ಅಂಜನಾದ್ರಿಯಲ್ಲಿ ಮೊಳಗಿದ ಹನುಮನ ಜಪ: ಲಕ್ಷಾಂತರ ಭಕ್ತರಿಂದ ಮಾಲೆ ವಿಸರ್ಜನೆ

ಹನುಮ ಜಯಂತಿ ಹಿನ್ನೆಲೆಯಲ್ಲಿ ಪ್ರಸಿದ್ಧ ಅಂಜನಾದ್ರಿಯಲ್ಲಿ ಮಧ್ಯರಾತ್ರಿಯಿಂದಲೇ ಹನುಮ ಭಕ್ತರ ದಂಡು ದಾಂಗುಡಿ ಇಟ್ಟಿದ್ದು, ಅಂಜನಿಸುತನ ದರ್ಶನ ಪಡೆದು ಮಾಲೆ ವಿಸರ್ಜನೆ ಮಾಡುತ್ತಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಗಂಗಾವತಿ: ಹನುಮ ಜಯಂತಿ ಹಿನ್ನೆಲೆಯಲ್ಲಿ ಪ್ರಸಿದ್ಧ ಅಂಜನಾದ್ರಿಯಲ್ಲಿ ಮಧ್ಯರಾತ್ರಿಯಿಂದಲೇ ಹನುಮ ಭಕ್ತರ ದಂಡು ದಾಂಗುಡಿ ಇಟ್ಟಿದ್ದು, ಅಂಜನಿಸುತನ ದರ್ಶನ ಪಡೆದು ಮಾಲೆ ವಿಸರ್ಜನೆ ಮಾಡುತ್ತಿದ್ದಾರೆ.

ಅಯ್ಯಪ್ಪ ಸ್ವಾಮಿಯ ಭಕ್ತರಂತೆ ಅಂಜನಾದ್ರಿಯ ಆಂಜನೇಯನ ಭಕ್ತರು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಇಂದು ಇಡೀ ಅಂಜನಾದ್ರಿ ಕೇಸರಿಮಯವಾಗಿದೆ. ಇಡೀ ಬೆಟ್ಟವನ್ನು ದೀಪಗಳಿಂದ ಅಲಂಕರಿಸಲಾಗಿದೆ. ಇಂದು ಎಲ್ಲಿ ನೋಡಿದರೂ ಹನುಮಮಾಲಾಧಾರಿಗಳೇ ಕಾಣಸಿಗುತ್ತಿದ್ದಾರೆ.

ಸುಮಾರು 1 ಲಕ್ಷಕ್ಕೂ ಹೆಚ್ಚು ಮಂದಿ ಹನುಮಮಾಲಾಧಾರಿಗಳು ಅಂಜನಾದ್ರಿಗೆ ಬರುವ ನಿರೀಕ್ಷಿಯಿದ್ದು, ಭಕ್ತರನ್ನು ನಿಭಾಯಿಸಲು ಜಿಲ್ಲಾಡಳಿತ ಮಂಡಳಿ ಸಕಲ ಸಿದ್ಥತೆಗಳನ್ನು ಮಾಡಿಕೊಂಡಿದೆ. ಯಾವುದೇ ಭಕ್ತರಿಗೆ ಆರೋಗ್ಯ ಸಮಸ್ಯೆಗಳು ಕಂಡುಬಂದಲ್ಲಿ ತಕ್ಷಣ ಚಿಕಿತ್ಸೆ ನೀಡಲು ವಿವಿಧ ಭಾಗಗಳಲ್ಲಿ ವೈದ್ಯಕೀಯ ಶಿಬಿರಗಳನ್ನು ಸ್ಥಾಪಿಸಿದ್ದಾರೆ. ಕುಡಿಯುವ ನೀರಿನ ವ್ಯವಸ್ಥೆ, ವಾಹನ ನಿಲುಗಡೆ, ಸಹಾಯವಾಣಿ ಕೇಂದ್ರಗಳ ವ್ಯವಸ್ಥೆಗಳನ್ನು ಆರಂಭಿಸಿದ್ದಾರೆ.

ಅಂಜನಾದ್ರಿ ಬೆಟ್ಟದ ಮೇಲಿನ ವಿವಿಧ ತಾಣಗಳ ಬಗ್ಗೆ ತಿಳಿದುಕೊಳ್ಳಲು ಭಕ್ತರು ಹಲವಾರು ಸ್ಥಳಗಳಲ್ಲಿ ಇರಿಸಲಾಗಿರುವ ಕ್ಯೂಆರ್ ಕೋಡ್‌ಗಳನ್ನು ಬಳಸಬಹುದಾಗಿದೆ.

