ಬೆಂಗಳೂರು: ಹಾರ್ನ್ ಮಾಡಿದ್ದಕ್ಕೆ ಉದ್ಯಮಿ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ; ದೂರು ದಾಖಲು

ಕಳೆದ ಮಂಗಳವಾರ ರಾತ್ರಿ 11.20 ರಿಂದ 11.50 ರ ನಡುವೆ ಆಡುಗೋಡಿಯ ನಂಜಪ್ಪ ಲೇಔಟ್‌ನಲ್ಲಿ ಕೇರಳದ 26 ವರ್ಷದ ಉದ್ಯಮಿಯೊಬ್ಬರನ್ನು ಅವರ ಕಾರಿನಿಂದ ಹೊರಗೆಳೆದು ಬೈಕ್‌ನಲ್ಲಿ ಬಂದ ಆರು ದುಷ್ಕರ್ಮಿಗಳ ತಂಡವು ಹಲ್ಲೆ ನಡೆಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕಳೆದ ಮಂಗಳವಾರ ರಾತ್ರಿ 11.20 ರಿಂದ 11.50 ರ ನಡುವೆ ಆಡುಗೋಡಿಯ ನಂಜಪ್ಪ ಲೇಔಟ್‌ನಲ್ಲಿ ಕೇರಳದ 26 ವರ್ಷದ ಉದ್ಯಮಿಯೊಬ್ಬರನ್ನು ಅವರ ಕಾರಿನಿಂದ ಹೊರಗೆಳೆದು ಬೈಕ್‌ನಲ್ಲಿ ಬಂದ ಆರು ದುಷ್ಕರ್ಮಿಗಳ ತಂಡವು ಹಲ್ಲೆ ನಡೆಸಿದೆ.

ವಿಲ್ಸನ್ ಗಾರ್ಡನ್ ನಿವಾಸಿ ಬೇಸಿಲ್ ಸಿ ಕುರಿಯಾಕೋಸ್ ಎಂದು ಗುರುತಿಸಲಾಗಿದೆ. ಕಳೆದ ಎರಡು ವರ್ಷಗಳಿಂದ ನಗರದಲ್ಲಿ ಸಿಬಿಡಿ ಪ್ರದೇಶದ ಕಾಲೇಜೊಂದರಲ್ಲಿ ಕಾನೂನು ವ್ಯಾಸಂಗ ಮಾಡುತ್ತಿದ್ದು, ಆತನ ಪತ್ನಿ, ಸಹೋದರಿ ಮತ್ತು ಅವರ ಸ್ನೇಹಿತೆ ಸೇರಿ ಮೂವರು ಮಹಿಳೆಯರೊಂದಿಗೆ ಕಾರು ಚಲಾಯಿಸುತ್ತಿದ್ದರು. ಈ ವೇಳೆ ಆರೋಪಿಗಳು ಸಂತ್ರಸ್ತನ ದಾರಿಯನ್ನು ತಡೆಯುತ್ತಿದ್ದರು.

ಇದರಿಂದ ಬೇಸರಗೊಂಡ ಆರೋಪಿಗಳು ಕಾರನ್ನು ಓವರ್‌ಟೇಕ್ ಮಾಡಿ ನಿಲ್ಲಿಸಿದ್ದಾರೆ. ಸಂತ್ರಸ್ತ ವ್ಯಕ್ತಿ ಕೇರಳ ನೋಂದಾಯಿತ ಕಾರನ್ನು ಓಡಿಸುತ್ತಿದ್ದ . ಆತ  ಹೊರಗಿನವ ಎಂಬ ಕಾರಣಕ್ಕಾಗಿ ಜಗಳವಾಡಿದರು. ನಂತರ ಅವರು ಕಾರಿನ ಕೀಗಳನ್ನು ತೆಗೆದುಕೊಂಡು ಸಂತ್ರಸ್ತ ವ್ಯಕ್ತಿಯನ್ನು ಕಾರಿನಿಂದ ಕೆಳಗಿಳಿಯಲು ಒತ್ತಾಯಿಸಿದರು. ಗ್ಯಾಂಗ್ ಅವರ ಮೇಲೆ ಹೆಲ್ಮೆಟ್‌ನಿಂದ ಹಲ್ಲೆ ಕೂಡ ನಡೆಸಿದೆ.  ನಂತರ ಆತನ  ನಿವಾಸದವರೆಗೂ ಹಿಂಬಾಲಿಸಿದ್ದಾರೆ ಈ ಸಂಬಂಧ. ಆಡುಗೋಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕೋರಮಂಗಲದ ರೆಸ್ಟೋರೆಂಟ್‌ನಲ್ಲಿ ರಾತ್ರಿ ಊಟ ಮುಗಿಸಿ ಮೂವರು ಮಹಿಳೆಯರೊಂದಿಗೆ ಮನೆಗೆ ಮರಳುತ್ತಿದ್ದೆ ಎಂದು ಕುರಿಯಕೋಸ್ ಹೇಳಿದ್ದಾರೆ. ನನ್ನ ತಂಗಿ ಔಷಧಿ ತೆಗೆದುಕೊಳ್ಳಬೇಕಾಗಿತ್ತು, ಹೀಗಾಗಿ ನಾನು ಅವಳನ್ನು ಮನೆಗೆ ಬಿಡಲು ಹೋಗುತ್ತಿದ್ದೆ. ಮೂರು ದ್ವಿಚಕ್ರ ವಾಹನಗಳಲ್ಲಿ ಬಂದ ಆರೋಪಿಗಳು ಸಮಾನಾಂತರವಾಗಿ ಸಂಚರಿಸಿ ಸಂಚಾರಕ್ಕೆ ಅಡ್ಡಿಪಡಿಸುತ್ತಿದ್ದರು. ದಾರಿಯನ್ನು ತೆರವುಗೊಳಿಸಲು ನಾನು ಅವರಿಗೆ ಹಾರ್ನ್ ಮಾಡಿದೆ.

