ಮೇ ಅಂತ್ಯದೊಳಗೆ ಬೆಂಗಳೂರು ನಗರದ ಹೊರವಲಯದ 110 ಗ್ರಾಮಗಳಿಗೆ ಕಾವೇರಿ ನೀರು ಪೂರೈಕೆ!

ನಗರದ ಹೊರವಲಯದ 110 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ 5,500 ಕೋಟಿ ರೂ.ಗಳ ಯೋಜನೆಯು ಮೇ 2024 ರ ಅಂತ್ಯದ ವೇಳೆಗೆ ಕಾರ್ಯಾರಂಭ ಮಾಡಲಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ನಗರದ ಹೊರವಲಯದ 110 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ 5,500 ಕೋಟಿ ರೂ.ಗಳ ಯೋಜನೆಯು ಮೇ 2024 ರ ಅಂತ್ಯದ ವೇಳೆಗೆ ಕಾರ್ಯಾರಂಭ ಮಾಡಲಿದೆ.

ಇದು ಜಪಾನ್ ಅನುದಾನಿತ ಕಾವೇರಿ ನೀರು ಸರಬರಾಜು 5ನೇ ಹಂತದ ಯೋಜನೆಯಾಗಿದೆ. ನೀರು ಪೂರೈಕೆಗೆ ಇತ್ತೀಚಿನ ಪರಿಷ್ಕೃತ ಗಡುವನ್ನು ಮುಂದಿನ ವರ್ಷ ಫೆಬ್ರವರಿ/ಮಾರ್ಚ್ ಎಂದು ನಿಗದಿ ಪಡಿಸಲಾಗಿದೆ.

2020 ರಲ್ಲಿ ಆರಂಭವಾದ ಈ ಯೋಜನೆಗೆ 36 ತಿಂಗಳ ಗಡುವು ನೀಡಲಾಗಿತ್ತು. COVID-19 ಮತ್ತು ಅದರ ನಂತರದ ಸಮಸ್ಯೆಗಳಿಂದಾಗಿ, ಯೋಜನೆಯು ವಿಳಂಬವಾಯಿತು. ಅಂದರೆ ಕೇವಲ 9 ತಿಂಗಳ ವಿಳಂಬವಾಗಿದೆ. ನಾವು ಈಗ ಟ್ರ್ಯಾಕ್‌ನಲ್ಲಿದ್ದೇವೆ. ಮಾರ್ಚ್ 2024 ರ ವೇಳೆಗೆ ಎಲ್ಲಾ ಮೂಲಸೌಕರ್ಯಗಳು  ಪೂರ್ಣವಾಗಿ  ಮೇ ವೇಳೆಗೆ ಯೋಜನೆಯನ್ನು ಕಾರ್ಯಾರಂಭ ಮಾಡುತ್ತೇವೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ (BWSSB) ಅಧ್ಯಕ್ಷ ಪ್ರಶಾಂತ್ ಮನೋಹರ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ರಾಜ್ಯ ಸರ್ಕಾರವು  ತನ್ನ ಯೋಜನೆಯನ್ನು ಜುಲೈ 2023 ರ ಗಡುವಿನಿಂದ ಡಿಸೆಂಬರ್ 2023 ಕ್ಕೆ ವಿಸ್ತರಿಸಿದೆ. ಕೆಲವು ತಿಂಗಳ ಹಿಂದೆ, ಉನ್ನತ BWSSB ಅಧಿಕಾರಿಗಳು 2024 ರ ಮೊದಲ ತ್ರೈಮಾಸಿಕದೊಳಗೆ ಅದನ್ನು ಕಾರ್ಯಾರಂಭ ಮಾಡುವ ವಿಶ್ವಾಸವನ್ನು ಹೊಂದಿದ್ದರು. ಈ ಯೋಜನೆ 225 ಚದರ ಕಿಲೋಮೀಟರ್‌ನಲ್ಲಿ ಹರಡಿಕೊಂಡಿದೆ, ಜಪಾನ್ ಇಂಟರ್ನ್ಯಾಷನಲ್ ಕೋ-ಆಪರೇಷನ್ ಏಜೆನ್ಸಿ (JICA) ಯೋಜನಾ ವೆಚ್ಚದ ಶೇ. 84 ರಷ್ಟು ಹಣ ನೀಡುತ್ತಿದೆ ಆದರೆ BWSSB ಮತ್ತು ರಾಜ್ಯ ಸರ್ಕಾರವು ವೆಚ್ಚದ ಶೇ, 8 ರಷ್ಟು ಹಣ ನೀಡುತ್ತಿದೆ.