ಹನುಮ ಮಾಲಾ ಕಾರ್ಯಕ್ರಮದ ವೇಳೆ ನಿಗಾ ವಹಿಸಲು ಕೊಪ್ಪಳ ಜಿಲ್ಲಾ ಪೊಲೀಸರು 2 ಎಎಸ್'ಪಿ, 6 ಡಿಎಸ್'ಪಿ, 62 ಪಿಎಸ್ಐ, 94 ಎಎಸ್ಐ, 967 ಹೆಡ್ ಕಾನ್‌ಸ್ಟೆಬಲ್‌ಗಳು, 500 ಗೃಹ ರಕ್ಷಕರು, 12 ಡಿಎಆರ್, 5 ಐಆರ್'ಬಿ ಮತ್ತು ಇತರ ಸಿಬ್ಬಂದಿಗಳನ್ನು ನಿಯೋಜಿಸಿದ್ದಾರೆ.

ಕೊಪ್ಪಳ ಜಿಲ್ಲಾಡಳಿತದ ಅಧಿಕಾರಿಯೊಬ್ಬರು ಮಾತನಾಡಿ, ಶುಕ್ರವಾರ ರಾತ್ರಿಯಿಂದ ಶನಿವಾರದವರೆಗೆ ಲಕ್ಷಾಂತರ ಭಕ್ತರು ಅಂಜನಾದ್ರಿಗೆ ಭೇಟಿ ನೀಡುವ ನಿರೀಕ್ಷೆಯಿದೆ. ವಾರಾಂತ್ಯವಾಗಿರುವ ಹಿನ್ನೆಲೆಯಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.

ಏನಿದು ಹನುಮ ಮಾಲೆ ಧಾರಣೆ?
ದತ್ತೆ ಮಾಲೆ, ಅಯ್ಯಪ್ಪ ಮಾಲೆ ಹಾಕುವುದನ್ನು ಕೇಳಿದ್ದೇವೆ. ಆದರೆ, ಏನಿದು ಹನುಮ ಮಾಲೆ?...ಕಳೆದ ಕೆಲ ವರ್ಷಗಳಿಂದ ಹನು ಮಾಲೆ ಧರಿಸುವವರ ಸಂಖ್ಕೆಯಲ್ಲಿ ಬೆಳೆಯುತ್ತಿದೆ. ಲಕ್ಷ ಲಕ್ಷ ಭಕ್ತರು ಹನುಮಮಾಲೆ ಧರಿಸುತ್ತಿರುವುದರಿಂದ ಅಂಜನಾದ್ರಿ ಹನುಮಮಾಲೆ ಈಗ ದೇಶ ವ್ಯಾಪಿಯಾಗುತ್ತಿದೆ.

2007ರಲ್ಲಿ ಹನುಮಮಾಲೆ ಧರಿಸುವ ಪದ್ಧತಿ ಆರಂಭವಾಯಿತು. ಕೇವಲ 7 ಮಂದಿ ಭಕ್ತರು ಗಂಗಾವತಿಯಲ್ಲಿ ಹನುಮಮಾಲೆ ಹಾಕುವ ಮೂಲಕ ಸಂಪ್ರದಾಯ ಆರಂಭಿಸಿದ್ದರು. ಅಲ್ಲಿಂದ ಶುರುವಾಗಿದ್ದು, ಈಗ ಲಕ್ಷ ಲಕ್ಷ ಮಂದಿ ಭಕ್ತರು ಹನುಮಮಾಲೆ ಧರಿಸುತ್ತಿದ್ದಾರೆ. ಆಂಜನೇಯ ವ್ರತ ಮಾಡಿ, ಪೂರ್ಣಗೊಳಿಸಿದ ಧ್ಯೋತಕವಾಗಿ ಹನುಮಮಾಲಾಧಾರಣೆ ಮಾಡಲಾಗುತ್ತದೆ. ವ್ರತ ಪೂರ್ಣಗೊಳಿಸಿದ ನಕ್ಷತ್ರದ ಆಧಾರದ ಮೇಲೆ ಪ್ರತಿ ವರ್ಷ ವಿಸರ್ಜನೆ ಕಾರ್ಯಕ್ರಮ ನಡೆಯುತ್ತದೆ. 41, 21, 18, 9, 3 ಹಾಗೂ ಒಂದು ದಿನ ಕೂಡ ಹನುಮ ಮಾಲೆ ಧರಿಸುವವರು ಇದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com