ಕಾರಂತ ಲೇಔಟ್‌: ಪ್ರತಿ ಚದರ ಅಡಿಗೆ 3,650 ರೂ. ನಿಗದಿಪಡಿಸಲು ಬಿಡಿಎ ಪ್ರಸ್ತಾಪ

ಡಾ.ಕೆ.ಶಿವರಾಮ ಕಾರಂತ ಬಡಾವಣೆಯ ನಿವೇಶನ ಹಂಚಿಕೆಯಲ್ಲಿ ವಿನಾಕಾರಣ ವಿಳಂಬವಾಗುತ್ತಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರುವ ಈ ಲೇಔಟ್ ಬಹುತೇಕ ಪೂರ್ಣಗೊಂಡಿದ್ದು, ಹಂಚಿಕೆ ಡಿಸೆಂಬರ್ ಮೊದಲ ವಾರದಲ್ಲಿ ಪ್ರಾರಂಭವಾಗಬೇಕಿತ್ತು. ಆದರೆ ಅದು ಬೇಗನೆ ಆಗುವ ಹಾಗೆ ಕಾಣುತ್ತಿಲ್ಲ.
ಕಾರಂತ ಲೇಔಟ್
ಕಾರಂತ ಲೇಔಟ್

ಬೆಂಗಳೂರು: ಡಾ.ಕೆ.ಶಿವರಾಮ ಕಾರಂತ ಬಡಾವಣೆಯ ನಿವೇಶನ ಹಂಚಿಕೆಯಲ್ಲಿ ವಿನಾಕಾರಣ ವಿಳಂಬವಾಗುತ್ತಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರುವ ಈ ಲೇಔಟ್ ಬಹುತೇಕ ಪೂರ್ಣಗೊಂಡಿದ್ದು, ಹಂಚಿಕೆ ಡಿಸೆಂಬರ್ ಮೊದಲ ವಾರದಲ್ಲಿ ಪ್ರಾರಂಭವಾಗಬೇಕಿತ್ತು. ಆದರೆ ಅದು ಬೇಗನೆ ಆಗುವ ಹಾಗೆ ಕಾಣುತ್ತಿಲ್ಲ.

ಇದು  ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಎರಡನೇ ದೊಡ್ಡ ಲೇಔಟ್ ಆಗಿದೆ. ಇಲ್ಲಿ 3,546 ಎಕರೆ ಮತ್ತು 12 ಗುಂಟೆ ಪ್ರದೇಶಗಳಲ್ಲಿ 34,000 ಸೈಟ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ. ಅದರಲ್ಲಿ 12,000 ಸೈಟ್‌ಗಳನ್ನು ಸಾರ್ವಜನಿಕರಿಗೆ ಹಂಚಿಕೆ ಮಾಡಲಾಗುತ್ತಿದೆ. 

ಲೇಔಟ್‌ಗೆ ಪ್ರತಿ ಚದರ ಅಡಿಗೆ ರೂ. 3,650 ರೂ.ಗೆ ನಿಗದಿಪಡಿಸಲು ಬಿಡಿಎ ಪ್ರಸ್ತಾಪಿಸಿದ್ದು, ಅದನ್ನು ಸೆಪ್ಟೆಂಬರ್ 25 ರಂದು ಒಪ್ಪಿಗೆಗಾಗಿ ಮಂಡಳಿ ಮುಂದೆ ಇಟ್ಟಿತ್ತು. ನಗರಾಭಿವೃದ್ಧಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ನಾಗರಿಕ ಏಜೆನ್ಸಿಗಳ ಮುಖ್ಯಸ್ಥರನ್ನು ಒಳಗೊಂಡಿರುವ ಮಂಡಳಿಯು ಅದರ ಅಂತಿಮ ಪ್ರಾಧಿಕಾರವಾಗಿದ್ದು, ಅದರ ಶಿಫಾರಸನ್ನು  ಒಪ್ಪಿಗೆಗಾಗಿ ರಾಜ್ಯ ಸರ್ಕಾರಕ್ಕೆ ಕಳುಹಿಸುತ್ತದೆ. ಹಂಚಿಕೆಗೆ ಹಸಿರು ನಿಶಾನೆ ತೋರಿಲ್ಲ ಎಂದು ಮೂಲವೊಂದು ತಿಳಿಸಿದೆ. ವಾಸ್ತವವಾಗಿ, ಸಭೆಯ ನಡಾವಳಿಯನ್ನು ಸಹ ಬಿಡುಗಡೆ ಮಾಡಲಾಗಿಲ್ಲ.