ಈ ಯೋಜನೆ ಕಾರ್ಯಾರಂಭ ಮಾಡಿದರೆ ಮಹದೇವಪುರ, ರಾಜರಾಜೇಶ್ವರಿ ನಗರ, ಬೊಮ್ಮನಹಳ್ಳಿ, ದಾಸರಹಳ್ಳಿ, ಯಲಹಂಕ, ಕೆಆರ್ ಪುರಂ ಮತ್ತು ಬ್ಯಾಟರಾಯನಪುರ ಗ್ರಾಮಗಳಿಗೆ ದಿನಕ್ಕೆ 775 ದಶಲಕ್ಷ ಲೀಟರ್ ನೀರು ಪೂರೈಕೆಯಾಗುತ್ತದೆ. ಹತ್ತು ಟ್ರಿಲಿಯನ್ ಮಿಲಿಯನ್ ಕ್ಯೂಬಿಕ್ (ಟಿಎಂಸಿ) ಮೀಟರ್ ನೀರು ಸರಬರಾಜಿಗಾಗಿ ಒಂದು ದಶಕದ ಹಿಂದೆ ಈಗಾಗಲೇ ಹಣ ಮಂಜೂರು ಮಾಡಲಾಗಿದೆ.

ಅರ್ಧಕ್ಕಿಂತ ಹೆಚ್ಚು ಹಳ್ಳಿಗಳಿಗೆ ವಾರಕ್ಕೊಮ್ಮೆ ಅಥವಾ ವಾರಕ್ಕೆ ಎರಡು ಬಾರಿ ನೀರು ಸರಬರಾಜು ಮಾಡಲಾಗುತ್ತಿದೆ. ನಾವು ಅದನ್ನು ಕಮಿಷನ್ ಮಾಡಿದ ನಂತರ, ಅವರಿಗೆ ನಿಯಮಿತವಾಗಿ ನೀರು ಸರಬರಾಜು ಮಾಡಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದರು.

ಯೋಜನೆಯು ಹಲವಾರು ಸಮಸ್ಯೆಗಳನ್ನು ಎದುರಿಸಿತು,  ಉಕ್ರೇನ್ ಮತ್ತು ರಷ್ಯಾ ಸ್ಟ್ಯಾಂಡ್-ಆಫ್ ಪೂರೈಕೆ ಸರಪಳಿಗೆ ಅಡ್ಡಿಪಡಿಸಿತು, ಭಾರೀ ಮಳೆಯಿಂದ ಯೋಜನಾ ಸೈಟ್ ಪ್ರವಾಹಕ್ಕೆ ಒಳಪಡಿಸಿತು. ಭೀಮಾ ನದಿಯ ಉಕ್ಕಿ ಹರಿಯುವಿಕೆಯಿಂದ ಅದರ ಆರಂಭಿಕ ಪೂರ್ಣಗೊಳಿಸುವಿಕೆಯ ಮೇಲೆ ಪರಿಣಾಮ ಬೀರಿದೆ.

ನೀರನ್ನು ಸಂಗ್ರಹಿಸುವ ಒಂಬತ್ತು ನೆಲಮಟ್ಟದ ಜಲಾಶಯಗಳನ್ನು ನಿರ್ಮಿಸಲಾಗುತ್ತಿದೆ. ತೊರೆಕಾಡನಹಳ್ಳಿ (ಟಿಕೆ ಹಳ್ಳಿ) ಹಾರೋಹಳ್ಳಿ ಮತ್ತು ತಾತಗುಣಿ ನೀರು ಸರಬರಾಜು ಮಾರ್ಗದಲ್ಲಿ ತಲಾ ಒಂದು ಹೊಸ ಪಂಪಿಂಗ್ ಸ್ಟೇಷನ್‌ಗಳನ್ನು ಹೊಂದಲಿದೆ. ಉಳಿದ ಆರು ಜಿಎಲ್‌ಆರ್‌ಗಳನ್ನು ಗೊಟ್ಟಿಗೆರೆ, ದೊಡ್ಡಕನಹಳ್ಳಿ, ಕಾಡುಗೋಡಿ, ಎಸ್‌ಎಂವಿ ಲೇಔಟ್ VIನೇ ಬ್ಲಾಕ್, ಲಿಂಗದೀರನಹಳ್ಳಿ ಮತ್ತು ಸಿಂಗಾಪುರದಲ್ಲಿ ನಿರ್ಮಿಸಲಾಗುತ್ತಿದೆ ಎಂದು ವಿವರಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com