ಬೆಂಗಳೂರಿನಲ್ಲಿ ಇಸ್ರೋ ವಿಜ್ಞಾನಿಗೆ ವಂಚನೆ: ಇಬ್ಬರು ಯುವಕರ ಜಾಮೀನು ಅರ್ಜಿ ವಜಾ

ಅನ್ನದಾಸೋಹಕ್ಕೆ (ಲಂಗರ್) ದೇಣಿಗೆ ನೀಡುವ ನೆಪದಲ್ಲಿ ಬೆಂಗಳೂರಿನಲ್ಲಿ ಇಸ್ರೋದಲ್ಲಿ ಕೆಲಸ ಮಾಡುತ್ತಿದ್ದ ವಿಜ್ಞಾನಿಯೊಬ್ಬರಿಗೆ ವಂಚಿಸಿದ ಆರೋಪದ ಮೇಲೆ ದೆಹಲಿ ಮೂಲದ ಇಬ್ಬರು ಯುವಕರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸಿಟಿ ಕೋರ್ಟ್ ತಿರಸ್ಕರಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಅನ್ನದಾಸೋಹಕ್ಕೆ (ಲಂಗರ್) ದೇಣಿಗೆ ನೀಡುವ ನೆಪದಲ್ಲಿ ಬೆಂಗಳೂರಿನಲ್ಲಿ ಇಸ್ರೋದಲ್ಲಿ ಕೆಲಸ ಮಾಡುತ್ತಿದ್ದ ವಿಜ್ಞಾನಿಯೊಬ್ಬರಿಗೆ ವಂಚಿಸಿದ ಆರೋಪದ ಮೇಲೆ ದೆಹಲಿ ಮೂಲದ ಇಬ್ಬರು ಯುವಕರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸಿಟಿ ಕೋರ್ಟ್ ತಿರಸ್ಕರಿಸಿದೆ. ಪಶ್ಚಿಮ ದೆಹಲಿಯಲ್ಲಿ ನೆಲೆಸಿರುವ ಕುಲದೀಪ್ ಸಿಂಗ್ (25) ಮತ್ತು ಗುರುಪ್ರೀತ್ ಸಿಂಗ್ (24) ಆರೋಪಿಗಳು. ಈ ಸಂಬಂಧ ವಿಜ್ಞಾನಿ ನೀಡಿದ ದೂರಿನ ಆಧಾರದ ಮೇಲೆ ಮಾರತಹಳ್ಳಿ ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಅಪರಾಧವನ್ನು ದಾಖಲಿಸಿಕೊಂಡಿದ್ದಾರೆ.

ಆಗಸ್ಟ್ 17, 2023 ರಂದು ಸಿಖ್ ಸಮುದಾಯದ ಅಪರಿಚಿತ ವ್ಯಕ್ತಿಯೊಬ್ಬರು ಲಂಗರ್ ಗೆ ದೇಣಿಗೆ ಕೋರಿ ವಿಜ್ಞಾನಿಯ ನಿವಾಸಕ್ಕೆ ಬಂದಿದ್ದಾರೆ. ಆದರೆ ದೂರುದಾರರು ಪಾವತಿಸಲು ನಿರಾಕರಿಸಿದರು. ನಂತರ, ವಿಜ್ಞಾನಿ ತನ್ನ ಮೊಬೈಲ್ ಫೋನ್‌ನ ಕೀಪ್ಯಾಡ್ ನ್ನು ಅನ್ಲಾಕ್ ಮಾಡುತ್ತಿರುವುದನ್ನು ನೋಡಿದ ಆರೋಪಿಗಳು ದೂರುದಾರರಿಗೆ ಕುಡಿಯುವ ನೀರು ನೀಡುವಂತೆ ಮನವಿ ಮಾಡಿದ್ದಾರೆ. ದೂರುದಾರರು ನೀರು ಪಡೆಯಲು ಒಳಗೆ ಹೋದಾಗ,ಅವರ ಮೊಬೈಲ್ ಫೋನ್ ಪಡೆದ ಆರೋಪಿಗಳು 41,800 ರೂ ದೋಚಿದ್ದರು.  ನಂತರ ಆಗಸ್ಟ್ 18 ರಂದು, ವಿಜ್ಞಾನಿ ರಾಷ್ಟ್ರೀಯ ಸೈಬರ್ ಕ್ರೈಂಗೆ ದೂರು ಸಲ್ಲಿಸಿದ್ದರು. 

ಆರೋಪಿಗಳು ತಾವು ನಿರಪರಾಧಿಗಳು, ದೂರುದಾರರು ಸ್ವಯಂ ಪ್ರೇರಿತವಾಗಿ ಹಣವನ್ನು ಕಳುಹಿಸಿದ್ದಾರೆ ಎಂದು ಆರೋಪಿಗಳು ಎಂದು ನ್ಯಾಯಾಲಯದ ಮುಂದೆ ಹೇಳಿಕೊಂಡಿದ್ದಾರೆ. ಆದರೆ  ದೂರುದಾರರು ರಾಷ್ಟ್ರೀಯ ಸೈಬರ್ ಕ್ರೈಮ್ ಪೋರ್ಟಲ್‌ಗೆ ತಕ್ಷಣವೇ ದೂರು ದಾಖಲಿಸಿದ್ದಾರೆ ಮತ್ತು ಸಿಸಿಟಿವಿ ದೃಶ್ಯಾವಳಿಗಳು ಆರೋಪಿಯ ನಿವಾಸದಲ್ಲಿ ಇರುವುದನ್ನು ತೋರಿಸುತ್ತದೆ ಎಂದು ಗಮನಿಸಿದ  64ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶೆ ಎಂಎಸ್ ಕಲ್ಪನಾ ಜಾಮೀನು ಅರ್ಜಿಯನ್ನು ವಜಾಗೊಳಿಸಿದರು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com