ಹಿಜಾಬ್ ವಿವಾದ: ಸಿದ್ದರಾಮಯ್ಯ ಯಾವುದೋ ಒಂದು ಪಂಗಡದ ಮುಖ್ಯಮಂತ್ರಿಯಲ್ಲ- ಪೇಜಾವರ ಶ್ರೀ

ಸಿದ್ದರಾಮಯ್ಯ ಅವರು ಯಾವುದೋ ಒಂದು ಪಂಗಡದ ಮುಖ್ಯಮಂತ್ರಿಯಲ್ಲ. ಇಡೀ ರಾಜ್ಯದ ಸಿಎಂ ಆಗಿದ್ದಾರೆ. ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು ಹೇಳಿದ್ದಾರೆ.
ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು
ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು
Updated on

ಬೆಳಗಾವಿ: ಸಿದ್ದರಾಮಯ್ಯ ಅವರು ಯಾವುದೋ ಒಂದು ಪಂಗಡದ ಮುಖ್ಯಮಂತ್ರಿಯಲ್ಲ. ಇಡೀ ರಾಜ್ಯದ ಸಿಎಂ ಆಗಿದ್ದಾರೆ. ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು ಹೇಳಿದ್ದಾರೆ.

ಹಿಜಾಬ್ ನಿಷೇಧ ಆದೇಶ ವಾಪಸ್ ಪಡೆಯುತ್ತೇವೆ ಎಂಬ ಸಿಎಂ ಹೇಳಿಕೆ ವಿಚಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಶ್ರೀಗಳು, ಅದು ಸಮಾಜದಲ್ಲಿ ಒಂದು ಪಂಗಡವನ್ನು ಗುರಿಯಾಗಿರಿಸಿಕೊಂಡು, ಒಬ್ಬರಿಗೆ ಒಂದು ನ್ಯಾಯ ಇನ್ನೊಬ್ಬರಿಗೆ ಒಂದು ನ್ಯಾಯ, ಒಬ್ಬರಿಗೆ ಒಂದು ಕಾನೂನು, ಇನ್ನೊಬ್ಬರಿಗೆ ಒಂದು ಕಾನೂನು ಮಾಡುವದು ಸರಿಯಲ್ಲ ಎಂದು ಹೇಳಿದರು.

“ಸಿದ್ದರಾಮಯ್ಯ ಅವರು ಕರ್ನಾಟಕದ ಎಲ್ಲರ ಮುಖ್ಯಮಂತ್ರಿ ಅವರು ಆಗಿದ್ದಾರೆಯೇ ಹೊರತು ಯಾವುದೇ ಒಂದು ಪಂಗಡದ ಸಿಎಂ ಅಲ್ಲ. ಇಂತಹ ನಡವಳಿಕೆ ಸಮಾಜದಲ್ಲಿ ಗೊಂದಲಕ್ಕೆ ಕಾರಣವಾಗುತ್ತದೆ. ಮೊನ್ನೆ ಪರೀಕ್ಷೆ ಬರೆಯುವಾಗ ಹಿಂದೂಗಳಾದವರು ಕಾಲುಂಗರ, ತಾಳಿ ತೆಗೆಯಬೇಕು ಎಂಬ ಆದೇಶ ಬಂದಿತ್ತು. ಒಂದು ಕಡೆ ಹೀಗಾದರೆ, ಮತ್ತೊಂದು ಪಂಗಡದವರಿಗೆ ಮುಸುಕುಧಾರಿಗಳು ಆಗಿ ಹೋಗಬಹುದು ಎನ್ನುತ್ತಾರೆ. ಇದನ್ನು ಯಾರೂ ಮಾಡಬಾರದು.  ಸಿಎಂ ಈ ರೀತಿ ಆಡಳಿತ ನಡೆಸಬಾರದು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com