ಬೆಂಗಳೂರು: ಜನವರಿ 5ರಿಂದ 9ರವರೆಗೆ 'ಅವರೆಬೇಳೆ ಮೇಳ': ಗರ್ಭಿಣಿಯರಿಗೆ, ಹಿರಿಯ ನಾಗರಿಕರಿಗೆ ಪ್ರತ್ಯೇಕ ಕೌಂಟರ್

ವಾಡಿಕೆಯಂತೆ ಈ ಸಲವೂ ಹೊಸ ವರ್ಷಾರಂಭದಲ್ಲೇ ಬೆಂಗಳೂರಿಗರಿಗೆ ಅವರೆಬೇಳೆ ರುಚಿವೈವಿಧ್ಯ ಸವಿಯುವ ಅವಕಾಶ ಸಿಗಲಿದೆ. ಶ್ರೀವಾಸವಿ ಕಾಂಡಿಮೆಂಟ್ಸ್ ಆಯೋಜಿಸುವ ಅವರೆಬೇಳೆ ಮೇಳ  ಜನವರಿ 5 ರಿಂದ 9ರ ತನಕ ನಡೆಯಲಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ವಾಡಿಕೆಯಂತೆ ಈ ಸಲವೂ ಹೊಸ ವರ್ಷಾರಂಭದಲ್ಲೇ ಬೆಂಗಳೂರಿಗರಿಗೆ ಅವರೆಬೇಳೆ ರುಚಿವೈವಿಧ್ಯ ಸವಿಯುವ ಅವಕಾಶ ಸಿಗಲಿದೆ. ಶ್ರೀವಾಸವಿ ಕಾಂಡಿಮೆಂಟ್ಸ್ ಆಯೋಜಿಸುವ ಅವರೆಬೇಳೆ ಮೇಳ  ಜನವರಿ 5 ರಿಂದ 9ರ ತನಕ ನಡೆಯಲಿದೆ.

ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ 24ನೇ ವರ್ಷದ ಅವರೆಬೇಳೆ ಮೇಳ ನಡೆಯಲಿದ್ದು, ಬೆಂಗಳೂರಿಗರಿಗೆ ಅವರೆಬೇಳೆಯ ವಿವಿಧ ಭಕ್ಷ್ಯಗಳನ್ನು ಸವಿಯುವ ಅವಕಾಶ ದೊರೆಯಲಿದೆ.

ಕೋವಿಡ್ ಸಂಕಷ್ಟ ಎದುರಾಗುವ ಮೊದಲು ಅವರೆ ಬೇಳೆ ಮೇಳ ವಿವಿ ಪುರಂನ ಫುಡ್‌ ಸ್ಟ್ರೀಟ್‌ನಲ್ಲೇ ನಡೆಯುತ್ತಿತ್ತು. ವಿವಿ ಪುರಂ ಫುಡ್‌ ಸ್ಟ್ರೀಟ್ ಈಗ ನವೀಕರಣಕ್ಕೆ ಒಳಗಾಗಿದ್ದು, ಅಲ್ಲಿ ಜನದಟ್ಟಣೆ ನಿರ್ವಹಿಸುವುದು ಕಷ್ಟ ಎಂಬ ಕಾರಣಕ್ಕೆ ಕಳೆದ ಜನವರಿಯಲ್ಲಿ ಅವರೆಬೇಳೆ ಮೇಳವನ್ನು ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆಸಲಾಗಿತ್ತು. ಈ ಸಲವೂ (2024) ನ್ಯಾಷನಲ್ ಕಾಲೇಜು ಮೈದಾನದಲ್ಲೇ ಅವರೆಬೇಳೆ ಮೇಳ ನಡೆಯಲಿದೆ.

ಎರಡು ದಶಕಗಳಿಂದ ಮಾಗಡಿ ತಾಲ್ಲೂಕಿನ ರೈತರಿಂದ ನೇರವಾಗಿ ಅವರೆಕಾಯಿ ಖರೀದಿಸಿ, ಮಧ್ಯವರ್ತಿಗಳನ್ನು ತಪ್ಪಿಸಿ ಅವರಿಗೆ ಹೆಚ್ಚಿನ ಲಾಭವನ್ನು ಮಾಡಿಕೊಡಲು ವಾಸವಿ ಸಂಸ್ಥೆಯು ವಿನೂತನ ಯೋದನೆಗೆ  ಮುಂದಾಗಿದೆ. ಕಳೆದ 24 ವರ್ಷಗಳಿಂದ ವಾಸವಿ ಕಾಂಡಿಮೆಂಟ್ಸ್ ಅವರೆಬೇಳೆಯಿಂದ ಮಾಡಿದ ನೂರಕ್ಕೂ ಹೆಚ್ಚು ತಿಂಡಿಗಳು, ಊಟಗಳು ಮತ್ತು ರುಚಿಕರವಾದ ಭಕ್ಷ್ಯಗಳ ವೈವಿಧ್ಯಮಯ ಶ್ರೇಣಿಯನ್ನು ನೀಡುತ್ತದೆ.

ಹಿರಿಯ ನಾಗರಿಕರು ಮತ್ತು ಗರ್ಭಿಣಿಯರಿಗೆ ಪ್ರವೇಶ ಮತ್ತು ಸೌಕರ್ಯಕ್ಕಾಗಿ  ಪ್ರತ್ಯೇಕ ಕೌಂಟರ್‌ಗಳನ್ನು ಸೇರಿಸುವ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಲೀಕರಾದ ಸ್ವಾತಿ ಕೆ.ಎಸ್. ಮಾಹಿತಿ ನೀಡಿದ್ದಾರೆ. ಕಳೆದ ವರ್ಷ ನ್ಯಾಷನಲ್ ಕಾಲೇಜು ಮೈದಾನದ ಒಂದು ಭಾಗವನ್ನು ಮಾತ್ರ ಮೇಳಕ್ಕೆ ಬಳಸಿಕೊಳ್ಳಲಾಗಿತ್ತು. ಆದರೆ ಈ ವರ್ಷ ಅವರು ಸಂಪೂರ್ಣ ಸ್ಥಳವನ್ನು ಬಳಸಿಕೊಳ್ಳುವುದರೊಂದಿಗೆ ಪಾರ್ಕಿಂಗ್ ಸೌಲಭ್ಯವನ್ನು ಒದಗಿಸಲಾಗುತ್ತಿದೆ. ಇನ್ನು ಕಳೆದ ವರ್ಷ ಸುಮಾರು 40 ಸ್ಟಾಲ್‌ಗಳಿದ್ದರೆ, ಈ ವರ್ಷ ಸುಮಾರು 80 ಸ್ಟಾಲ್‌ಗಳಿವೆ ಎಂದು ಸ್ವಾತಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com