ವಂದೇ ಭಾರತ್ ಪ್ರಾಯೋಗಿಕ ಪರೀಕ್ಷೆ: ಬೆಂಗಳೂರಿನಿಂದ ಕೊಯಮತ್ತೂರಿಗೆ 6 ಗಂಟೆ 2 ನಿಮಿಷದಲ್ಲಿ ಸಂಚಾರ

ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ಬೆಂಗಳೂರಿನ ಕಂಟೋನ್ಮೆಂಟ್ ರೈಲು ನಿಲ್ದಾಣ ಮತ್ತು  ಕೊಯಮತ್ತೂರು ಜಂಕ್ಷನ್ ನಡುವೆ ಬುಧವಾರ ಪ್ರಾಯೋಗಿಕ ಸಂಚಾರವನ್ನು ಯಶಸ್ವಿಯಾಗಿ ನಡೆಸಿದೆ.
ವಂದೇ ಭಾರತ್ ಎಕ್ಸ್‌ಪ್ರೆಸ್
ವಂದೇ ಭಾರತ್ ಎಕ್ಸ್‌ಪ್ರೆಸ್

ಬೆಂಗಳೂರು: ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ಬೆಂಗಳೂರಿನ ಕಂಟೋನ್ಮೆಂಟ್ ರೈಲು ನಿಲ್ದಾಣ ಮತ್ತು  ಕೊಯಮತ್ತೂರು ಜಂಕ್ಷನ್ ನಡುವೆ ಬುಧವಾರ ಪ್ರಾಯೋಗಿಕ ಸಂಚಾರವನ್ನು ಯಶಸ್ವಿಯಾಗಿ ನಡೆಸಿದೆ.

ವಂದೇ ಭಾರತ್ ರೈಲು ಕೊಯಮತ್ತೂರಿನಿಂದ ಬೆಂಗಳೂರಿಗೆ ಬರಲು, ಒಟ್ಟು 380-ಕಿಮೀ ದೂರವನ್ನು 5 ಗಂಟೆ 38 ನಿಮಿಷಗಳನ್ನು ತೆಗೆದುಕೊಂಡಿತು ಮತ್ತು ಬೆಂಗಳೂರು ಕಂಟೋನ್ಮೆಂಟ್‌ನಿಂದ ಹಿಂತಿರುಗುವ ಸಮಯದಲ್ಲಿ 6 ಗಂಟೆ 2 ನಿಮಿಷಗಳನ್ನು ತೆಗೆದುಕೊಂಡಿದೆ.

ಶೀಘ್ರದಲ್ಲೇ ಮೊದಲ ವಾಣಿಜ್ಯ ಸಂಚಾರ ಆರಂಭವಾಗಲಿದೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ವರ್ಚುವಲ್ ಮೂಲಕ ಬೆಂಗಳೂರು - ಕೊಯಮತ್ತೂರು ವಂದೇ ಭಾರತ್ ರೈಲಿಗೆ ಚಾಲನೆ ನೀಡಲಿದ್ದಾರೆ.

“ರೈಲು ಕೊಯಮತ್ತೂರಿನಿಂದ ಬೆಳಗ್ಗೆ 5 ಗಂಟೆಗೆ ಹೊರಟಿತು ಮತ್ತು ದಕ್ಷಿಣ ರೈಲ್ವೆ ಹಾಗೂ ನೈಋತ್ಯ ರೈಲ್ವೆ ಎರಡೂ ವಲಯಗಳ ರೈಲ್ವೆ ಅಧಿಕಾರಿಗಳೊಂದಿಗೆ 10.38ಕ್ಕೆ ಬೆಂಗಳೂರು ತಲುಪಿತು. ವಾಪಸ್ ಬೆಂಗಳೂರಿನಿಂದ ಮಧ್ಯಾಹ್ನ 1.40ಕ್ಕೆ ಹೊರಟು ರಾತ್ರಿ 7.42ಕ್ಕೆ ಕೊಯಮತ್ತೂರು ತಲುಪಿತು. ಪ್ರಯಾಣ ದರದ ವಿವರಗಳು ಇನ್ನಷ್ಟೇ ಅಂತಿಮಗೊಳ್ಳಬೇಕಿದೆ. ತಿರುಪ್ಪೂರ್, ಈರೋಡ್, ಸೇಲಂ, ಧರ್ಮಪುರಿ ಮತ್ತು ಹೊಸೂರಿನಲ್ಲಿ ತಾತ್ಕಾಲಿಕ ನಿಲುಗಡೆ ಇದೆ" ಎಂದು ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಬಿ ಗುಗನೇಸನ್ ಅವರು ತಿಳಿಸಿದ್ದಾರೆ.

ನಿಖರವಾದ ಪ್ರಯಾಣ ದರ ಮತ್ತು ಸಮಯವನ್ನು ಶೀಘ್ರದಲ್ಲೇ ತಿಳಿಸಲಾಗುವುದು ಎಂದು ಬೆಂಗಳೂರು ವಿಭಾಗದ ಹಿರಿಯ ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com