ಆರೋಪಿಗಳು ನನ್ನ ಕಾರನ್ನು ಹಿಂಬಾಲಿಸಿ ನಾನು ಕೇರಳ ನೋಂದಣಿಯ ಕಾರನ್ನು ಚಲಾಯಿಸುತ್ತಿರುವುದನ್ನು ಗಮನಿಸಿದ್ದಾರೆ. ನಂತರ ನಾವು ಇಲ್ಲಿಗೆ ಬಂದು ಸ್ಥಳೀಯರ ಮೇಲೆ ಪ್ರಾಬಲ್ಯ ಸಾಧಿಸಲು ಬಯಸುತ್ತೇವೆ ಎಂದು ಅವರು ಜಗಳವಾಡಿದರು. ಅವರು ಮತ್ತಷ್ಟು ಸ್ಥಳೀಯರನ್ನು ಕರೆದರು. ಅವರು ನನ್ನನ್ನು ಕಾರಿನ ಕಿಟಕಿಯನ್ನು ಕೆಳಕ್ಕೆ ಇಳಿಸಿ ಕೀಗಳನ್ನು ತೆಗೆದುಕೊಂಡರು. ನನ್ನನ್ನು ಬಲವಂತವಾಗಿ ಕಾರಿನಿಂದ ಕೆಳಗಿಳಿಸಿ ಥಳಿಸಲು ಆರಂಭಿಸಿದರು. ನಾನು ಕೀಗಳನ್ನು ಹಿಂತಿರುಗಿಸಲು ವಿನಂತಿಸಿದೆ. ಅವರು ಕಾರಿನ ಕೀಯನ್ನು ಹಿಂದಿರುಗಿಸಿದ ನಂತರ, ನಾನು ನನ್ನ ಕುಟುಂಬ ಸದಸ್ಯರನ್ನು ಮನೆಗೆ ಇಳಿಸಿ ಪೊಲೀಸ್ ಠಾಣೆಗೆ ಹೋದೆ ಎಂದು ಹೇಳಿದ್ದಾರೆ.

ದೂರು ದಾಖಲಿಸಿಕೊಂಡ ಪೊಲೀಸರು ತಕ್ಷಣ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಎಲ್ಲಾ ಆರೋಪಿಗಳು 40 ವರ್ಷ ವಯಸ್ಸಿನವರು. ಎಲ್ಲಾ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಆರೋಪಿಗಳು ಕಾನೂನನ್ನು ಕೈಗೆ ತೆಗೆದುಕೊಳ್ಳುವ ಬದಲು ಪೊಲೀಸರನ್ನು ಸಂಪರ್ಕಿಸಿರಬೇಕು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ವಿರುದ್ಧ ಐಪಿಸಿಯ ಇತರ ಸೆಕ್ಷನ್‌ಗಳ ಜೊತೆಗೆ ಅಪಾಯಕಾರಿ ಆಯುಧಗಳಿಂದ (ಐಪಿಸಿ 324) ಗಾಯಗೊಳಿಸಿರುವ ಪ್ರಕರಣವನ್ನು ದಾಖಲಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com