರಕಾರ, ರಾಜ್ಯದಲ್ಲಿ 2021ರಲ್ಲಿ 1,357 ರಷ್ಟಿದ್ದ ಕೊಲೆ ಪ್ರಕರಣಗಳ ಸಂಖ್ಯೆಯು ಕಳೆದ ವರ್ಷ 1,404ಕ್ಕೆ ಏರಿಕೆಯಾಗಿದೆ ಎಂದು ತೋರಿಸಿದೆ. 28 ರಾಜ್ಯಗಳ ಪೈಕಿ ಕರ್ನಾಟಕ 8ನೇ ಸ್ಥಾನದಲ್ಲಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: 2022ರಲ್ಲಿ ಕರ್ನಾಟಕದಲ್ಲಿ ಒಟ್ಟು 1,404 ಕೊಲೆ ಪ್ರಕರಣಗಳು ದಾಖಲಾಗಿವೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಬಿಡುಗಡೆ ಮಾಡಿದ ಇತ್ತೀಚಿನ ವರದಿ ಪ್ರಕಾರ, ಅವುಗಳಲ್ಲಿ ಬಹುಪಾಲು ವಿವಾದಗಳ ಕಾರಣದಿಂದ 'ವೈಯಕ್ತಿಕ ದ್ವೇಷ ಅಥವಾ ದ್ವೇಷ'ದ ಕಾರಣದಿಂದ ಆಗಿವೆ ಎಂದು ತಿಳಿದುಬಂದಿದೆ.

ಎನ್‌ಸಿಆರ್‌ಬಿ ಡೇಟಾದ ವಿಶ್ಲೇಷಣೆ ಪ್ರಕಾರ, ರಾಜ್ಯದಲ್ಲಿ 2021ರಲ್ಲಿ 1,357 ರಷ್ಟಿದ್ದ ಕೊಲೆ ಪ್ರಕರಣಗಳ ಸಂಖ್ಯೆಯು ಕಳೆದ ವರ್ಷ 1,404ಕ್ಕೆ ಏರಿಕೆಯಾಗಿದೆ ಎಂದು ತೋರಿಸಿದೆ.

28 ರಾಜ್ಯಗಳ ಪೈಕಿ, 2022ರಲ್ಲಿ ಉತ್ತರ ಪ್ರದೇಶದಲ್ಲಿ ಗರಿಷ್ಠ 3,491 ಕೊಲೆ ಪ್ರಕರಣಗಳು ದಾಖಲಾಗಿವೆ. ನಂತರ ಬಿಹಾರ (2,930) ಮತ್ತು ಮಹಾರಾಷ್ಟ್ರ (2,295) ಸ್ಥಾನ ಪಡೆದಿವೆ. ಕರ್ನಾಟಕ 8ನೇ ಸ್ಥಾನದಲ್ಲಿದೆ.

ಎನ್‌ಸಿಆರ್‌ಬಿ ಪ್ರಕಾರ, ಕರ್ನಾಟಕದಲ್ಲಿ ಕೊಲೆಯ ಪ್ರಮಾಣವು ಪ್ರತಿ ಲಕ್ಷ ಜನಸಂಖ್ಯೆಗೆ 2.1 ರಷ್ಟಿದ್ದರೆ, ಅಂತಹ ಪ್ರಕರಣಗಳಲ್ಲಿ ಚಾರ್ಜ್ ಶೀಟ್ ಸಲ್ಲಿಕೆ 90.2 ರಷ್ಟಿದೆ. ಎನ್‌ಸಿಆರ್‌ಬಿಯು ಅಪರಾಧದ ದತ್ತಾಂಶಗಳ ಸಂಗ್ರಹಣೆ ಮತ್ತು ವಿಶ್ಲೇಷಣೆಯ ಕಾರ್ಯವನ್ನು ನಿರ್ವಹಿಸುತ್ತದೆ.

ರಾಜ್ಯದಲ್ಲಿ 2022ರಲ್ಲಿ ನಡೆದ ಅತಿ ಹೆಚ್ಚು ಕೊಲೆ ಪ್ರಕರಣಗಳಲ್ಲಿ 706 ಪ್ರಕರಣಗಳಿಗೆ 'ವಿವಾದಗಳು' ಕಾರಣವಾಗಿದ್ದು, ನಂತರ 353 ಪ್ರಕರಣಗಳಲ್ಲಿ 'ವೈಯಕ್ತಿಕ ದ್ವೇಷ, 108 ಪ್ರಕರಣಗಳಲ್ಲಿ ಅಕ್ರಮ ಸಂಬಂಧ, 59 ಪ್ರಕರಣಗಳಲ್ಲಿ 'ಲಾಭ', 44 ಪ್ರಕರಣಗಳಲ್ಲಿ ಪ್ರೇಮ ಪ್ರಕರಣಗಳಾಗಿವೆ ಎಂದು ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಎನ್‌ಸಿಆರ್‌ಬಿಯ ವಾರ್ಷಿಕ ಅಪರಾಧ ವರದಿ ತಿಳಿಸಿದೆ.

ಕೊಲೆಯಾದ ಒಟ್ಟು ಸಂತ್ರಸ್ತರಲ್ಲಿ ಹೆಚ್ಚಿನವರು ಪುರುಷರು (1,007), 472 ಮಹಿಳೆಯರು ಮತ್ತು ಮೂವರು ತೃತೀಯಲಿಂಗಿಗಳು ಎಂದು ಅಂಕಿಅಂಶಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com