ನಂದಿಬೆಟ್ಟಕ್ಕೆ ಎಲೆಕ್ಟ್ರಿಕ್ ರೈಲು ಆರಂಭಿಸಲು ನೈರುತ್ಯ ರೈಲ್ವೆ ನಿರ್ಧಾರ

ಚಿಕ್ಕಬಳ್ಳಾಪುರ ತಾಲೂಕಿನಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣ ನಂದಿಬೆಟ್ಟಕ್ಕೆ  ಡಿಸೆಂಬರ್ 11 ರಿಂದ ಎಲೆಕ್ಟ್ರಿಕ್ ರೈಲು ಆರಂಭಿಸಲು ನೈಋತ್ಯ ರೈಲ್ವೆ ನಿರ್ಧರಿಸಿದೆ.  
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ತಾಲೂಕಿನಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣ ನಂದಿಬೆಟ್ಟಕ್ಕೆ  ಡಿಸೆಂಬರ್ 11 ರಿಂದ ಎಲೆಕ್ಟ್ರಿಕ್ ರೈಲು ಆರಂಭಿಸಲು ನೈಋತ್ಯ ರೈಲ್ವೆ ನಿರ್ಧರಿಸಿದೆ.  

ದೇವನಹಳ್ಳಿಯಿಂದ ಚಿಕ್ಕಬಳ್ಳಾಪುರಕ್ಕೆ ವಿಮಾನ ನಿಲ್ದಾಣ ಮಾರ್ಗದಲ್ಲಿ MEMU ರೈಲುಗಳ ಕಾರ್ಯಾಚರಣೆಯನ್ನು ವಿಸ್ತರಿಸಲು ನೈಋತ್ಯ ರೈಲ್ವೆ ತೀರ್ಮಾನಿಸಿದೆ. 

ರೈಲಿನ ವಿವರ ಇಂತಿದೆ:  ಬೆಂಗಳೂರು ಕಂಟೋನ್ಮೆಂಟ್-ಚಿಕ್ಕಬಳ್ಳಾಪುರ-ಕಂಟೋನ್ಮೆಂಟ್ ರೈಲಿನ ಸಂಖ್ಯೆ  6531/06532, ಬೆಂಗಳೂರು, ಕಂಟೋನ್ಮೆಂಟ್-ಚಿಕ್ಕಬಳ್ಳಾಪುರ ರೈಲಿನ ಸಂಖ್ಯೆ 06535/06583 ಮತ್ತು ಯಶವಂತಪುರ-ಚಿಕ್ಕಬಳ್ಳಾಪುರ-ಯಶವಂತಪುರ ರೈಲಿನ ಸಂಖ್ಯೆ 06593/06594.

ಯಲಹಂಕ-ಚಿಕ್ಕಬಳ್ಳಾಪುರ ಮಾರ್ಗದ ವಿದ್ಯುದ್ದೀಕರಣವು ಮಾರ್ಚ್ 2022 ರಲ್ಲಿ ಪೂರ್ಣಗೊಂಡಿದೆ. ಆದರೆ, ವಿವಿಧ ಕಾರಣಗಳಿಂದ ವಿದ್ಯುತ್ ರೈಲುಗಳ ಅಳವಡಿಕೆ ವಿಳಂಬವಾಗಿದೆ. ಪ್ರಸ್ತುತ, ನಂದಿ ನಿಲ್ದಾಣದಲ್ಲಿ  ಬೆಂಗಳೂರು-ಕೋಲಾರ-ಕಂಟೋನ್ಮೆಂಟ್ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರು-ಕೋಲಾರ-KSR ಬೆಂಗಳೂರು ನಡುವೆ ಡೇಮೊ ರೈಲು ಸಂಚರಿಸುತ್ತಿವೆ. 

ಚಿಕ್ಕಬಳ್ಳಾಪುರಕ್ಕೆ ಸೇವೆಗಳನ್ನು ವಿಸ್ತರಿಸುವುದರಿಂದ ವಿದ್ಯಾರ್ಥಿಗಳು, ರೈತರು ಮತ್ತು 112 ಅಡಿ ಎತ್ತರದ ಆದಿಯೋಗಿ ಪ್ರತಿಮೆಯನ್ನು ನೋಡಲು ಬಯಸುವ ಪ್ರವಾಸಿಗರಿಗೆ ಅನುಕೂಲವಾಗುತ್ತದೆ ಎಂಬುದನ್ನು ನೈರುತ್ಯ ರೈಲ್ವೆ ಗಮನಿಸಿದೆ. ಆದರೆ ಈ ರೈಲುಗಳು ಬೆಟ್ಟಹಲಸೂರು, ದೊಡ್ಡಜಾಲ, ಚನ್ನಸಂದ್ರದಂತಹ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರುವುದಿಲ್ಲ. 

ನಂದಿ ನಿಲುಗಡೆ ಕಾಮಗಾರಿ ಎರಡು ತಿಂಗಳೊಳಗೆ ಪೂರ್ಣಗೊಳ್ಳಲಿದೆ. ಒಮ್ಮೆ ಮುಗಿದ ನಂತರ, ನಂದಿ ಬೆಟ್ಟದಲ್ಲಿ ಸೂರ್ಯೋದಯವನ್ನು ವೀಕ್ಷಿಸಲು ಅನುಕೂಲವಾಗುವಂತೆ ಪ್ರವಾಸಿಗರಿಗೆ ಬೆಳಗ್ಗೆಯಿಂದಲೇ ರೈಲ್ವೆ ಸೇವೆ ಆರಂಭವಾಗಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com