ಕಂಬಳ ಆಯ್ತು, ಈಗ ರಾಜಧಾನಿಯಲ್ಲಿ ಹೋರಿ ಬೆದರಿಸುವ ಸ್ಪರ್ಧೆ ಆಯೋಜಿಸಲು ಚಿಂತನೆ

ರಾಜಧಾನಿ ಬೆಂಗಳೂರಿನಲ್ಲಿ ಕಂಬಳ ನಂತರ ಈಗ ಹಾವೇರಿ ಮತ್ತು ಶಿವಮೊಗ್ಗ ಭಾಗದಲ್ಲಿ ಜನಪ್ರಿಯವಾಗಿರುವ ಗ್ರಾಮೀಣ ಕ್ರೀಡೆ ಕೊಬ್ಬರಿ ಹೋರಿ ಬೆದರಿಸುವ ಸ್ಪರ್ಧೆ ಆಯೋಜಿಸಲು ಸಂಘಟಕರು ಮುಂದಾಗಿದ್ದು, ಈ ಸಂಬಂಧ ರಾಜ್ಯ ಸರ್ಕಾರಕ್ಕೆ....
'ಸ್ಪೀಡ್ ಕಿಂಗ್' ಎಂಬ ವಿಜೇತ ಗೂಳಿಯ ಪೋಸ್; ಇತ್ತೀಚೆಗೆ ಹಾವೇರಿಯಲ್ಲಿ ನಡೆದ ಕೊಬ್ರಿ ಹೋರಿ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲು ಅಪಾರ ಜನಸ್ತೋಮ ನೆರೆದಿತ್ತು. (Photo | Express)
'ಸ್ಪೀಡ್ ಕಿಂಗ್' ಎಂಬ ವಿಜೇತ ಗೂಳಿಯ ಪೋಸ್; ಇತ್ತೀಚೆಗೆ ಹಾವೇರಿಯಲ್ಲಿ ನಡೆದ ಕೊಬ್ರಿ ಹೋರಿ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲು ಅಪಾರ ಜನಸ್ತೋಮ ನೆರೆದಿತ್ತು. (Photo | Express)

ಹುಬ್ಬಳ್ಳಿ: ರಾಜಧಾನಿ ಬೆಂಗಳೂರಿನಲ್ಲಿ ಕಂಬಳ ನಂತರ ಈಗ ಹಾವೇರಿ ಮತ್ತು ಶಿವಮೊಗ್ಗ ಭಾಗದಲ್ಲಿ ಜನಪ್ರಿಯವಾಗಿರುವ ಗ್ರಾಮೀಣ ಕ್ರೀಡೆ ಕೊಬ್ಬರಿ ಹೋರಿ ಬೆದರಿಸುವ ಸ್ಪರ್ಧೆ ಆಯೋಜಿಸಲು ಸಂಘಟಕರು ಮುಂದಾಗಿದ್ದು, ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದ್ದಾರೆ.

ರಾಜ್ಯದ ವಿವಿಧ ಬೃಹತ್ ಕೊಬ್ಬರಿ ಹೋರಿ ಕ್ರೀಡೆಗೆ ಕೇಂದ್ರ ಸ್ಥಾನವಾಗಿರುವ ಹಾವೇರಿಯ ಹಾನಗಲ್‌ನ ಆಯೋಜಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಸಂಬಂಧ ಮನವಿ ಪತ್ರ ಸಲ್ಲಿಸಲಿದ್ದಾರೆ. ಬೆಂಗಳೂರಿನ ಹೆಚ್ಚಿನ ಪ್ರೇಕ್ಷಕರಿಗೆ ಗ್ರಾಮೀಣ ಕ್ರೀಡೆಗಳನ್ನು ಪ್ರದರ್ಶಿಸಲು ಇದು ಒಂದು ಅನನ್ಯ ಅವಕಾಶ ಎಂದು ಸಂಘಟಕರು ಹೇಳಿದ್ದಾರೆ.

ಸರ್ಕಾರ ಕಂಬಳ ಕ್ರೀಡಾ ಸಂಘಟಕರನ್ನು ಬೆಂಗಳೂರಿಗೆ ಆಹ್ವಾನಿಸಿದ ನಂತರ, ನಾವೂ ಬೆಂಗಳೂರಿನಲ್ಲಿ ಕಾರ್ಯಕ್ರಮ ಆಯೋಜಿಸಲು ಯೋಚಿಸಿದ್ದೇವೆ. ಬೆಂಗಳೂರಿನಲ್ಲಿ ಸಣ್ಣದೊಂದು ಸೆಟ್‌ಅಪ್‌ ಮಾಡಿ, ಅಲ್ಲಿ ಗ್ರಾಮೀಣ ಕ್ರೀಡೆಗಳ ಸಾರವನ್ನು ಜನ ವೀಕ್ಷಿಸಬಹುದು ಎಂದಿದ್ದಾರೆ.

ಕೊಬ್ಬರಿ ಹೋರಿ, ಇದು ಅಲಂಕೃತ ಹೋರಿಗಳನ್ನು ಬಳಸಿ ಆಡುವ ಗ್ರಾಮೀಣ ಕ್ರೀಡೆಯಾಗಿದೆ. ಕೆರಳಿದ ಗೂಳಿಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆ ಓಡುವಂತೆ ಮಾಡಲಾಗುತ್ತದೆ ಮತ್ತು ಆಟಗಾರರು ಬಹುಮಾನವನ್ನು ಗೆಲ್ಲಲು ಅದನ್ನು ಹಿಡಿದು ಕೊರಳಿನಿಂದ ತೆಂಗಿನಕಾಯಿ ಹಾರವನ್ನು ಬಿಚ್ಚಬೇಕು. ಇಲ್ಲದಿದ್ದರೆ ಗೂಳಿ ಮಾಲೀಕರು ಬಹುಮಾನವನ್ನು ಪಡೆಯುತ್ತಾರೆ. ಬಹುಮಾನಗಳು ಚಿನ್ನದ ಆಭರಣಗಳು, ದ್ವಿಚಕ್ರ ವಾಹನಗಳು ಮತ್ತು ಕಾರುಗಳನ್ನು ಒಳಗೊಂಡಿರುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com