ಮತ್ತೊಂದು ಮೂಲಗಳ ಪ್ರಕಾರ ಬಿಡಿಎ, ನಾಮಮಾತ್ರಕ್ಕೆ ಮಾತ್ರ ಅಷ್ಟು ದರ ನಿಗದಿಪಡಿಸಿದೆ. ಏಕೆಂದರೆ ಅಲ್ಲಿ ಮಾರುಕಟ್ಟೆ ದರ ಪ್ರತಿ ಚದರ ಅಡಿಗೆ 6,000 ರೂ. ಆಗಿದೆ. ಲೇಔಟ್ ಮಾಡಲು ರಾಜ್ಯ ಸರ್ಕಾರ 5,337 ಕೋಟಿ ರೂ.ಗಳನ್ನು ಮಂಜೂರು ಮಾಡಿತ್ತು. ಬಿಡಿಎ ನಿಗದಿಪಡಿಸಿದ ಈ ದರದೊಂದಿಗೆ ಅದು ಹೂಡಿಕೆಯನ್ನು ಮರುಪಡೆಯುತ್ತದೆ. ಇದು ಲಾಭವಿಲ್ಲದ, ನಷ್ಟವಿಲ್ಲದ ಉದ್ಯಮವಾಗಿರುತ್ತದೆ ಎಂದು ತಿಳಿಸಿವೆ. 

ಇದು ಸುಪ್ರೀಂ ಕೋರ್ಟ್ ನೇಮಕಗೊಂಡ ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ್ ಸಮಿತಿ (ಜೆಸಿಸಿ) ಮೇಲ್ವಿಚಾರಣೆಯಲ್ಲಿ ಅಭಿವೃದ್ಧಿಪಡಿಸುತ್ತಿರುವ ಮೊದಲ ಬಿಡಿಎ ಲೇಔಟ್ ಆಗಿದೆ. ರಸ್ತೆಗಳು ಮತ್ತು ಚರಂಡಿಗಳ ರಚನೆಯು ಪೂರ್ಣಗೊಳ್ಳುವ ಹಂತದಲ್ಲಿದೆ ಮತ್ತು ಸೈಟ್ ಸಂಖ್ಯೆಗಳನ್ನು ಮಾಡಲಾಗುತ್ತಿದೆ ಎಂದು ಸೆಪ್ಟೆಂಬರ್ ಮಧ್ಯದಲ್ಲಿ  ಅದು ಹೇಳಿತ್ತು. ಸಮಿತಿಯು ಡಿಸೆಂಬರ್ ಮೊದಲ ವಾರದಲ್ಲಿ ನಿವೇಶನ ಹಂಚಿಕೆ ಗಡುವು ನಿಗದಿಪಡಿಸಿದೆ.

ಭೂ ಕಳೆದುಕೊಳ್ಳುವ ರೈತರಿಗೆ ಆದ್ಯತೆ ನೀಡಲಾಗಿದ್ದು, ಅವರಿಗೆ 15,000 ನಿವೇಶನಗಳು, ಸಾರ್ವಜನಿಕರಿಗೆ 12,000 ಮತ್ತು ಕಂದಾಯ ನಿವೇಶನ ಹೊಂದಿರುವವರಿಗೆ 2,000 ನಿವೇಶನಗಳನ್ನು ನಿಗದಿಪಡಿಸಲಾಗಿದ್ದು, 4,500 ನಿವೇಶನಗಳು ಕಾರ್ನರ್ ಸೈಟ್‌ಗಳಾಗಿದ್ದು, ಭವಿಷ್ಯದಲ್ಲಿ ಹರಾಜು ಮಾಡಲಾಗುವುದು ಎಂದು ಅದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com