ಉಚಿತ ಭಾಗ್ಯಗಳನ್ನು ಪ್ರಶ್ನಿಸಿ ಹೈಕೋರ್ಟ್ ಗೆ ನಿವೃತ್ತ ಯೋಧರಿಂದ ಪಿಐಎಲ್

 ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಉಚಿತ ಭಾಗ್ಯಗಳನ್ನು ಘೋಷಿಸುವುದನ್ನು ವೋಟಿಗಾಗಿ ನೋಟು ಎಂದು ಆರೋಪಿಸಿ ನಾಲ್ವರು ನಿವೃತ್ತ ಯೋಧರು ಹೈಕೋರ್ಟ್ ಗೆ ಪಿಐಎಲ್ ದಾಖಲಿಸಿದ್ದಾರೆ.
ಕಾಂಗ್ರೆಸ್ ನ ಗ್ಯಾರಂಟಿ ಅನ್ನಭಾಗ್ಯ ಯೋಜನೆ
ಕಾಂಗ್ರೆಸ್ ನ ಗ್ಯಾರಂಟಿ ಅನ್ನಭಾಗ್ಯ ಯೋಜನೆ

ಬೆಂಗಳೂರು: ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಉಚಿತ ಭಾಗ್ಯಗಳನ್ನು ಘೋಷಿಸುವುದನ್ನು ವೋಟಿಗಾಗಿ ನೋಟು ಎಂದು ಆರೋಪಿಸಿ ನಾಲ್ವರು ನಿವೃತ್ತ ಯೋಧರು ಹೈಕೋರ್ಟ್ ಗೆ ಪಿಐಎಲ್ ದಾಖಲಿಸಿದ್ದಾರೆ.

ಬ್ರಿಗೇಡಿಯರ್ ರವಿ ಮುನಿಸ್ವಾಮಿ, ನಯಿಬ್ ಸುಬೇದಾರ್ ರಮೇಶ್ ಜಗಥಾಪ್, ನಾಯ್ಕ್ ಮಣೀಕಂಠ ಎ ಹಾಗೂ ಹವಾಲ್ದಾರ್ ಬಸಪ್ಪ ಪಟ್ಟಣಶೆಟ್ಟಿ ಪಿಐಎಲ್ ಸಲ್ಲಿಸಿದ್ದು, ವಿಚಾರಣೆಗೆ ಬರಬೇಕಿದೆ.

'ಚುನಾವಣೆ ಸಂದರ್ಭದಲ್ಲಿ ಮತ್ತು ಚುನಾವಣೆಯ ನಂತರ ಉಚಿತ ಕೊಡುಗೆಗಳನ್ನು ನೀಡುವ ಮೂಲಕ, ರಾಜಕೀಯ ಪಕ್ಷಗಳು ಅಧಿಕಾರ ಪಡೆಯಲು ಟ್ರೆಂಡ್‌ಗಳನ್ನು ಸೃಷ್ಟಿಸುತ್ತಿವೆ ಮತ್ತು ಚುನಾವಣೆಯ ನಂತರ ಸರ್ಕಾರದ ಅಧಿಕಾರವನ್ನು ಹಿಡಿದಾಗ ಉಚಿತ/ಸಮಾದಾನ/ಉಡುಗೊರೆಗಳನ್ನು ನೀಡುವುದಾಗಿ ಭರವಸೆ ನೀಡುತ್ತಿವೆ. (ಇದು) ಪ್ರಜಾಪ್ರತಿನಿಧಿ ಕಾಯಿದೆಯ ನಿಬಂಧನೆಗಳ ಅಡಿಯಲ್ಲಿ ವೋಟಿಗಾಗಿ ನೋಟು ಅಲ್ಲದೇ ಬೇರೇನೂ ಅಲ್ಲ ಎಂದು ಪಿಐಎಲ್ ಆರೋಪಿಸಿದೆ.

ರಾಜಕೀಯ ಪಕ್ಷಗಳು ಈ ಉಚಿತ ಕೊಡುಗೆಗಳನ್ನು ನೀಡುವ ಘೋಷಣೆಯು ಕಾನೂನಿನ ನಿಬಂಧನೆಗಳಿಗೆ ಮತ್ತು ಭಾರತದ ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಪಿಐಎಲ್ ಹೇಳಿದೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಗೃಹ ಲಕ್ಷ್ಮಿ, ಗೃಹ ಜ್ಯೋತಿ ಮತ್ತು ಶಕ್ತಿ ಯೋಜನೆಯಂತಹ ಉಚಿತ ಭರವಸೆಗಳನ್ನು ನೀಡುವ ಮೂಲಕ ರಾಜ್ಯದಲ್ಲಿ ಅಧಿಕಾರ ಗಳಿಸಿದೆ ಎಂದು ಪಿಐಎಲ್ ಹೇಳಿದೆ.

ಈ ಉಚಿತಗಳ ಕಾರಣ, ಅಭ್ಯರ್ಥಿಗಳ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಮತ್ತು ಇದು ದೇಶದ ತೀವ್ರವಾಗಿ ಹದಗೆಟ್ಟ ಆರ್ಥಿಕತೆಗೆ ಕಾರಣವಾಗುತ್ತದೆ ಮತ್ತು ಪ್ರತಿಯೊಬ್ಬರೂ ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಅರ್ಜಿದಾರರು ಹೇಳಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮತ್ತು ರಾಜಕೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್‌ಗಳನ್ನು ಅರ್ಜಿಯಲ್ಲಿ ಪ್ರತಿವಾದಿಗಳಾಗಿ ಹೆಸರಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com